MIRROR FOCUS

#RuralIndia | 9 ದಿನಗಳಾಯ್ತು ಗ್ರಾಮೀಣ ಭಾಗ ಬೆಂಡೋಡಿಗೆ ಸಂಪರ್ಕವಿಲ್ಲ….! | ಯಾರಿದ್ದಾರೆ ಗ್ರಾಮೀಣ ಭಾರತದ ರಕ್ಷಕರು…!?

Share

ಭಾರತದ ಆತ್ಮ ಹಳ್ಳಿಗಳು. ಅಂದರೆ ಗ್ರಾಮೀಣ ಭಾರತವೇ ದೇಶದ ಶಕ್ತಿ…!. ಇಲ್ಲಿ ನೋಡಿದರೆ ಒಂದು ಮಳೆಗೆ ಸೇತುವೆ ಕೊಚ್ಚಿ ಹೋಗಿದೆ, ಹಳ್ಳಿಯ ಜನರು 9 ದಿನಗಳಿಂದ ಸಂಪರ್ಕದಿಂದ ವಂಚಿತರಾಗಿದ್ದಾರೆ. ಅಧಿಕಾರಿಗಳೆಲ್ಲಾ ಬಂದಿದ್ದಾರೆ..! ಪ್ರಯೋಜನ ಶೂನ್ಯ…!.

Advertisement
ಬೆಂಡೋಡಿಯಲ್ಲಿ ಕೊಚ್ಚಿ ಹೋದ ಸೇತುವೆ | Photo Credit : Locals

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕೊಲ್ಲಮೊಗ್ರ ಎನ್ನುವುದು ತೀರಾ ಗ್ರಾಮೀಣ ಭಾಗ. ಕಳೆದ ವರ್ಷ ಭಾರೀ ಮಳೆ ಹಾಗೂ ಜಲಸ್ಫೋಟದ ಕಾರಣದಿಂದ ಹಲವಾರು ಕಿರು ಸೇತುವೆ, ಸೇತುವೆ, ಕೃಷಿ ಭೂಮಿ ನಾಶವಾಗಿತ್ತು. ಈ ಸಂದರ್ಭ ಬೆಂಡೋಡಿ ಎನ್ನುವ ಪುಟ್ಟ ಹಳ್ಳಿಯನ್ನು ಸಂಪರ್ಕ ಮಾಡುವ ಸೇತುವೆ ಕೊಚ್ಚಿ ಹೋಗಿತ್ತು. ಈ ಪುಟ್ಟ ಹಳ್ಳಿ ಬೆಂಡೋಡಿಯು ಕೊಲ್ಲಮೊಗ್ರ ಹಾಗೂ ಹರಿಹರ ಗ್ರಾಮವನ್ನು ಸಂಪರ್ಕ ಮಾಡಲೇಬೇಕು. ಇಲ್ಲದೇ ಇದ್ದರೆ ಈ ಹಳ್ಳಿಗೆ ಯಾವ ಸಂಪರ್ಕವೂ ಇಲ್ಲವಾಗುತ್ತದೆ. ಜನರು ಪ್ರತೀ ದಿನ ಏನಾದರೂ ಕೆಲಸಕ್ಕೆ ಇಲ್ಲಿಗೆ ಬರಲೇಬೇಕು.

ಕಳೆದ ವರ್ಷ ಜಲಸ್ಫೋಟದ ಕಾರಣದಿಂದ ಹಾನಿಯಾದ ಬಳಿಕ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿದಾಗ ಉಸ್ತುವಾರಿ ಸಚಿವರು ಈ ಸೇತುವೆ ಕಾಮಗಾರಿ ತಕ್ಷಣವೇ ಮಾಡಿ ಎಂದರು. ಸ್ಥಳೀಯರು ಸೇರಿಕೊಂಡು ಸುಮಾರು 11 ಲಕ್ಷ ರೂಪಾಯಿ ವೆಚ್ಚದಲ್ಲಿ  16 ಮೋರಿಗಳನ್ನು ತಂದು ಮರಳು ಚೀಲ ಇರಿಸಿ ತಾತ್ಕಾಲಿಕ ವ್ಯವಸ್ಥೆ ಮಾಡಿದರು. ಆದರೆ ಇದಕ್ಕೆ ಇದುವರೆಗೂ ಅನುದಾನ ಸಿಕ್ಕಿಲ್ಲ…!. ಅಂತೂ ಒಟ್ಟು ಸುಮಾರು 1.20 ಲಕ್ಷ ಅನುದಾನ ಭಾಗ್ಯ ದೊರೆತದ್ದು ಬಿಟ್ಟರೆ ಬೇರೆ ಯಾವುದೇ ಹಣ ದೊರೆತಿಲ್ಲ. ಹಾಗಿದ್ದೂ ಊರಿನ ಕೆಲಸ ಎಂದು ಕಾಮಗಾರಿ ನಡೆಸಿದರೂ ಸಹಿಸಿಕೊಂಡು ಅನುದಾನದಕ್ಕಾಗಿ ಬೇಡಿಕೆ ಸಲ್ಲಿಸುತ್ತಿದ್ದರು.

ಬೆಂಡೋಡಿಯಲ್ಲಿ ಕೊಚ್ಚಿ ಹೋದ ಸೇತುವೆ

ಈ ಬಾರಿ ಮತ್ತೆ ಸುರಿದ ಭಾರೀ ಮಳೆಗೆ ಸೇತುವೆ ಕೊಚ್ಚಿ ಹೋಗಿದೆ. ಸಂಪರ್ಕ ಕಡಿತಗೊಂಡಿದೆ. ಈಗಲೂ ಭೇಟಿ ನೀಡಿದ ಅಧಿಕಾರಿಗಳು, ಜನಪ್ರತಿನಿಧಿಗಳು ಕಾಮಗಾರಿ ಮಾಡಿ ಅನುದಾನ ಒದಗಿಸುವ ಎಂದರೆ ಯಾವೊಬ್ಬ ಗುತ್ತಿಗೆದಾರರೂ ಕೆಲಸಕ್ಕೆ ಬಂದಿಲ್ಲ.  ಮಳೆಹಾನಿಯಲ್ಲಿ ಮಂಜೂರು ಮಾಡುವ ಭರವಸೆ ನೀಡಿದರೂ ಕಳೆದ ವರ್ಷದ ಕಹಿ ಅನುಭವದಲ್ಲಿ ಸ್ಥಳೀಯರು ಕೆಲಸ ಮಾಡುತ್ತಿಲ್ಲ.

ಈಗ ಬೆಂಡೋಡಿ ಪ್ರದೇಶದ ಜನರು ಸಂಕಷ್ಟಲ್ಲಿದ್ದಾರೆ. ಹೊರಜಗತ್ತಿನ ಸಂಪರ್ಕ ಇಲ್ಲದೆ ಪರದಾಟ ನಡೆಸುತ್ತಿದ್ದಾರೆ.  ಈಚೆಗೆ ಸಹಾಯಕ ಕಮೀಶನರ್‌ ಭೇಟಿ ನೀಡಿದರು, ಇಲಾಖೆಯ ಇಂಜಿನಿಯರ್‌ ಭೇಟಿ ನೀಡಿದರು. ಒಟ್ಟು ಈಗಾಗಲೇ 9 ದಿನಗಳು ಕಳೆದು ಹೋದವು. ಜನರು ಮಳೆ ಇದ್ದರೆ ನಡೆದು ಬಾರಲಾಗದ ಸ್ಥಿತಿಯಲ್ಲಿದ್ದಾರೆ.

ಇದೀಗ ಜನರೂ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇಲಾಖೆ, ಸರ್ಕಾರ ಈ ಸೇತುವೆಯನ್ನು ತಾತ್ಕಾಲಿಕ ವ್ಯವಸ್ಥೆಯಾದರೂ ಮಾಡಿಕೊಡಿ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಒಂದು ವೇಳೆ ಇಲಾಖೆಗಳು, ಸರ್ಕಾರ ಮಾಡದೇ ಇದ್ದರೆ ಸ್ವಂತ ಹಣದಿಂದಲಾದರೂ ಮಾಡಲೇಬೇಕಾದ ಅನಿವಾರ್ಯತೆ ಇದೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಗ್ರಾಮೀಣ ಭಾರತದ ಅಭಿವೃದ್ಧಿಯ ಕಡೆಗೆ ಗಮನಹರಿಸಬೇಕಾದ ಇಲಾಖೆಗಳು, ಆಡಳಿತವು ಏಕಿಷ್ಟು ನಿರ್ಲಕ್ಷ್ಯ ಮಾಡುತ್ತಿದೆ ?

 

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಮಣಿಪುರದಲ್ಲಿ 68 ಟನ್ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಅಡಿಕೆ ವಶ

ಅಕ್ರಮವಾಗಿ ಸುಮಾರು 68 ಟನ್‌ ಅಡಿಕೆ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಅಸ್ಸಾಂ ಪೊಲೀಸರು…

2 hours ago

ಅಡುಗೆ ಮನೆ ‘ಬೇಯಿಸುವ ಕೋಣೆ’ಯಲ್ಲ!

ಬದುಕಿನ ಒಂದೊಂದು ಅಂಗವೂ ‘ಕಲಾತ್ಮಕ’. ಒದಗುವ ಸುಭಗತನವು ಅನುಭವವೇದ್ಯ. ಅಡುಗೆ ಮನೆಯು ಬರೇ…

3 hours ago

2025ರಲ್ಲಿ ಶನಿ ತಮ್ಮ ನಕ್ಷತ್ರ ಅಥವಾ ರಾಶಿಯಲ್ಲಿ ಅಧೋಗತಿಯ ಚಲನೆ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜೋತಿಷಿಗಳನ್ನು ಸಂಪರ್ಕಿಸಿ 9535156490

4 hours ago

ತಾಪಮಾನ ಹೆಚ್ಚಳ | ಬನ್ನೇರುಘಟ್ಟ ಉದ್ಯಾನವನದಲ್ಲಿ ಪ್ರಾಣಿಗಳಿಗೆ ತಂಪಾದ ಆಹಾರ ಪದಾರ್ಥ |

ಬೇಸಿಗೆ ತಾಪಮಾನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮೃಗಾಲಯದ ಪ್ರಾಣಿಗಳು ಸುಡುಬಿಸಿಲಿಗೆ ಕಂಗಾಲಾಗಿದ್ದು, ಮಧ್ಯಾಹ್ನದ ವೇಳೆಯಲ್ಲಿ…

13 hours ago

ತೊಗರಿ ಉತ್ಪನ್ನ ಖರೀದಿ ಅವಧಿ ಎ.25 ರವರೆಗೆ ವಿಸ್ತರಣೆ

ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ತೊಗರಿ ಉತ್ಪನ್ನವನ್ನು ಖರೀದಿಸುವ…

13 hours ago

ತಾಂತ್ರಿಕ ಸಮಸ್ಯೆ | ದೇಶಾದ್ಯಂತ ಯುಪಿಐ, ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯ

ತಾಂತ್ರಿಕ ಸಮಸ್ಯೆ ಹಿನ್ನೆಲೆಯಲ್ಲಿ ಏಕೀಕೃತ ಪಾವತಿ ಇಂಟರ್ ಫೇಸ್ - ಯುಪಿಐ ಸೇವೆಯ…

13 hours ago