ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಪ್ರಧಾನಮಂತ್ರಿ ಆವಾಸ್ ಯೋಜನೆ ಮತ್ತು ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು ಜಾರಿಗೊಳಿಸಿದೆ. ಅಂದರೆ ಉಚಿತ ಮನೆ ಮತ್ತು ಗ್ಯಾಸ್ ಸೌಲಭ್ಯ ಯೋಜನೆ.
ಪ್ರಧಾನಮಂತ್ರಿ ಆವಾಸ್ ಯೋಜನೆ: ಈ ಯೋಜನೆಯನ್ನು 2015ರಲ್ಲಿ ಆರಂಗೊಂಡಿದ್ದು, 2024ರವರೆಗೂ ವಿಸ್ತರಣೆಯಾಗಿ 2025ರಲ್ಲಿ ಸಹ ಕಾರ್ಯ ನಿರ್ವಹಿಸುತ್ತಿದೆ. ಈ ಯೋಜನೆಯಡಿಯಲ್ಲಿ ಗೃಹ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ 2.67 ಲಕ್ಷ ರೂಪಾಯಿಗಳವರೆಗೆ ನೇರ ಸಹಾಯ. ರಾಷ್ಟ್ರೀಯ ಗೃಹೀತ ಬ್ಯಾಂಕುಗಳ ಮೂಲಕ 10 ಲಕ್ಷ ರೂಪಾಯಿಗಳವರೆಗೆ ಕಡಿಮ ಬಡ್ಡಿ ದರದ ಸಾಲ ಸೌಲಭ್ಯ, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಿಭಿನ್ನ ಉಪಯೋಜನೆಗಳು..
ಪ್ರಧಾನ ಮಂತ್ರಿ ಉಜ್ವಲ ಯೋಜನೆ: ಈ ಯೋಜನೆಯನ್ನು 2016 ರಲ್ಲಿ ಆರಂಭಗೊಂಡಿದ್ದು, ಈ ಯೋಜನೆಯಡಿಯಲ್ಲಿ ಬಡ ಕುಟುಂಬಗಳಲ್ಲಿ ಮಹಿಳೆಯರಿಗೆ ಉಚಿತ ಎಲ್‍ಪಿಜಿ ಕನೆಕ್ಷನ್ ಒದಗಿಸುವ ಯೋಜನೆಯನ್ನು ನೀಡಿದೆ..
- ಉಚಿತ ಎಲ್‍ಪಿಜಿ ಕನೆಕ್ಷನ್, ಮೊದಲ ರಿಫಿಲ್ ಮತ್ತು ಸ್ಟೌವ್
- ಪ್ರತಿ 14.2 ಕೆ.ಜಿ ಸಿಲಿಂಡರ್‍ಗೆ 300 ರೂಪಾಯಿ ಸಬ್ಸಡಿ, ವರ್ಷಕ್ಕೆ 9 ರಿಫಿಲ್‍ಗಳಿಗೆ
- ಇದರಿಂದ ಸಿಲಿಂಡರ್ ಬೆಲೆ ಸುಮಾರು 500 ರೂಪಾಯಿಗಳಲ್ಲಿ ಸಿಗುತ್ತದೆ, ಇದು ದುಮ್ಮು ಮತ್ತು ಆರೋಗ್ಯ ಸಮಸ್ಯೆಗಳನ್ನು ತಡೆಯುತ್ತದೆ.
- 2025-26 ರಲ್ಲಿ ಈ ಸಬ್ಸಿಡಿಗೆ 12,000 ಕೋಟಿ ರೂಪಾಯು ವ್ಯಯ, ಇದು ಎಲ್‍ಪಿಜಿ ಬಳಕೆಯನ್ನು 29% ಹೆಚ್ಚಿಸಿದೆ.
ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು:
- ಆಧಾರ್ ಕಾರ್ಡ್
- ಬಿಪಿಎಲ್ ರೇಷನ್ ಕಾರ್ಡ್
- ಬ್ಯಾಂಕ್ ಪಾಸ್‍ಬುಕ್
- ಮೊಬೈಲ್ ನಂಬರ್
- ಜಾತಿ/ಆದಾಯ ಪ್ರಮಾಣ ಪತ್ರ
- ಇತ್ತೀಚಿನ ಫೋಟೋಗಳು
- ವೋಟರ್ ಐಡಿ
- ಭೂಮಿ ದಾಖಲೆ
ಅರ್ಜಿ ಸಲ್ಲಿಸುವ ವಿಧಾನ : ಅಧಿಕೃತ ವೆಬ್‍ಸೈಟ್‍ಗಳಿಗೆ ಬೇಟಿ ನೀಡಿ PMAY ಗೆ pmaymis.gov.in , ಆದಾರ್ ಲಿಂಕ್ ಮಾಡಿ, ಫಾರ್ಮ್ ಭರ್ತಿ ಮಾಡಿ ಮತ್ತು ದಾಖಲೆಗಳನ್ನು ಆಪ್‍ಲೋಡ್ ಮಾಡಿಕೊಳ್ಳಬೇಕು. ಅಥವಾ ಗ್ರಾಮ ಪಂಚಾಯತ್ ಭೇಟಿ ನೀಡಿ ಮಾಹಿತಿ ತಿಳಿದುಕೊಳ್ಳಿ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement

