ಬೆಂಗಳೂರು ನಗರದ ಪ್ರಯಾಣಿಕರಿಗಾಗಿ ನೂತನ ತಂತ್ರಜ್ಞಾನ ಪರಿಚಯಿಸಿರುವ ಬಿಎಂಟಿಸಿ, ಇನ್ನು ಮುಂದೆ ಪಾಸ್ ಖರೀದಿಸುವ ಬದಲಾಗಿ ಮೊಬೈಲ್ ಫೋನ್‌ನ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಪ್ರಯಾಣಿಸುವುದಕ್ಕೆ ಅವಕಾಶ ಕಲ್ಪಿಸಿದೆ.
Advertisement
ನಗರದ ಖಾಸಗಿ ಸಂಸ್ಥೆ ಟುಮೊಕ್ ಕಂಪೆನಿಯ ಸಹಭಾಗಿತ್ವದಲ್ಲಿ ಮೊಬೈಲ್ ಆ್ಯಪ್ ಪರಿಚಯಿಸುತ್ತಿರುವ ಬಿಎಂಟಿಸಿ, ಸ್ಮಾರ್ಟ್‌ಫೋನ್‌ಗಳಲ್ಲೇ ಟುಮೊಕ್ ಸಂಸ್ಥೆಯ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ದಿನದ ಮತ್ತು ವಾರದ ಹಾಗೂ ಮಾಸಿಕ ಪಾಸುಗಳನ್ನು ಪಡೆಯಲು ಅವಕಾಶ ನೀಡಿದೆ. ಇನ್ನೊಂದು ವಾರದಲ್ಲಿ ಈ ನೂತನ ವ್ಯವಸ್ಥೆ ಜಾರಿಗೆ ಬರಲಿದೆ.
Advertisement
ವೊಲ್ವೋ ಬಸ್‌ಗಳ ನಿರ್ವಾಹಕರಿಗೆ ಇಟಿಎಂ ಮಿಷನ್‌ಗಳಿರಲಿದ್ದು, ಅದರಲ್ಲಿ ಮೊಬೈಲ್‌ನಲ್ಲಿನ ಕ್ಯೂಆರ್‌ಕೋಡ್ ಸ್ಕ್ಯಾನ್ ಮಾಡಬಹುದಾಗಿದೆ. ಆದರೆ, ಸಾಮಾನ್ಯ ಬಸ್‌ಗಳಲ್ಲಿ ನಿರ್ವಾಹಕರ ಬಳಿ ಇರುವ ಕ್ಯುಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ ಪ್ರಯಾಣಿಸಬಹುದಾಗಿದೆ ಎಂದು ಬಿಎಂಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement