ಪುತ್ತೂರು ವಿವೇಕಾನಂದ ಕಾಲೇಜು, ವಿವೇಕಾನಂದ ಸಂಶೋಧನ ಕೇಂದ್ರ ಕನ್ನಡ ಸಂಘ- ಕನ್ನಡ ವಿಭಾಗ ಮತ್ತು ಐಕ್ಯೂಎಸಿ ಸಹಯೋಗದಲ್ಲಿ ಕವಯಿತ್ರಿ, ವಿವೇಕಾನಂದ ಕಾಲೇಜು ತೃತೀಯ ವರ್ಷ ಬಿ. ಎಸ್ಸಿ ಪದವಿ ವಿದ್ಯಾರ್ಥಿನಿ ಅನ್ನಪೂರ್ಣ ಎನ್. ಕುತ್ತಾಜೆ ಯವರ “ಮೊದಲ ಹೆಜ್ಜೆ ಹೊಂಗನಸಿನೆಡೆಗೆ” ಕವನ ಸಂಕಲನ ಬಿಡುಗಡೆ ಸಮಾರಂಭವು ಮಂಗಳವಾರ ವಿವೇಕಾನಂದ ಕಾಲೇಜು ಸುವರ್ಣ ಮಹೋತ್ಸವ ಸಭಾಭವನದಲ್ಲಿ ನಡೆಯಿತು.
ಕಾಲೇಜು ಆಡಳಿತ ಮಂಡಳಿ ಸಂಚಾಲಕ ಮುರಳಿಕೃಷ್ಣ ಕೆ. ಎನ್. ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ ಎಚ್. ಜಿ. ಕೃತಿ ಬಿಡುಗಡೆಗೈದರು. ಮಂಗಳೂರು ವಿಶ್ವವಿದ್ಯಾನಿಲಯ ಎಸ್. ಎ. ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಡಾ. ಧನಂಜಯ ಕುಂಬ್ಳೆ ಕೃತಿ ಪರಿಚಯಿಸಿದರು. ಕಾಲೇಜು ಪ್ರಾಂಶುಪಾಲ ಪ್ರೊ. ವಿಷ್ಣುಗಣಪತಿ ಭಟ್ ಉಪಸ್ಥಿತರಿದ್ದರು. ಐಕ್ಯೂಎಸಿ ಸಂಯೋಜಕ ಶಿವಪ್ರಸಾದ್ ಕೆ. ಎಸ್. ಸ್ವಾಗತಿಸಿ ಉಪನ್ಯಾಸಕಿ ಮೈತ್ರಿ ವಂದಿಸಿದರು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel