ಹೈದ್ರಬಾದ್‌ನ ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯ ಬೊಯ್ನಪಲ್ಲಿ ವೆಂಕಟರಾವ್ಪಲ್ಲಿ ಗ್ರಾಮದಲ್ಲಿ ಒಂಭತ್ತು ವರ್ಷದ ವಿದ್ಯಾರ್ಥಿ ಕೌಶಿಕ್, ಶಾಲೆಯಲ್ಲಿ ಊಟ ಮಾಡುವಾಗ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ. ಹೃದಯಾಘಾತದಿಂದ ವಿದ್ಯಾರ್ಥಿ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.
ದೀಪಾವಳಿ ಹಬ್ಬದ ರಾತ್ರಿ ತನ್ನ ಕುಟುಂಬದೊಂದಿಗೆ ಪಟಾಕಿಗಳನ್ನು ಸಿಡಿಸಿದ ಹುಡುಗ ಕೌಶಿಕ್, ಲವಲವಿಕೆಯಿಂದ ಮರುದಿನ ಬೆಳಿಗ್ಗೆ ಎದ್ದು ಎಂದಿನಂತೆ ಶಾಲೆಗೆ ಹೋಗಿದ್ದಾನೆ. ಶಾಲೆಯಲ್ಲಿ ಮಧ್ಯಾಹ್ನದವರೆಗೆ ತರಗತಿಗಳನ್ನು ಆಲಿಸಿದ ಹುಡುಗ, ಮಧ್ಯಾಹ್ನದ ಊಟಕ್ಕಾಗಿ ತನ್ನ ಸ್ನೇಹಿತರೊಂದಿಗೆ ಸರದಿಯಲ್ಲಿ ನಿಂತಿದ್ದನು. ಈ ವೇಳೆ ಕೌಶಿಕ್ ಇದ್ದಕ್ಕಿದ್ದಂತೆ ಸರತಿ ಸಾಲಿನಲ್ಲಿ ಕುಸಿದು ಬಿದ್ದಿದ್ದ. ತಕ್ಷಣವೇ ಶಿಕ್ಷಕರು ವಿದ್ಯಾರ್ಥಿಯನ್ನು ಗ್ರಾಮದ ವೈದ್ಯರ ಬಳಿಗೆ ಕರೆದೊಯ್ದರು , ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಬಾಲಕ ಮೃತಪಟ್ಟಿದ್ದಾನೆ. ಬಾಲಕ ಕೌಶಿಕ್ ಗೆ ಹೃದಯಾಘಾತವಾಗಿದೆ ಎಂದು ವೈದ್ಯರು ತಿಳಿಸಿದರು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel