ಹೆಚ್ಚಿನ ಸಂಖ್ಯೆಯ ಜನರಿಗೆ ತಮ್ಮ ದಿನ ಶುರುವಾಗುವುದೇ ಬಿಸಿ ಬಿಸಿ ಚಾ ಅಥವಾ ಕಾಫಿ ಕುಡಿಯುವುದರಿಂದ. ವೈದ್ಯ ಲೋಕದ ಪ್ರಕಾರ ಚಾ ಕುಡಿಯುವುದರಿಂದಲೂ ಬ್ಲಾಕ್ ಕಾಫಿ ಕುಡಿಯುವುದೇ ತುಂಬಾ ಉತ್ತಮ. ಬ್ಲಾಕ್ ಕಾಫಿ ಕುಡಿಯುವುದರಿಂದ ಯಕೃತ್ತಿನ ಕಾರ್ಯವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ವೈದ್ಯಕೀಯ ಅಧ್ಯಯನವು ತಿಳಿಸಿಕೊಟ್ಟಿದೆ. ಇನ್ನು ಕೆಲವು ಆರೋಗ್ಯಕರ ವಿಷಯಗಳಿವೆ ಅವುಗಳೆಂದರೆ:
- ಇದು ದೇಹ ಚಯಾಪಚಯ ಕ್ರೀಯೆಯನ್ನು ಗಣನೀಯವಾಗಿ ಹೆಚ್ಚಿಸುತ್ತದೆ. ಇದರಿಂದ ದೇಹ ವಿಶ್ರಾಂತಿಯಿಂದ ಕ್ಯಾಲೋರಿಗಳನ್ನು ಸುಡಲು ಪ್ರಾರಂಭಿಸುತ್ತದೆ. ಇದರಿಂದ ಕೊಬ್ಬು ಕರಗಿಸಲು ಸಹಾಕಾರಿಯಾಗುತ್ತದೆ.
- ಬ್ಲಾಕ್ ಕಾಫಿ ಜೀರ್ಣಾಂಗ ವ್ಯವಸ್ಥೆಯನ್ನು ಉತ್ತೇಜಿಸುವ ಗುಣವನ್ನು ಹೊಂದಿದೆ. ಇದರಿಂದ ಸೇವಿಸುವ ಆಹಾರವು ಸುಲಭವಾಗಿ ಜೀರ್ಣವಾಗುತ್ತದೆ.
- ನರಮಂಡಲಕ್ಕೆ ಒಂದು ಉತ್ತಮ ಉತ್ತೇಜಕವಾಗಿ ಬ್ಲಾಕ್ ಟೀ ಕಾರ್ಯನಿರ್ವಹಿಸುತ್ತದೆ. ಇದರಲ್ಲಿರುವ ಕೆಫೀನ್ ಮೆದುಳಿನ ಮೇಲೆ ನೇರವಾಗಿ ಪ್ರಭಾವ ಬೀರಿ, ದೇಹದ ಶಕ್ತಿ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಮನಸ್ಥಿತಿಯನ್ನು ಸುಧಾರಿಸುತ್ತದೆ.
- ಇನ್ನು ಬ್ಲಾಕ್ ಕಾಫಿ ದೇಹದ ಕೋಶಗಳಿಗೆ ಹಾನಿ ಮಾಡುವ ಫ್ರೀ ರ್ಯಾಡಿಕಲ್‍ಗಳನ್ನು ತಟಸ್ಥಗೊಳಿಸಲು ಸಹಾಯ ಮಾಡುತ್ತದೆ. ಈ ಆಂಟಿಆಕ್ಸಿಡೆಂಟ್‍ಗಳು ಧರ್ಮವನ್ನು ಆರೋಗ್ಯಕರವಾಗಿಡುತ್ತವೆ ಮತ್ತು ಧರ್ಮ ಸಂಬಂಧಿ ಸಮಸ್ಯೆಗಳು ಬರುವುದನ್ನು ತಡೆಯುತ್ತದೆ.
- ಇದಲ್ಲದೆ ಮಿತವಾದ ಕಾಫಿ ಸೇವನೆಯು ಕ್ಯಾನ್ಸರ್ ಮತ್ತು ಮಧುಮೇಹದಂತಹ ಗಂಭೀರ ಕಾಯಿಲೆಗಳನ್ನು ತಡೆಗಟ್ಟುವಲ್ಲಿಯೂ ಕೆಲವು ಪ್ರಯೋಜನಗಳು ನೀಡುತ್ತದೆ ಎಂದು ಸಂಶೋಧನೆಗಳು ತಿಳಿಸಿದೆ.
ಇನ್ನು ಹೇಳುವುದಾರೇ ಯಾವುದೇ ವಸ್ತು ಅತೀಯಾದರೆ ಅಮೃತವು ವಿಷ ಅನ್ನುವಾಗೇ ಕಾಫಿ ಸೇವನೆಯು ಪ್ರಯೋಜನಗಳನ್ನು ನೀಡುತ್ತದೆ ಎನ್ನುವ ದೃಷ್ಟಿಯಲ್ಲಿ ಅತಿಯಾಗಿ ಕುಡಿಯುವುದರಿಂದ ತೊಂದರೆಗಳೇ ಜಾಸ್ತಿ. ಒಬ್ಬ ಆರೋಗ್ಯವಂತ ವ್ಯಕ್ತಿಯು ದಿನಕ್ಕೆ 1 ರಿಂದ 2 ಕಪ್ ಬ್ಲಾಕ್ ಕಾಫಿ ಕುಡಿಯಲು ಸಾಧ್ಯ. ಈ ಮಿತಿಯನ್ನು ದಾಟಿದರೆ ಅನುಕೂಲಕ್ಕಿಂತ ಅನಾನುಕೂಲಗಳೇ ಜಾಸ್ತಿ. ಕೆಫಿನ್ ಅತಿಯಾದರೆ ನಿದ್ರಾಹೀನತೆ, ಆತಂಕ ಮತ್ತು ಹೃದಯ ಬಡಿತದ ಹೆಚ್ಚಳಕ್ಕೆ ಕಾರಣವಾಗಬಹುದು ಎಂದಿದ್ದಾರೆ ಆರೋಗ್ಯ ತಜ್ಞರು ತಿಳಿಸಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement

