ಧರ್ಮಸ್ಥಳದಲ್ಲಿ ಡಾ. ಗಿರಿಧರ ಕಜೆ ಅವರ ಕೃತಿ“ ಪ್ರಕೃತಿ” ಬಿಡುಗಡೆ | ಆಹಾರವೇ ಔಷಧಿಯಾಗಬೇಕು ಅಲ್ಲದೆ ಔಷಧಿಯೇ ಆಹಾರವಾಗಬಾರದು – ಡಾ.ಹೆಗ್ಗಡೆ |

August 28, 2022
6:13 PM

ಆಯುರ್ವೇದ ಪದ್ಧತಿ ಬಗ್ಗೆ ನಂಬಿಕೆ ಮತ್ತು ವಿಶ್ವಾಸ ಹೆಚ್ಚಾಗಬೇಕು. ನಮ್ಮನ್ನು ನಾವು ತಿಳಿದುಕೊಂಡು ನಮಗೆ ಸೂಕ್ತವಾದ ಪೌಷ್ಠಿಕ ಆಹಾರವನ್ನು ಸೇವಿಸಬೇಕು. ಆಹಾರವೇ ಔಷಧಿಯಾಗಬೇಕು ಅಲ್ಲದೆ ಔಷಧಿಯೇ ಆಹಾರವಾಗಬಾರದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.

Advertisement
ಅವರು ಭಾನುವಾರ ಧರ್ಮಸ್ಥಳದಲ್ಲಿ ವಸಂತಮಹಲ್‍ನಲ್ಲಿ ಖ್ಯಾತ ಆಯುರ್ವೇದ ತಜ್ಞಡಾ. ಗಿರಿಧರ ಕಜೆ ಅವರ ಆರನೆ ಕೃತಿ “ಪ್ರಕೃತಿ” ಬಿಡುಗಡೆಗೊಳಿಸಿ ಮಾತನಾಡಿದರು. ಆಧುನಿಕ ಜೀವನಶೈಲಿ, ಆಹಾರ-ವಿಹಾರ, ಒತ್ತಡದ ಕೆಲಸಗಳೇ ಆರೋಗ್ಯ ಹದಗೆಡಲು ಕಾರಣವಾಗಿದೆ. ಪ್ರಾಚೀನ ಕಾಲದಿಂದಲೂ ಋಷಿ-ಮುನಿಗಳು ಪ್ರಕೃತಿಯ ಪ್ರಶಾಂತ ಪರಿಸರದಲ್ಲಿ ಆರೋಗ್ಯಪೂರ್ಣಜೀವನ ನಡೆಸುತ್ತಿದ್ದರು. ಶತಮಾನಗಳಿಂದ ಬಳಸುತ್ತಿದ್ದ ಪ್ರಕೃತಿಚಿಕಿತ್ಸಾ ಪದ್ಧತಿ, ಯೋಗಾಭ್ಯಾಸ, ಆಯುರ್ವೇದ ಪದ್ಧತಿಯಿಂದ ಆರೋಗ್ಯ ಭಾಗ್ಯದ ರಕ್ಷಣೆ ಸಾಧ್ಯವಾಗುತ್ತದೆ. ಆಯುರ್ವೇದ ಪದ್ಧತಿ ಬಗ್ಗೆ ಉನ್ನತ ಅಧ್ಯಯನ ಹಾಗೂ ಸಂಶೋಧನೆಗಳು ನಡೆಯಬೇಕು. ಸಂಶೋಧನಾ ಫಲಿತಾಂಶವನ್ನುಆಯುರ್ವೇದ ಚಿಕಿತ್ಸಾ ಪದ್ಧತಿಯಲ್ಲಿ ಬಳಸಬೇಕು ಎಂದರು.

ಉಡುಪಿ ಜಿಲ್ಲಾಉಸ್ತುವಾರಿ ಸಚಿವ ಎಸ್. ಅಂಗಾರ ಮಾತನಾಡಿ, ಧರ್ಮದ ನೆಲೆಯಲ್ಲಿ ನಾವು ಕರ್ಮ ಮಾಡಿ ಗೌರವಯುತ ಜೀವನ ನಡೆಸಬೇಕು. ಪ್ರಗತಿಯ ಹೆಸರಿನಲ್ಲಿ ಪ್ರಕೃತಿಯಿಂದ ನಾವು ವಿಮುಖರಾಗಿರುವುದೇ ಹೆಚ್ಚಿನ ರೋಗ ರುಜಿನಗಳಿಗೆ ಕಾರಣವಾಗಿದೆ. ಯಾವುದೇ ಪಾಶ್ರ್ವಪರಿಣಾಮಗಳಿಲ್ಲದ ಆಯುರ್ವೇದ ಪದ್ಧತಿಯನ್ನೆ ನಾವು ಬಳಸಬೇಕು ಎಂದು ಅವರು ಕಿವಿಮಾತು ಹೇಳಿದರು. ಡಾ. ಗಿರಿಧರಕಜೆ ಅವರ ಆಯುರ್ವೇದ ಚಿಕಿತ್ಸಾ ಪದ್ಧತಿಯ ಶುಶ್ರೂಷೆಯಿಂದ ತಾನು ಕೊರೊನಾದಿಂದ ಮುಕ್ತಿ ಪಡೆದಿರುವುದಾಗಿ ಸಚಿವರು ತಿಳಿಸಿದರು.

ಪ್ರಜಾವಾಣಿ ಪತ್ರಿಕೆಯ ಪ್ರಧಾನ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ ಮಾತನಾಡಿ, ಆಯುರ್ವೇದ ನಮ್ಮಜೀವನ ಪದ್ಧತಿಯಾಗಬೇಕು. ಆಯುರ್ವೇದ ಪದ್ಧತಿಯಿಂದ ನಮ್ಮಆರೋಗ್ಯ, ಆಯುಷ್ಯ ಮತ್ತುಆನಂದ ವೃದ್ಧಿಯಾಗಿ ಸುಖ-ಶಾಂತಿ, ನೆಮ್ಮದಿಯ ಜೀವನ ನಡೆಸಬಹುದು. ಆದರೆ ಇಂದಿನ ಬದಲಾದ ಆಧುನಿಕ ಜೀವನ ಶೈಲಿಯಲ್ಲಿ ನಾವು ಹಗಲು ಮಾಡುವ ಕೆಲಸವನ್ನು ರಾತ್ರಿ ಮಾಡುತ್ತೇವೆ. ರಾತ್ರಿ ಮಾಡುವ ಕೆಲಸವನ್ನು ಹಗಲು ಮಾಡುತ್ತೇವೆ. ಪ್ರಕೃತಿಯಿಂದ ದೂರವಾದಷ್ಟು ನಮ್ಮಲ್ಲಿ ವಾತ, ಪಿತ್ತ, ಕಫಗಳು ಜಾಸ್ತಿಯಾಗುತ್ತವೆ. ಆಹಾರ ಮತ್ತುಔಷಧಿ ಬೇರೆ ಬೇರೆಅಲ್ಲ ಒಂದೇ ಆಗಿರಬೇಕು ಎಂದು ಅವರು ಹೇಳಿದರು.

ಟಿ.ವಿ. 9 ವಾಹಿನಿಯ ಪ್ರಧಾನ ನಿರೂಪಕ ರಂಗನಾಥ್ ಭಾರಧ್ವಾಜ್ ಮಾತನಾಡಿ ಸ್ವಚ್ಛ ಭಾರತ ನಿರ್ಮಾಣದ ಆಶಯದಂತೆ ಸ್ವಸ್ಥ ಬಾರತವೂ ನಮ್ಮಗುರಿಯಾಗಬೇಕು. ಮನೆಯ ಹಿತ್ತಲಲ್ಲಿರುವ ಗಿಡಮೂಲಿಕೆಗಳು ಕೂಡಾ ಔಷಧೀಯ ಗುಣ ಹೊಂದಿದ್ದು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ನಮ್ಮ ಮನಸ್ಸುಗಳು ಸದಾಜಾಗೃತವಾಗಿ, ಕಲ್ಮಶ ರಹಿತವಾಗಿದ್ದು, ಮಾನವೀಯ ಸಂಬಂಧಗಳೊಂದಿಗೆ ಜೀವನ ಮೌಲ್ಯಗಳನ್ನು ಉಳಿಸಿ, ಬೆಳೆಸಿದಾಗ ಆರೋಗ್ಯವಂತರಾಗಲು ಸಾಧ್ಯ. ಯೋಗಕ್ಕೆ ದೊರಕಿದಷ್ಟು ಮಹತ್ವ ಮತ್ತು ಪ್ರಚಾರ ಆಯುರ್ವೇದಕ್ಕೂ ಸಿಗಬೇಕು ಎಂದುಅವರು ಹೇಳಿದರು.

“ಪ್ರಕೃತಿ” ಕೃತಿಯ ಲೇಖಕ ಡಾ. ಗಿರಿಧರಕಜೆ ಪುಸ್ತಕದ ಬಗ್ಗೆ ಸವಿವರ ಮಾಹಿತಿ ನೀಡಿದರು. ಸೆಲ್ಕೊ ಸಂಸ್ಥೆಯ ಸಿ.ಇ.ಒ. ಮೋಹನ ಭಾಸ್ಕರ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಗೋವಿಂದಪ್ರಸಾದ್‍ ಕಜೆ ಸ್ವಾಗತಿಸಿದರು. ಶ್ರೀನಿವಾಸರಾವ್ ಧರ್ಮಸ್ಥಳ ವಂದಿಸಿದರು.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮೀಸಲಾತಿಗಾಗಿ ಜಾತಿಯಾಗುವ ಮತಧರ್ಮ
April 16, 2025
9:41 PM
by: ಡಾ.ಚಂದ್ರಶೇಖರ ದಾಮ್ಲೆ
ಸರಕಾರಿ ಶಾಲೆಯಲ್ಲಿ ಬೆಳೆಸಿದ ತರಕಾರಿ ಜಿಲ್ಲಾಧಿಕಾರಿಗೆ ಕೊಡುಗೆ
April 16, 2025
8:40 PM
by: ದ ರೂರಲ್ ಮಿರರ್.ಕಾಂ
ಅನ್ನದ ಪರಿಮಳ ಮನವರಳಿಸ ಬಹುದಲ್ಲವೇ..!
April 16, 2025
11:18 AM
by: ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ
ಹೆಚ್ಚಿನ ಮೌಲ್ಯದ ಹಣ್ಣಿನ ಬೆಳೆಗಳ ಕುರಿತು ಚರ್ಚೆ | ಹಲಸು , ಡ್ರಾಗನ್‌ಫ್ರುಟ್‌ ಕೃಷಿಯ ಕಡೆಗೆ ಆದ್ಯತೆ |
April 16, 2025
10:50 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group