ಬಿ ಎಸ್ ಎನ್ ಎಲ್ ನ ಕೇಬಲ್ ಕಳವು ಗೈದ ಐವರು ಅಸ್ಸಾಂ ನಿವಾಸಿಗಳನ್ನು ಕಾಸರಗೋಡು ಚಿಮೇನಿ ಪೊಲೀಸರು ಬಂಧಿಸಿದ್ದಾರೆ. ಇವರು ಕಳವುಗೈದ ಸುಮಾರು ಒಂದು ಲಕ್ಷ ರೂ. ಮೌಲ್ಯದ ಕೇಬಲ್ ನ್ನು ಪೊಲೀಸರು ವಶಕ್ಕೆ ತೆಗೆದು ಕೊಂಡಿದ್ದಾರೆ.ರಸೂಲ್ ಹಸನ್, ಮಜಿದುಲ್ ಇಸ್ಲಾಂ, ಪೂಲ್ ಬಾರ್ ಅಲಿ, ಶರೀಫುಲ್, ಮುಹಮ್ಮದ್ ರೂಬಿ ಉಲ್ ಇಸ್ಲಾಂ ಬಂಧಿತರು.
ವಾಹನ ತಪಾಸಣೆ ನಡೆಸುತ್ತಿದ್ದಾಗ ಪೊಲೀಸರನ್ನು ಕಂಡು ವಾಹನ ನಿಲ್ಲಿಸದೆ ಪರಾರಿಯಾಗಿದ್ದು, ಸಂಶಯ ಗೊಂಡು ಪೊಲೀಸರು ಬೆನ್ನಟ್ಟಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದು ತಪಾಸಣೆ ನಡೆಸಿದಾಗ ಕೇಬಲ್ ಪತ್ತೆಯಾಗಿದೆ.ಕಚ್ಚಾ ಸಾಮಗ್ರಿ ಹೆಕ್ಕುವ ನೆಪದಲ್ಲಿ ಬಂದಿದ್ದ ಇವರು ಕೇಬಲ್ ನ್ನು ಕಳವು ಗೈದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel