ಬೆಳಿಗ್ಗೆ ತಿಂಡಿನಾ – ಊಟಾನಾ ? ಇದು ಸರಿಸುಮಾರು ಎಲ್ಲರ ಪ್ರಶ್ನೆ?

April 17, 2024
4:52 PM

ಭಾರತದಲ್ಲಿ(India) ನಮ್ಮ ಹಿರಿಯರು(ancestors) ಬೆಳಿಗ್ಗೆ ಹೊಟ್ಟೆ ತುಂಬಾ ಊಟ(Meals) ಮಾಡುತ್ತಿದ್ದರು. ಬ್ರಿಟಿಷ್(British) ಪ್ರಭಾವದಿಂದಾಗಿ ಮತ್ತು ಬ್ರಿಟಿಷ್ ಆಹಾರಗಳ(Food) ಪರಿಚಯದಿಂದಾಗಿ ರಾತ್ರಿ ಊಟ ಮಾಡಿ ಮಲಗಿದ ನಂತರ ಯಾವುದೇ ಕೆಲಸಗಳಲ್ಲಿ ನಾವು ತೊಡಗಿಸಿಕೊಂಡಿರುವುದಿಲ್ಲ, ಹೀಗಾಗಿ ಬೆಳಿಗ್ಗೆ ಹೆಚ್ಚು ತಿನ್ನುವ ಅವಶ್ಯಕತೆ ಇಲ್ಲ ಎಂಬ ವಾದದಿಂದಾಗಿ, ನಮ್ಮ ಆಹಾರ ಪದ್ಧತಿಯಲ್ಲಿ(Food style) ಬದಲಾವಣೆ ಉಂಟಾಗಿ, ನಾವು ಕೂಡ ಬೆಳಿಗ್ಗೆ ತಿಂಡಿಗೆ ಜೋತುಬಿದ್ದೆವು.

ಆಯುರ್ವೇದ ದಿನಕ್ಕೆ ಎರಡು ಬಾರಿ ಊಟ ಎಂದು ಹೇಳುತ್ತದೆ. ಆಧುನಿಕ ವಿಜ್ಞಾನದ ಪ್ರಕಾರ ಪ್ರತಿಯೊಬ್ಬ ಮನುಷ್ಯನ ಮೆದುಳಿನಲ್ಲಿರುವ ಪೈನಿಯಲ್ ಎಂಬ ಗ್ರಂಥಿ ನಮ್ಮ ದೇಹದ ಎಲ್ಲಾ ಚಟುವಟಿಕೆಗಳನ್ನು ನಿಯಂತ್ರಿಸುತ್ತದೆ. ನಿರ್ದಿಷ್ಟ ವೇಳೆಯಲ್ಲಿ, ನಿರ್ದಿಷ್ಟ ಚಟುವಟಿಕೆಗಳಲ್ಲಿ ಪೈನಿಯಲ್ ಗ್ರಂಥಿಯ ಆದೇಶದ ಮೇರೆಗೆ ನಮ್ಮ ದೇಹ ನಿರತವಾಗಿರುತ್ತದೆ. ಇದನ್ನು ಜೈವಿಕ ಗಡಿಯಾರ ಎನ್ನುತ್ತಾರೆ. ನಮ್ಮ ದೇಹದ ಜೀರ್ಣಾಂಗಗಳು ಬೆಳಿಗ್ಗೆ 7 ರಿಂದ 9ರ ವರೆಗೆ ಅತ್ಯಂತ ಹೆಚ್ಚು ಕ್ರಿಯಾಶೀಲವಾಗಿರುತ್ತವೆ. ಅಂದರೆ ಆ ವೇಳೆಯಲ್ಲಿ ನಾವು ಹೆಚ್ಚು ತಿಂದರೂ ಕೂಡ ಅದೆಲ್ಲವೂ ಜೀರ್ಣವಾಗಿ, ಪೋಷಕಾಂಶವಾಗಿ ದೇಹಕ್ಕೆ ದೊರೆಯುತ್ತದೆ. ಕಡಿಮೆ ತಿಂದರೆ ಕಡಿಮೆ ಪೋಷಕಾಂಶಗಳು ದೇಹಕ್ಕೆ ದೊರೆಯುತ್ತವೆ. ಅಂದರೆ ವೈಜ್ಞಾನಿಕವಾಗಿ ಕೂಡ ನಾವು ಬೆಳಿಗ್ಗೆ ಹೆಚ್ಚು ತಿನ್ನಲೇಬೇಕು.

ನೀವೂ ತಿಂಡಿ ಬಿಟ್ಟು ಊಟ ಮಾಡಲು ಪ್ರಾರಂಭಿಸಿ, ಉತ್ತಮ ಆರೋಗ್ಯ ಹೊಂದಿ, ಮಕ್ಕಳಲ್ಲಿ ಈ ರೂಡಿ ಬೆಳೆಸಿ.

ಬರಹ :
ಡಾ ಶ್ರೀಶೈಲ ಬದಾಮಿ
, ಧಾರವಾಡ,

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ನಗರೀಕರಣದ ನಡುವೆ ಪ್ರಕೃತಿ, ವನ್ಯಜೀವಿಗಳ ಸಮತೋಲನ ಕಾಪಾಡುವುದು ಆದ್ಯತೆಯಾಗಲಿ
October 10, 2026
2:55 PM
by: ದ ರೂರಲ್ ಮಿರರ್.ಕಾಂ
ಕೊರಿಯರ್ ಮೂಲಕ ಮಾದಕ ದ್ರವ್ಯ ಸಾಗಾಟ..! ಮಂಗಳೂರಿನಲ್ಲಿ 1.58 ಕೋಟಿ ರೂ. ಮೌಲ್ಯದ ಎಂಡಿಎಂಎ ವಶ
October 10, 2026
2:51 PM
by: ದ ರೂರಲ್ ಮಿರರ್.ಕಾಂ
ಡಿಸೆಂಬರ್‌ನಲ್ಲಿ ಮತ್ತಷ್ಟು ತೀವ್ರಗೊಳ್ಳಲಿದೆಯೇ ಎಲ್‌ನಿನೋ..? ಬರ, ಪ್ರವಾಹದ ಅಪಾಯದ ಬಗ್ಗೆ ವಿಶ್ವ ಹವಾಮಾನ ಸಂಸ್ಥೆ ಎಚ್ಚರಿಕೆ
October 10, 2026
2:44 PM
by: ದ ರೂರಲ್ ಮಿರರ್.ಕಾಂ
ಉಪ್ಪಿನಂಗಡಿಯ ಮೌಲ್ಯಾಧಾರಿತ ಶಿಕ್ಷಣ ಕ್ರಾಂತಿಯ ಹರಿಕಾರ ಯು.ಜಿ. ರಾಧ ಭಟ್ – ಗ್ರಾಮೀಣ ನೆಲದಲ್ಲಿ ಅರಳಿದ ಶ್ರೀರಾಮ ಶಾಲೆಯ ಯಶೋಗಾಥೆ
October 10, 2026
2:06 PM
by: ಅರುಣ್‌ ಕುಮಾರ್ ಕಾಂಚೋಡು

You cannot copy content of this page - Copyright -The Rural Mirror