ನಮ್ಮ ಜನಪದರು ಮಕ್ಕಳಿಗೆ ಅನ್ನದ ಜೊತೆಗೆ ಅರಿವನ್ನೂ ತಿನ್ನಿಸುತ್ತಿದ್ದರು. ಅದು ಅತ್ಯಂತ ಮುಖ್ಯವಾದ ಕೆಲಸ. ಆದರೆ ಇಂದು ಮಕ್ಕಳಿಗೆ ಊಟ ಮಾಡಿಸಲು ಈಗ ಮೊಬೈಲ್ ಫೋನ್ ಕೊಡುವುದು ಅನಿವಾರ್ಯವಾಗಿದೆ. ಈ ಕಾರಣದಿಂದಲೇ ಸಮಾಜದ ಪರಿಸ್ಥಿತಿ ಹದಗೆಡುತ್ತಿದೆ ಎಂದು ಸಾಹಿತಿ ಎಸ್.ಜಿ.ಸಿದ್ಧರಾಮಯ್ಯ ಹೇಳಿದರು.
ವಸಂತ ಪ್ರಕಾಶನ ಪ್ರಕಟಿಸಿರುವ ಎಚ್ ಎಸ್ ವೆಂಕಟೇಶಮೂರ್ತಿ ಸಂಪಾದಿಸಿರುವ “ವಸಂತ ಬಾಲ ಸಾಹಿತ್ಯ” ಮಾಲೆಯ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು. ಆಟ ಮತ್ತು ಊಟದ ಹೊತ್ತಿನಲ್ಲಿ ಮಕ್ಕಳ ಪ್ರಪಂಚ ಜ್ಞಾನವನ್ನು ಸೃಜನಶೀಲವಾಗಿ ಹಿರಿಯರು ತುಂಬುತ್ತಿದ್ದರು.ಇದಕ್ಕಾಗಿಯೇ ಎಲ್ಲರೂ ಜೊತೆಯಾಗಿಯೇ ಊಟ ಮಾಡುತ್ತಿದ್ದರು. ಆದರೆ ಈಗಿನ ಮಕ್ಕಳಿಗೆ ಮೊಬೈಲ್ ಇಲ್ಲದೆ ಊಟ ಮಾಡಿಸು ವುದೇ ಕಷ್ಟ. ಜೊತೆಗೆ ಊಟ ಮಾಡುವ ಪರಿಪಾಠವೇ ದೂರವಾಗಿದೆ. ಫೋನ್‌ನಲ್ಲಿ ಬರುವ ಚಿತ್ರ ಗಳಿಗೂ, ತಿನ್ನುವ ತುತ್ತಿಗೂ ಸಂಬಂಧವೇ ಇರುವುದಿಲ್ಲ ಎಂದು ಹೇಳಿದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel