Advertisement
ಸುದ್ದಿಗಳು

ಬಿಜೆಪಿ ಅಭ್ಯರ್ಥಿಗಳ 2ನೇ ಲಿಸ್ಟ್​ನಲ್ಲೂ 7 ಹಾಲಿ ಶಾಸಕರಿಗೆ ಟಿಕೆಟ್ ಮಿಸ್​ | ಯಾರಿಗೆಲ್ಲಾ ಸಿಗಲಿಲ್ಲ ಟಿಕೆಟ್…?

Share

​ಕರ್ನಾಟಕ ವಿಧಾನಸಭಾ ಚುನಾವಣೆಗೆ ಆಡಳಿತ ಪಕ್ಷ ಬಿಜೆಪಿ 2ನೇ ಲಿಸ್ಟ್​ ಬಿಡುಗಡೆ ಮಾಡಿದ್ದು, 23 ಕ್ಷೇತ್ರಕ್ಕೆ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದೆ. ಈ ಲಿಸ್ಟ್​ನಲ್ಲೂ 7 ಹಾಲಿ ಶಾಸಕರಿಗೆ ಟಿಕೆಟ್​ ಕೈತಪ್ಪಿದೆ. ಮೊದಲ ಲಿಸ್ಟ್​ನಲ್ಲೂ 9 ಹಾಲಿ ಶಾಸಕರಿಗೆ ಟಿಕೆಟ್​ ನೀಡಿರಲಿಲ್ಲ. ಮೂಡಿಗೆರೆ ಶಾಸಕ ಎಂಪಿ ಕುಮಾರಸ್ವಾಮಿ, ಹಾವೇರಿ ಶಾಸಕ ನೆಹರೂ ಓಲೇಕಾರ್​ ಸೇರಿದಂತೆ 7 ಹಾಲಿ ಶಾಸಕರಿಗೆ ಟಿಕೆಟ್​ ಕೈತಪ್ಪಿದೆ. ಇನ್ನು ಬಿಜೆಪಿ ಹಿರಿಯ ನಾಯಕ ಜಗದೀಶ್​ ಶೆಟ್ಟರ್​ ಹೆಸರು ಪಟ್ಟಿಯಲ್ಲಿ ಇಲ್ಲದಿರುವುದು ತೀವ್ರ ಕುತೂಹಲ ಕೆರಳಿಸಿದೆ. ಗೋವಿಂದರಾಜ, ಹೆಬ್ಬಾಳ, ಮಹದೇವಪುರ ಕ್ಷೇತ್ರಗಳ ಟಿಕೆಟ್​ ಕೂಡ ಘೋಷಣೆಯಾಗಿಲ್ಲ. ಮಂಗಳವಾರ ಬಾಕಿ ಉಳಿಸಿಕೊಂಡಿದ್ದ 35 ಕ್ಷೇತ್ರಗಳ ಪೈಕಿ  23 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಫೈನಲ್ ಮಾಡಲಾಗಿದೆ. ಇನ್ನೂ 12 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಹೆಸರು ಬಹಿರಂಗವಾಗಿಲ್ಲ.

Advertisement
Advertisement

ಬಿಜೆಪಿ ಮೊದಲ ಪಟ್ಟಿಯನ್ನು ಮಂಗಳವಾರ ರಾತ್ರಿ ಬಿಡುಗಡೆ ಮಾಡಿತ್ತು. ಮೊದಲ ಪಟ್ಟಿಯಲ್ಲಿ 189 ಮಂದಿ ಅಭ್ಯರ್ಥಿಗಳಿಗೆ ಟಿಕೆಟ್ ಘೋಷಿಸಲಾಗಿತ್ತು. ಅದರಲ್ಲಿ 52 ಹೊಸ ಮುಖಗಳಿಗೆ ಟಿಕೆಟ್ ನೀಡಲಾಗಿತ್ತು. ಒಬಿಸಿಯ 32, ಎಸ್​ಸಿ 30, ಎಸ್​ಟಿ 16 ಹಾಗೂ 9 ವೈದ್ಯರು, ನಿವೃತ್ತ ಐಎಎಸ್, ಐಪಿಎಸ್ ಅಧಿಕಾರಿಗಳಿಗೆ ಟಿಕೆಟ್ ನೀಡಲಾಗಿತ್ತು. ಇದೀಗ 2ನೇ ಪಟ್ಟಿಯಲ್ಲಿ 23 ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡಲಾಗಿದೆ.

Advertisement

ಟಿಕೆಟ್ ಫೈನಲ್ ಆಗದ ಕ್ಷೇತ್ರಗಳು: ನಾಗಠಾಣಾ, ಸೇಡಂ, ಮಾನ್ವಿ, ಕೊಪ್ಪಳ, ರೋಣ, ಹುಬ್ಬಳ್ಳಿ ಧಾರವಾಡ ಕೇಂದ್ರ, ಹಗರಿ ಬೊಮ್ಮನಹಳ್ಳಿ, ಶಿವಮೊಗ್ಗ ನಗರ, ಹೆಬ್ಬಾಳ, ಗೋವಿಂದರಾಜನಗರ, ಕೃಷ್ಣರಾಜ, ಮಹದೇವಪುರ, ಕ್ಷೇತ್ರ ಬಾಕಿ ಉಳಿದಿವೆ. ಇದರಲ್ಲೂ ಇಬ್ಬರು ಮಹಿಳೆಯರಿಗೆ ಟಿಕೆಟ್ ನೀಡಲಾಗಿದೆ.

ಟಿಕೆಟ್ ವಂಚಿತ ಹಾಲಿ ಶಾಸಕರು:

Advertisement

ಮೂಡಿಗೆರೆ -ಎಂಪಿ ಕುಮಾರಸ್ವಾಮಿ ಬದಲಿಗೆ ದೀಪಕ್​ ದೊಡ್ಡಯ್ಯಗೆ ಟಿಕೆಟ್​

ಚೆನ್ನಗಿರಿ- ಮಾಡಾಳ್ ವಿರೂಪಾಕ್ಷಪ್ಪ ಬದಲಿಗೆ ಶಿವಕುಮಾರ್​ಗೆ ಟಿಕೆಟ್​

Advertisement

ಬೈಂದೂರು-ಸುಕುಮಾರ್ ಶೆಟ್ಟಿ ಬದಲಿಗೆ ಗುರುರಾಜ್​ಗೆ ಟಿಕೆಟ್​

ಕಲಘಟಗಿ- ನಿಂಬಣ್ಣನವರ್​ ಬದಲಿಗೆ ನಾಗರಾಜ್​ ಛಬ್ಬಿಗೆ ಟಿಕೆಟ್

Advertisement

ಮಾಯಕೊಂಡ- ಎನ್. ಲಿಂಗಣ್- ಬಸವರಾಜ್ ನಾಯ್ಕ್​ಗೆ ಟಿಕೆಟ್ ಸಿಕ್ಕಿದೆ

ದಾವಣಗೆರೆ ಉತ್ತರ :  ಎಸ್ ಎ ರವೀಂದ್ರನಾಥ್ ಬದಲಿಗೆ ನಾಗರಾಜ್​ ಲೋಕಿಕೆರೆಗೆ ಟಿಕೆಟ್​

Advertisement

2ನೇ ಲಿಸ್ಟ್​ನಲ್ಲಿ ಟಿಕೆಟ್​ ಪಡೆದವರು

ದೇವರಹಿಪ್ಪರಗಿ-ಸೋಮನಗೌಡ ಪಾಟೀಲ್

Advertisement

ಬಸವನಬಾಗೇವಾಡಿ -ಎಸ್ .ಕೆ.ಬೆಳ್ಳುಬ್ಬಿ

ಇಂಡಿ-ಕಾಸಗೌಡ ಬಿರಾದಾರ್

Advertisement

ಗುರುಮಿಠಕಲ್-ಲಲಿತ ಅನಪೂರ್

ಬೀದರ್-ಈಶ್ವರ್ ಸಿಂಗ್ ಠಾಕೂರ್

Advertisement

ಭಾಲ್ಕಿ -ಪ್ರಕಾಶ್ ಖಂಡ್ರೆ

ಗಂಗಾವತಿ -ಪರಣ್ಣ ಮುನವಳ್ಳಿ

Advertisement

ಕಲಘಟಗಿ-ನಾಗರಾಜ್ ಛಬ್ಬಿ

ಹಾನಗಲ್-ಶಿವರಾಜ್ ಸಜ್ಜನರ್

Advertisement

ಹಾವೇರಿ -ಗವಿಸಿದ್ದಪ್ಪ ದ್ಯಾಮಣ್ಣ ನವರ್

ಹರಪನಹಳ್ಳಿ-ಕರುಣಾಕರ ರೆಡ್ಡಿ

Advertisement

ದಾವಣಗೆರೆ ಉತ್ತರ-ಲೋಕೀಕೆರೆ ನಾಗರಾಜ್

ದಾವಣಗೆರೆ ದಕ್ಷಿಣ-ಅಜಯ್ ಕುಮಾರ್

Advertisement

ಮಾಯಕೊಂಡ -ಬಸವರಾಜ್ ನಾಯ್ಕ್

ಚನ್ನಗಿರಿ-ಶಿವಕುಮಾರ್

Advertisement

ಬೈಂದೂರು -ಗುರುರಾಜ್ ಗಂಟಿಹೊಳೆ

ಮೂಡಿಗೆರೆ-ದೀಪಕ್ ದೊಡ್ಡಯ್ಯ

Advertisement

ಗುಬ್ಬಿ -ಎಸ್.ಡಿ.ದಿಲೀಪ್ ಕುಮಾರ್

ಶಿಡ್ಲಘಟ್ಟ- ರಾಮಚಂದ್ರ ಗೌಡ

Advertisement

ಕೆಜಿಎಫ್ -ಅಶ್ವಿನಿ ಸಂಪಂಗಿ

ಶ್ರವಣಬೆಳಗೊಳ -ಚಿದಾನಂದ

Advertisement

ಅರಸೀಕೆರೆ-ಜಿ.ಬಿ.ಬಸವರಾಜು

ಹೆಗ್ಗಡದೇವನಕೋಟೆ-ಕೃಷ್ಣ ನಾಯ್ಕ್

Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

Karnataka Weather | 06-05-2024 | ಮೋಡದ ವಾತಾವರಣ | ಅಲ್ಲಲ್ಲಿ ಮಳೆ ಹತ್ತಿರವಾಯ್ತು… |

ಮೇ 7 ರಿಂದ ದಕ್ಷಿಣ ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಗುಡುಗು ಸಹಿತ ಮಳೆ…

16 hours ago

ತಾಪಮಾನದ ಬರೆ…! ಎಳೆ ಅಡಿಕೆ ಬೀಳುತ್ತಿದೆ…! | ಮಳೆ ಬಾರದಿದ್ದರೆ ಸಂಕಷ್ಟ… ಮಳೆ ಬಂದರೂ ಕಷ್ಟ..! |

ಸತತವಾಗಿ ತಾಪಮಾನ 40 ಡಿಗ್ರಿ ದಾಟಿದ ಕಾರಣ ಅಡಿಕೆ ಬೆಳೆಗೆ ಸಮಸ್ಯೆಯಾಗಿದೆ. ಎಳೆ…

2 days ago

Karnataka Weather | 05-05-2024 | ಮೋಡ-ಒಣ ಹವೆ | ಮೇ.6 ನಂತರವೇ ಉತ್ತಮ ಮಳೆ |

ಮೇ 6 ಅಥವಾ 7ರಿಂದ ದಕ್ಷಿಣ ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಮಳೆಯ ಮುನ್ಸೂಚನೆ…

2 days ago

Karnataka Weather | 04-05-2024 | ರಾಜ್ಯದಲ್ಲಿ ಬಿಸಿಲು-ಮೋಡದ ವಾತಾವರಣ | ಮೇ 6 ರಿಂದ ಮುಂಗಾರು ಪೂರ್ವ ಮಳೆ ಆರಂಭ

ಮೇ 6 ರಿಂದ ಕೊಡಗು ಹಾಗೂ ದಕ್ಷಿಣ ಕರಾವಳಿ, ಚಿಕ್ಕಮಗಳೂರು ಭಾಗಗಳಲ್ಲಿ ಮತ್ತೆ…

3 days ago

ಕೊಕೋ ಧಾರಣೆ ಇಳಿಕೆ | ಒಮ್ಮೆಲೇ ಕುಸಿತ ಕಂಡ ಕೊಕೋ ಧಾರಣೆ |

ಕೊಕೋ ಧಾರಣೆಯಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ.

3 days ago