ಮುಂಬೈಯ ಪನ್ವೇಲ್ ಪ್ರದೇಶದಲ್ಲಿನ ಕಸ್ಟಮ್ಸ್ ಗೋದಾಮಿನಿಂದ ಸುಮಾರು 35 ಮಂದಿ ಭದ್ರತಾ ಸಿಬ್ಬಂದಿಯನ್ನು ಬೆದರಿಸಿ 40 ಟನ್ ಕಾಳುಮೆಣಸು ಹಾಗೂ ಸುಮಾರು 5 ಕೋಟಿ ರೂಪಾಯಿ ಮೌಲ್ಯದ ಅಡಿಕೆಯನ್ನು ಕಳವು ಮಾಡಲಾಗಿದೆ ಎಂದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ದಾಖಲಾದ ಪ್ರಕರಣದಂತೆ ಸುಮಾರು 35 ಮಂದಿಯ ತಂಡವು ಟ್ರಕ್ ಹಾಗೂ ಇತರ ವಾಹನಗಳಲ್ಲಿ ಆಗಮಿಸಿ ಭದ್ರತಾ ಸಿಬಂದಿಯ ಮೇಲೆ ಹಲ್ಲೆ ನಡೆಸಿ, ಬೆದರಿಸಿ ಗೋದಾಮಿನ ಬೀಗ ಒಡೆದು ಅಡಿಕೆ ಹಾಗೂ ಕಾಳುಮೆಣಸು ಸಾಗಿಸಲಾಗಿದೆ. 3 ಕಂಪನಿಗಳ ಸುಮಾರು 626 ಟನ್ ಗಳಷ್ಟು ಕಾಳುಮೆಣಸು ಹಾಗೂ ಅಡಿಕೆಯ 2022 ರಿಂದ ಕಸ್ಟಮ್ಸ್ ಕ್ಲಿಯರ್‌ಗಾಗಿ ಗೋದಾಮಿನಲ್ಲಿ ಸಂಗ್ರಹವಾಗಿತ್ತು.ಈ ಹಿಂದೆ ಕೂಡಾ ಇಂತಹದ್ದೇ ಪ್ರಕರಣವು 2022 ರಲ್ಲಿ ಹಾಗೂ 2023 ರಲ್ಲಿ ನಡೆದಿತ್ತು. ಕಸ್ಟಮ್ಸ್ ಗೋದಾಮಿನಿಂದ ಕಳವು ನಡೆದಿತ್ತು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel