ಭ್ರಷ್ಟಾಚಾರ ವಿರುದ್ಧ ಬಾಲಕನ ಪತ್ರ | ವೈರಲ್‌ ಆಯ್ತು ಪತ್ರ | ಬಾಲಕನ ತಂದೆಯಿಂದ ಸ್ಪಷ್ಟನೆ | ಸಮಾಜದ ಎಲ್ಲರಿಗೂ ಕಣ್ಣು ತೆರೆಸುವ ಹೇಳಿಕೆ… |

January 3, 2024
8:18 PM

ಎರಡು ದಿನಗಳಿಂದ ಸುಳ್ಯದ ಶಾಲಾ ವಿದ್ಯಾರ್ಥಿಯೊಬ್ಬ ಭ್ರಷ್ಟಾಚಾರದ ಬಗ್ಗೆ ಸುಳ್ಯದ ಸುದ್ದಿ ಬಿಡುಗಡೆ ಪತ್ರಿಕೆಗೆ ಬರೆದ ಪತ್ರ ವೈರಲ್‌ ಆಗಿತ್ತು. ಮಾಜಿ ಸಚಿವ ಸುರೇಶ್‌ ಕುಮಾರ್‌ ಸಹಿತ ಹಲವರು ಬಾಲಕ ಭ್ರಷ್ಟಾಚಾರದ ಬಗ್ಗೆ ಬರೆದ ಪತ್ರವನ್ನು ಶ್ಲಾಘಿಸಿದ್ದರು. ಬಾಲಕನ ಕಾರ್ಯವನ್ನು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ ಇದೀಗ ಬಾಲಕನ ತಂದೆ ಸ್ಪಷ್ಟನೆ ನೀಡಿರುವುದು ಹಾಗೂ ಆ ಸ್ಪಷ್ಟನೆಯಲ್ಲಿ ಇರುವ ಭಾವವು ಸಮಾಜದ ವ್ಯವಸ್ಥೆಯ ಕನ್ನಡಿಯಾಗಿದೆ. ಶಾಲಾ ವಿದ್ಯಾರ್ಥಿಗಳಲ್ಲಿ ಭ್ರಷ್ಟಾಚಾರದ ವಿರುದ್ಧ ಭಾವನೆಗಳ ಪರ ನಿಲ್ಲುವವರು ಯಾರು ಎಂಬುದೇ ಈಗ ಪ್ರಶ್ನೆಯಾಗಿದೆ. ಬಾಲಕನ ತಂದೆ ನೀಡಿರುವ ಸ್ಪಷ್ಟನೆ ಹೀಗಿದೆ…

Advertisement

ನಾನು ಹರಿಪ್ರಸಾದ್, ಭ್ರಷ್ಟಾಚಾರದ ಬಗ್ಗೆ ಪತ್ರ ಬರೆದ ಬಾಲಕನ ತಂದೆ. ಈ ಮೊದಲು ನನ್ನ ಮಗ ಸುದ್ದಿಬಿಡುಗಡೆ ಪತ್ರಿಕೆಗೆ ಪತ್ರ ಬರೆದಿದ್ದು,ಈಗ್ಗೆ ಪ್ರಕಟಗೊಂದಿರುತ್ತದೆ..ಇದರಲ್ಲಿ ನನ್ನ ಪಾತ್ರ ಇಲ್ಲ.. ಈ ಪತ್ರವನ್ನು ನನ್ನ ಮಗ ಬರೆದಿರುತ್ತಾನೆ.

ಇದಕ್ಕೆ ಮೊದಲು ಅವನು ಪೈಲಾರು ಶಾಲೆಯಲ್ಲಿ ಓದುತ್ತಿದ್ದಾಗ ಇದೇ ಭ್ರಷ್ಟಾಚಾರದ ಬಗ್ಗೆ ಸುದ್ದಿ ಬಿಡುಗಡೆ ಪತ್ರಿಕೆ ನಡೆಸಿದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದ. ಆಗ ಪ್ರಬಂಧದಲ್ಲಿ ಮಾಲಾಲ, ಗ್ರೇಟಾ ತನ್ಬೆರ್ಗ್ ರಂತ ಬಾಲ ಕ್ರಾಂತಿಕಾರಿಗಳ ಬಗ್ಗೆಯು ಬರೆದಿತ್ತು.. ಸುದ್ದಿ ಬಿಡುಗಡೆಯ ಈ ಪ್ರಬಂಧ ಸ್ಪರ್ಧೆ ಮತ್ತು ಎಲ್ಲೆಲ್ಲೂ ಕಾಣಸಿಗುವ ಸುದ್ದಿ ಬಿಡುಗಡೆಯ ಭ್ರಷ್ಟಾಚಾರದ ವಿರುದ್ಧದ ಸಣ್ಣ ಸಣ್ಣ ಬ್ಯಾನರ್‌ಗಳೂ ಅವನಿಗೆ ಪ್ರೇರಣೆ ನೀಡಿರಬಹುದು.

ಅವನ ಹಾಗೂ ಸಹೋದರ ಪತ್ರಗಳ ಮೂಲಕ ಸಂಭಾಷಣೆ ನಡೆಸುವುದು ಸಾಮಾನ್ಯವಾಗಿದ್ದು, ಪತ್ರ ಬರೆಯುವುದು ಅವನ ಒಂದು ಹವ್ಯಾಸ.

ಇನ್ನು ದೇವಚಳ್ಳ ಶಾಲೆಯಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ, SDMC ಯವರು ಈಗಾಗಲೇ ಸ್ವಯಂ ವಿವರಣಾತ್ಮಕವಾಗಿ  ಹೇಳಿಕೆಯಲ್ಲಿ ಕೊಟ್ಟಿರುವುದರಿಂದ ನಾನು ಯಾವುದೇ ರೀತಿಯ ಹೇಳಿಕೆ ಕೊಡುವ ಅವಶ್ಯಕತೆ ಇರುವುದಿಲ್ಲ.

ಈ ವಾತಾವರಣದಿಂದ ಬದಲಾವಣೆ ಪಡೆಯಲು ನಾನು 2020 ವರ್ಷದಲ್ಲಿ ನನ್ನ ಮಕ್ಕಳನ್ನು ಆ ಶಾಲೆಯಿಂದ ತೆಗೆದು ಬೇರೆ ಶಾಲೆಗೆ ಹಾಕಿದ್ದು,ಪ್ರಸ್ತುತ ನನಗೂ ಶಾಲೆಗೂ ಯಾವುದೇ ರೀತಿಯ ಸಂಬಂಧವಿರುವುದಿಲ್ಲ ಮತ್ತು ಅಲ್ಲಿ 2020ರ ನಂತರ ನಡೆದ ಘಟನೆಗಳ ಬಗ್ಗೆ ನನಗೆ ಯಾವುದೇ ಮಾಹಿತಿ ಇರುವುದಿಲ್ಲ

ಆದರೆ,ಈ ಮಾತನ್ನು ಆಡು ಭಾಷೆಯಲ್ಲಿ ಮಗನಿಗೆ ಹೇಳಿದ್ದು ಹೌದು.. 1 ಲಕ್ಷಕ್ಕೆ ಯಾರು ಬರ್ಲಿಲ್ಲ,ಇನ್ನೂ 500 ಕ್ಕೆ ಯಾರಾದ್ರೂ ಬರುತ್ತಾರಾ ಎಂದು… ಭ್ರಷ್ಟಾಚಾರದ ಬಗ್ಗೆ ಮಾತು ಬರುವಾಗ ನಮ್ಮ ಸುತ್ತಮುತ್ತಲಿನ, ಹತ್ತಿರದ, ಸುಲಭವಾಗಿ ಅರ್ಥವಾಗುವ ವಿಷಯ ಎಲ್ಲರೂ ರೆಫರ್ ಮಾಡುವಂತೆ, ನಾನು ಮಾಡಿದ್ದೆ. ಇನ್ನೂ ಈ ಘಟನೆಗಳ ಬಗ್ಗೆ ಯಾವುದೇ ರೀತಿಯ ಚರ್ಚೆ ಮಾಡಲು ಇಚ್ಛೆ ಪಡುವುದಿಲ್ಲ..

ಎಲ್ಲರಂತೆ, ಒಬ್ಬ ಸೈನಿಕ ಅಥವ ಕ್ರಾಂತಿಕಾರಿ ಪಕ್ಕದ ಮನೆಯಲ್ಲೇ ಹುಟ್ಟಲಿ.. ನಮ್ಮ ಮಗ ಇಂಜಿನಿಯರ್/ಡಾಕ್ಟರ್ ಅದ್ರೆ ಸಾಕು ಎಂದುಕೊಳ್ಳುವ ಸಾಮಾನ್ಯ ನಾನು , ಈ ಗಲಾಟೆಗಳಿಂದ ನನ್ನನು ಹಾಗೂ ನನ್ನ ಮಗನನ್ನು ದೂರ ಇಡಬೇಕಾಗಿ ವಿನಂತಿ. ಓದಿದ ಆದರ್ಶಗಳು ಪುಸ್ತಕಗಳಿಗೆ ಮತ್ತು ಪರೀಕ್ಷೆಗೆ ಸೀಮಿತವಾಗುವಂತೆ ನನ್ನ ಮಗನನ್ನು ಕೆಲವು ದಿನಗಳಲ್ಲಿ ಮಾರ್ಪಡು ಮಾಡಿ ಈ ರೀತಿಯ ದುಸ್ಸಾಹಾಸ ಮಾಡದಂತೆ ತಡೆಯುತ್ತೇನೆ ಎಂದು ಈ ಮೂಲಕ ಹೇಳಿಕೊಳ್ಳುತ್ತೇವೆ .

ಈ ಹೇಳಿಕೆಯು ಮೇಲೆ ನಡೆದ ಘಟನೆಯ ಬಗ್ಗೆ ಹಾಗೂ ಶಾಲಾ SDMC ಮೀಟಿಂಗ್ ನ ಹಾಗೂ ಸಮಾಜದ ಎಲ್ಲರ ಪ್ರಶ್ನೆಗಳಿಗೆ ಉತ್ತರಿಸುವ ಸಲುವಾಗಿ ಮೊದಲನೆಯದಾಗಿ ಹಾಗೂ ಕೊನೆಯದಾಗಿ ಕೊಡುತ್ತಿದ್ದೇನೆ.ಎಲ್ಲರೂ ನಡೆದ್ದದ್ದನ್ನು ಮರೆತು ಮುಂದೆ ಸಾಗೋಣ.

 

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಭಾರತದಲ್ಲಿ ಪ್ರಪ್ರಥಮವಾಗಿ ಮುಳಿಯದ ಮತ್ತೊಂದು ಹೊಸತನ | ವಜ್ರಗಳ LGD ಟೆಸ್ಟಿಂಗ್ ಮಿಷನ್
April 15, 2025
3:15 PM
by: The Rural Mirror ಸುದ್ದಿಜಾಲ
ಹವಾಮಾನ ಬದಲಾವಣೆಯ ಪರಿಣಾಮ | ಬಾಂಗ್ಲಾದಲ್ಲಿ ಹೆಚ್ಚಾಗಲಿರುವ ಚಂಡಮಾರುತ |
April 15, 2025
2:16 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 15-04-2025 | ಕೆಲವು ಕಡೆ ತುಂತುರು ಮಳೆ | ಎ.19 ರಿಂದ ಕೆಲವು ಕಡೆ ಉತ್ತಮ ಮಳೆ ಸಾಧ್ಯತೆ |
April 15, 2025
11:54 AM
by: ಸಾಯಿಶೇಖರ್ ಕರಿಕಳ
ಬುಧನ ಚಲನೆ | 3 ರಾಶಿಗೆ ಸಂಪತ್ತಿನ ಮಳೆ, ಯಶಸ್ಸು
April 15, 2025
7:43 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group