ಯುವ ಕವಯತ್ರಿ ಸುಪ್ರೀತಾ ಅವರ ಕವನ ಸಂಕಲನ ಬಿಡುಗಡೆ | ಪ್ರಾಧ್ಯಾಪಕ ರಘುನಂದನ ಅವರ `ಹಿಂದಿ ಶಿಕ್ಷಣ ಪದ್ಧತಿ’ ಪುಸ್ತಕ ಬಿಡುಗಡೆ |

ಕುಂತೂರು ಮಾರ್ ಇವನಿಯೋಸ್ ಶಿಕ್ಷಕ ಶಿಕ್ಷಣ ಸಂಸ್ಥೆಯ 4 ಸೆಮಿಸ್ಟರ್ ನ ವಿದ್ಯಾರ್ಥಿನಿ, ಯುವ ಕವಯತ್ರಿ ಸುಪ್ರೀತಾ ಚರಣ್ ಪಾಲಪ್ಪೆ ಕಡಬ (ಸೀತಾಲಕ್ಷ್ಮಿ) ರಚಿಸಿದ `ನನ್ನೊಳಗಿನ ನಾನು’ ಎಂಬ ಕವನ ಸಂಕಲನ ಸಂಸ್ಥೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಬಿಡುಗಡೆಗೊಂಡಿತು.

Advertisement
Advertisement

ವಂ. ಬಿಷಪ್ ಡಾ. ಮಾರ್ ಮಕಾರಿಯೋಸ್‌ ಅವರ ಸಮ್ಮುಖದಲ್ಲಿ ಸಂಸ್ಥೆಯ ವ್ಯವಸ್ಥಾಪಕ ಡಾ. ಎಲ್ದೊ ಪುತ್ತನ್ ಕಂಡತ್ತಿಲ್, ಕಡಬ ಸೈಂಟ್ ಆನ್ಸ್ ಸಂಸ್ಥೆಗಳ ಸಂಚಾಲಕ ಫಾ. ಅರುಣ್ ವಿಲ್ಸನ್ ಲೋಬೋ ಅವರು ಪುಸ್ತಕ ಬಿಡುಗಡೆಗೊಳಿಸಿ ಶುಭ ಹಾರೈಸಿದರು.

Advertisement

ಕವಿಯತ್ರಿ ಸುಪ್ರಿತಾ ಚರಣ್ ಪಾಲಪ್ಪೆ ಕಡಬ ಮಾತನಾಡಿ, ಈ ಕವನ ಸಂಕಲನ ಬಿಡುಗಡೆಗೊಂಡಿರುವುದು ನನಗೆ ಹೆಮ್ಮೆಯ ವಿಚಾರವಾಗಿದೆ. ಯುವ ಬರಹಗಾರರು ಪುಸ್ತಕವನ್ನು ಕೊಂಡು ಓದಿ ಪ್ರೋತ್ಸಾಹಿಸಿ, ಅದು ನಮಗೆ ಸ್ಫೂರ್ತಿಯಾಗಲಿದೆ ಎಂದ ಅವರು ಪುಸ್ತಕದ ಹಿಂದೆ ಪರಿಶ್ರಮಿಸಿದವರಿಗೆ ನಾನು ಅಭಾರಿಯಾಗಿರುತ್ತೇನೆಂದು ಹೇಳಿದರು. ವೇದಿಕೆಯಲ್ಲಿ ಪ್ರಾಂಶುಪಾಲೆ ಉಷಾ ಎಂ.ಎಲ್ ಹಾಗೂ ಉಪನ್ಯಾಸಕ ವೃಂದ ಉಪಸ್ಥಿತರಿದ್ದರು.

Advertisement

ಇದೇ ವೇಳೆ  ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಬಿ.ಎಡ್ ಪಠ್ಯಕ್ರಮದ ದ್ವಿತೀಯ ಸೆಮಿಸ್ಟರ್‌ಗೆ ಅನುಗುಣವಾಗಿ ಹಿಂದಿ ಶಿಕ್ಷಣ ಪದ್ಧತಿ ಎಂಬ ಪಠ್ಯ ಪುಸ್ತಕವನ್ನು ಕುಂತೂರು ಮಾರ್ ಇವಾನಿಯೋಸ್ ಶಿಕ್ಷಕ ಶಿಕ್ಷಣ ಸಂಸ್ಥೆಯ ಪ್ರಾಧ್ಯಾಪಕ ರಘುನಂದನ .ಕೆ ಅವರು ಬರೆದ ಪಠ್ಯ ಪುಸ್ತಕವನ್ನು ಕಾಲೇಜಿನ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಲಾಯಿತು.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ
Advertisement

Be the first to comment on "ಯುವ ಕವಯತ್ರಿ ಸುಪ್ರೀತಾ ಅವರ ಕವನ ಸಂಕಲನ ಬಿಡುಗಡೆ | ಪ್ರಾಧ್ಯಾಪಕ ರಘುನಂದನ ಅವರ `ಹಿಂದಿ ಶಿಕ್ಷಣ ಪದ್ಧತಿ’ ಪುಸ್ತಕ ಬಿಡುಗಡೆ |"

Leave a comment

Your email address will not be published.


*