ಒಂದು ಕೈಯಲ್ಲಿ ಕತ್ತಿ …ಇನ್ನೊಂದು ಕೈಯಲ್ಲಿ ಹಗ್ಗ…! ಸರ ಸರನೆ ಅಡಿಕೆ ಮರ ಏರುವ ಬಾಲಕ..!, ನಿಮಿಷದಲ್ಲಿ ಅಡಿಕೆ ಕೊಯ್ಲು ಮಾಡಿ ಮುಗಿಸುವ ಚತುರ..!. ಇದು ಯಲ್ಲಾಪುರ ತಾಲೂಕಿನ ಉಮ್ಮಚಗಿಯ ನಿವಾಸಿ ಸಚೇತ ದಿವಸ್ಪತಿ ಹೆಗಡೆ.
Advertisement
ಯಲ್ಲಾಪುರ ತಾಲೂಕಿನ ಉಮ್ಮಚಗಿಯ ನಿವಾಸಿಯಾಗಿರುವ ಸಚೇತ ದಿವಸ್ಪತಿ ಹೆಗಡೆ ಇನ್ನೂ ಬಾಲಕ. ಸಣ್ಣ ವಯಸ್ಸಿನಲ್ಲಿಯೇ ಅಡಿಕೆ ಮರ ಏರಿ ಕೊನೆ ಕೊಯ್ಯುವುದು ರೂಢಿ ಮಾಡಿಕೊಂಡಿದ್ದಾನೆ. ಈತ 20 ರಿಂದ 50 ಎತ್ತರದ ಮರ ಏರಿ ಕೊನೆ ಕೊಯ್ದು ನೇಣು ಬಿಡುತ್ತಾನೆ. ಇದಕ್ಕೆ ಮನೆಯವರು ಕೊಡ ಬೆಂಬಲಾಗಿ ನಿಂತಿದ್ದು, ಇದೀಗ ಈತ ಕ್ವಿಂಟಾಲ್ ಗಟ್ಟಲೇ ಅಡಿಕೆ ಕೊಯ್ಯುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾನೆ.
Advertisement
ಸಣ್ಣ ಪುಟ್ಟ ಗಿಡಗಳ ಕೊನೆ ಕೊಯ್ಲು ಮಾಡಲು ಆರಂಭ ಮಾಡಿ ಇದೀಗ ಎಲ್ಲರಂತೆಯೇ ಕೊನೆ ಕೊಯ್ಯುತ್ತಿರುವುದು ಮನೆಯವರಿಗೂ ಸಹಕಾರಿಯಾಗಿದೆ. ಮಗನ ಕೃಷಿ ಕಾಯಕ ನಮಗೂ ಖಷಿ ನೀಡುತ್ತಿದ್ದು, ಆತನ ಕೃಷಿ ಬಗೆಗಿನ ಒಲವು ಹೆಮ್ಮೆಯಾಗಿದೆ ಎನ್ನುತ್ತಾರೆ ಸಚೇತ ಹೆಗಡೆ ತಾಯಿ ಶ್ವೇತಾ ಹೆಗಡೆ.
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement