ದೇವಚಳ್ಳ | ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರ

December 11, 2023
10:02 PM

ಗ್ರಾಮ ಪಂಚಾಯತ್ ದೇವಚಳ್ಳ, ಲಯನ್ಸ್ ಕ್ಲಬ್ ಸುಳ್ಯ, ರೋಟರಿ ಬ್ಲಡ್ ಬ್ಯಾಂಕ್ ಪುತ್ತೂರು, ಆರೋಗ್ಯ ಇಲಾಖೆ ,ಭಾರತೀಯ ಅಂಚೆ ಇಲಾಖೆ ಪುತ್ತೂರು ,ಚಿರಾಯು ಸ್ಪೋರ್ಟ್ಸ ಕ್ಲಬ್ ಮಾವಿನಕಟ್ಟೆ ,ಅಮರ ಸಂಘಟನಾ ಸಮಿತಿ ರಿಜಿಸ್ಟರ್ ಸುಳ್ಯ, ಗ್ರಾಮವನ್ ಮಾವಿನಕಟ್ಟೆ ,ಮತ್ತು ಒಡಿಯೂರು ಸ್ವಸಹಾಯ ಸಂಘ ದೇವಚಳ್ಳ ಇವರುಗಳ ಜಂಟಿ ಆಶ್ರಯದಲ್ಲಿ ಬೃಹತ್ ರಕ್ತದಾನ ಶಿಬಿರ ,ಆರೋಗ್ಯ ತಪಾಸಣಾ ಶಿಬಿರ, ಆಧಾರ ಕಾರ್ಡು ಪರಿಷ್ಕರಣೆ ,ಈ ಶ್ರಮ ಕಾರ್ಡ್ ನೋಂದಣಿ ಮತ್ತು ಹಿರಿಯರ ಗುರುತು ಚೀಟಿ ನೋಂದಣಿ ಕಾರ್ಯಕ್ರಮವು ದೇವಚಳ್ಳ ಗ್ರಾಮ ಪಂಚಾಯತ್ ವಠಾರದಲ್ಲಿ ಜರುಗಿತು.

Advertisement

ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಚಳ್ಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ  ಶೈಲೇಶ್ ಅಂಬೆಕಲ್ಲು ವಹಿಸಿದ್ದರು. ಕೊಲ್ಲಮೊಗ್ರ ಪ್ರಾಥಮಿಕ ಆರೋಗ್ಯ ವೈದ್ಯಾಧಿಕಾರಿ  ಡಾ. ಕುಲದೀಪ್  ದೀಪ ಬೆಳಗಿಸಿ ಉದ್ಘಾಟಿಸಿದರು. ಪುತ್ತೂರು ರೋಟರಿ ಕ್ಲಬ್ಬಿನ ಅಧ್ಯಕ್ಷರು ಬ್ಲಡ್ ಬ್ಯಾಂಕಿನ ಮುಖ್ಯಸ್ಥ ಜಯರಾಜ್ ಭಂಡಾರಿ  ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಸುಳ್ಯ ಲಯನ್ಸ್ ಕ್ಲಬ್ ನ ಅಧ್ಯಕ್ಷ ವೀರಪ್ಪಗೌಡ ಕಣ್ಕಲ್  ಪ್ರಾಸ್ತಾವಿಕವಾಗಿ ಮಾತನಾಡಿದರು.  ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ 103ನೇ ಬಾರಿ ರಕ್ತದಾನ ಮಾಡುತ್ತಿರುವ  ಶೈಲೇಶ್ ಅಂಬೆ ಕಲ್ಲು ಅವರನ್ನು ಸನ್ಮಾನಿಸಲಾಯಿತು.

ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ  ಗುರುಪ್ರಸಾದ್, ಚಿರಾಯು ಸ್ಪೋರ್ಟ್ಸ್ ಕ್ಲಬ್ಬಿನ ಅಧ್ಯಕ್ಷರಾದ ಪ್ರವೀಣ್ ಮಾವಿನಕಟ್ಟೆ, ಅಮರ ಸಂಘಟನಾ ಸಮಿತಿಯ ಅಧ್ಯಕ್ಷರಾದ  ಸಾತ್ವಿಕ್ ಮಡಪ್ಪಾಡಿ, ಲಯನ್ಸ್ ಕಾರ್ಯದರ್ಶಿ ಲಯನ್ ದೊಡ್ಡಣ್ಣ ಬರೆಮೇಲು, ಪಂಚಾಯತ್ ಸದಸ್ಯರುಗಳ ಜಿಲ್ಲಾಧ್ಯಕ್ಷರಾದ ಹರೀಶ್ ರೈ ಉಬರಡ್ಕ ,ಪಂಚಾಯತ್ ಸದಸ್ಯರುಗಳಾದ ಪ್ರಶಾಂತ್ ಮೆದು ಹಾಗೂ ದುರ್ಗಾದಾಸ್ ಮೆತ್ತಡ್ಕ  ವೇದಿಕೆಯಲ್ಲಿ ಉಪಸ್ಥಿತರಿದ್ದರು.ಪ್ರವೀಣ್  ವಂದಿಸಿದರು. ರಾಜೇಶ್  ಕಾರ್ಯಕ್ರಮ ನಿರೂಪಣೆ ಮಾಡಿದರು.

ರಕ್ತದಾನ ಶಿಬಿರದಲ್ಲಿ ಒಟ್ಟು 47 ಜನ ರಕ್ತದಾನ ಮಾಡಿದ್ದು ಶೈಲೇಶ್ ಅಂಬೇಕಲ್ಲು 103ನೇ ಬಾರಿ ರಕ್ತದಾನ ಮಾಡಿದರೆ ರಾಜೇಶ್ ರವರು 60ನೇ ಬಾರಿ ರಕ್ತದಾನ ಮಾಡಿದರು.

 

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ವಚ್ಛತಾ ಅಭಿಯಾನ | 3570 ಟನ್ ಕಟ್ಟಡ ತ್ಯಾಜ್ಯ ತೆರವು
April 24, 2025
6:45 AM
by: The Rural Mirror ಸುದ್ದಿಜಾಲ
ಇಂದು ಶೂನ್ಯ  ನೆರಳಿನ ದಿನ | ಪಿಲಿಕುಳದಲ್ಲಿ  ಪ್ರಾತ್ಯಕ್ಷಿಕೆ
April 24, 2025
6:29 AM
by: The Rural Mirror ಸುದ್ದಿಜಾಲ
82 ವರ್ಷಗಳ ಬಳಿಕ ಅಕ್ಷಯ ತೃತೀಯ ದಿನವೇ 3 ಅಪರೂಪದ ಯೋಗಗಳ ನಿರ್ಮಾಣ
April 24, 2025
6:10 AM
by: ದ ರೂರಲ್ ಮಿರರ್.ಕಾಂ
ಪ್ರಕೃತಿ ಸೌಂದರ್ಯ ಮತ್ತು ಧಾರ್ಮಿಕತೆ ಮೇಳೈಸಿದ ಸ್ಥಳ ನಾಕೂರುಗಯ | ಭಕ್ತಿ ಪ್ರಕೃತಿಗಳ ಸಂಗಮ
April 24, 2025
6:05 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group