ಬಿ ಎಸ್ ಎನ್ ಎಲ್ ವಿರುದ್ಧ ಸುಳ್ಯದ ಗ್ರಾಹಕನಿಗೆ ಜಯ – ಇಂಟರ್ನೆಟ್ ಸೇವೆಯಲ್ಲಿ ವ್ಯತ್ಯಯಕ್ಕೆ ₹30,000 ಪರಿಹಾರ ಆದೇಶ..!

May 1, 2026
2:37 PM
ಇಂಟರ್ನೆಟ್ ಸೇವೆ ವ್ಯತ್ಯಯಕ್ಕೆ ಸುಳ್ಯದ ಗ್ರಾಹಕನಿಗೆ ₹30,000 ಪರಿಹಾರ ನೀಡಲು ಆದೇಶ. ಬಿ ಎಸ್ ಎನ್ ಎಲ್ ಸೇವಾ ನ್ಯೂನತೆ ಸ್ಪಷ್ಟ ಎಂದು ಗ್ರಾಹಕ ಆಯೋಗ ತೀರ್ಪು ನೀಡಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ನಿವಾಸಿ ಪುಚ್ಚಪ್ಪಾಡಿಯ ಹರಿಸುಬ್ರಹ್ಮಣ್ಯ ಅವರಿಗೆ ಬಿ ಎಸ್‌ ಎನ್‌ ಎಲ್‌ ವಿರುದ್ಧದ ಹೋರಾಟದಲ್ಲಿ ಕಾನೂನು ಜಯ ದೊರೆತಿದ್ದು, ಇಂಟರ್ನೆಟ್ ಸೇವಾ ವ್ಯತ್ಯಯದ ಪ್ರಕರಣದಲ್ಲಿ ಬಿ ಎಸ್ ಎನ್ ಎಲ್ ವಿರುದ್ಧ ಗ್ರಾಹಕ ನ್ಯಾಯಾಲಯ ಪರಿಹಾರ ನೀಡಲು ಆದೇಶಿಸಿದೆ.

ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕ ವಿವಾದ ಪರಿಹಾರ ಆಯೋಗವು ನೀಡಿದ ತೀರ್ಪಿನಲ್ಲಿ, ಸೇವಾ ನ್ಯೂನತೆ ಹಾಗೂ ಮಾನಸಿಕ ಯಾತನೆಗಾಗಿ ₹25,000 ಮತ್ತು ಮೊಕದ್ದಮೆ ವೆಚ್ಚವಾಗಿ ₹5,000 ಸೇರಿ ಒಟ್ಟು ₹30,000 ಪರಿಹಾರವನ್ನು ಪಾವತಿಸಲು ಸೂಚಿಸಿದೆ. ಈ ಮೊತ್ತವನ್ನು ತೀರ್ಪಿನ ದಿನಾಂಕದಿಂದ 45 ದಿನಗಳೊಳಗೆ ಪಾವತಿಸಬೇಕು ಎಂದು ಆದೇಶಿಸಲಾಗಿದೆ.

ದೂರುದಾರರಾದ ಹರಿಸುಬ್ರಹ್ಮಣ್ಯ ಅವರು 2019ರ ಫೆಬ್ರವರಿಯಿಂದ ಬಿ ಎಸ್ ಎನ್ ಎಲ್ ಏರ್ ಫೈಬರ್(BSNL AirFiber) ಸಂಪರ್ಕವನ್ನು ಬಳಸುತ್ತಿದ್ದು, ತಿಂಗಳಿಗೆ ₹589 ಶುಲ್ಕ ಪಾವತಿಸುತ್ತಿದ್ದರು. ಗುತ್ತಿಗಾರು ಗ್ರಾಮದಲ್ಲಿ ಬಿ ಎಸ್ ಎನ್ ಎಲ್ ಏಕೈಕ ಇಂಟರ್ನೆಟ್ ಸೇವೆ ಇದ್ದು, ಮನೆಯಿಂದಲೇ ಕೆಲಸ ನಿರ್ವಹಿಸುತ್ತಿದ್ದ ಅವರಿಗೆ ಈ ಸಂಪರ್ಕ ಅತ್ಯವಶ್ಯಕವಾಗಿತ್ತು.

ಆದರೆ 2024ರ ಡಿಸೆಂಬರ್ 26ರಂದು ಇಂಟರ್ನೆಟ್ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿದ್ದು, ಸ್ಥಳೀಯ ಕಚೇರಿ ಹಾಗೂ ಗ್ರಾಹಕ ಸೇವಾ ಕೇಂದ್ರಕ್ಕೆ ಪದೇಪದೇ ದೂರು ನೀಡಿದರೂ ಯಾವುದೇ ಪರಿಹಾರ ದೊರಕಲಿಲ್ಲ. ಇದರಿಂದಾಗಿ ಅವರು ಗ್ರಾಹಕ ಆಯೋಗದ ಮೆಟ್ಟಿಲೇರಿದ್ದರು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಈ ಕುರಿತು ಪ್ರತಿಕ್ರಿಯಿಸಿದ ಹರಿಸುಬ್ರಹ್ಮಣ್ಯ ಅವರು, “ನಮ್ಮ ಗ್ರಾಮದಲ್ಲಿ ಬೇರೇ ಯಾವುದೇ ಇಂಟರ್ನೆಟ್ ಆಯ್ಕೆಯಿಲ್ಲ. ಬಿ ಎಸ್ ಎನ್ ಎಲ್ ಸೇವೆ ಸ್ಥಗಿತಗೊಂಡಾಗ ಸಂಕಷ್ಟವಾಗಿತ್ತು. ತಕ್ಷಣದ ಸೇವಾ ಸೌಲಭ್ಯವೂ ದೊರಕುತ್ತಿಲ್ಲ. ಈ ತೀರ್ಪು ಗ್ರಾಮೀಣ ಗ್ರಾಹಕರಿಗೂ ಹಕ್ಕುಗಳಿವೆ ಎಂಬುದನ್ನು ಸಾಬೀತುಪಡಿಸುತ್ತದೆ” ಎಂದು ಹೇಳಿದ್ದಾರೆ.

ಆಯೋಗ ತನ್ನ ತೀರ್ಪಿನಲ್ಲಿ, ಮಾಸಿಕ ಶುಲ್ಕ ಸ್ವೀಕರಿಸಿದ ನಂತರ ನಿರಂತರ ಹಾಗೂ ಗುಣಮಟ್ಟದ ಸೇವೆ ಒದಗಿಸುವುದು ಸಂಸ್ಥೆಯ ಕರ್ತವ್ಯ ಎಂದು ಸ್ಪಷ್ಟಪಡಿಸಿದೆ. ಪದೇಪದೇ ಸೇವೆ ವ್ಯತ್ಯಯಗೊಂಡು ದೂರುಗಳನ್ನು ನಿರ್ಲಕ್ಷಿಸಿರುವುದು ಸ್ಪಷ್ಟ ಸೇವಾ ನ್ಯೂನತೆ ಎಂದು ಹೇಳಿದೆ. ಗ್ರಾಹಕರಿಗೆ ನ್ಯಾಯಾಲಯದ ಮೊರೆ ಹೋಗುವ ಪರಿಸ್ಥಿತಿ ಬರದಂತೆ ಸಂಸ್ಥೆಯೇ ಸಮಸ್ಯೆ ಪರಿಹರಿಸಬೇಕಾಗಿತ್ತು ಎಂದು ಆಯೋಗ ಅಭಿಪ್ರಾಯಪಟ್ಟಿದೆ.

ನಿಗದಿತ 45 ದಿನಗಳೊಳಗೆ ಪರಿಹಾರ ಮೊತ್ತ ಪಾವತಿಸದಿದ್ದಲ್ಲಿ, ಬಾಕಿ ಮೊತ್ತಕ್ಕೆ ವಾರ್ಷಿಕ ಶೇ.6ರ ಬಡ್ಡಿ ವಿಧಿಸಲಾಗುತ್ತದೆ ಎಂದು ಸೂಚಿಸಲಾಗಿದೆ.

ಈ ತೀರ್ಪು ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಹಾಗೂ ಅರೆನಗರ ಪ್ರದೇಶಗಳಲ್ಲಿನ ಗ್ರಾಹಕರಿಗೆ ಮಾದರಿಯಾಗಿದ್ದು, ಸ್ಥಳ ಯಾವುದೇ ಆಗಿರಲಿ ಗ್ರಾಹಕ ಹಕ್ಕುಗಳು ಮುಖ್ಯವಾಗಿರುತ್ತದೆ ಎಂಬುದನ್ನು ಪುನರುಚ್ಚರಿಸಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

A consumer from Sullia in Dakshina Kannada has won a case against BSNL over internet service disruption. The district consumer commission ordered BSNL to pay ₹30,000 compensation for service deficiency and mental distress, reinforcing consumer rights in rural areas.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್

the rural mirror news

ಇದನ್ನೂ ಓದಿ

ಹವಾಮಾನ ವರದಿ | 22-08-2026 | ಕರಾವಳಿಯಲ್ಲಿ ಮಳೆ ಇಳಿಕೆ, 26ರಿಂದ ಮತ್ತಷ್ಟು ದುರ್ಬಲವಾಗುವ ಸಾಧ್ಯತೆ
August 22, 2026
2:07 PM
by: ಸಾಯಿಶೇಖರ್ ಕರಿಕಳ
ಸೆಪ್ಟೆಂಬರ್‌ನಲ್ಲಿ ಪಿಎಂ ಕಿಸಾನ್ ಹಣ ಬರಬೇಕೇ? ರೈತರು ಈಗಲೇ e-KYC ಪೂರ್ಣಗೊಳಿಸಿ
August 22, 2026
6:47 AM
by: ದ ರೂರಲ್ ಮಿರರ್.ಕಾಂ
ಬೆಳೆ ವಿಮೆಗೆ ರೈತರಿಗೆ ಮತ್ತೊಂದು ಅವಕಾಶ : ಆಗಸ್ಟ್ 31ರವರೆಗೆ ನೋಂದಣಿ ಅವಧಿ ವಿಸ್ತರಣೆ
August 21, 2026
7:49 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 21-08-2026 | ಕರಾವಳಿಯಲ್ಲಿ ಆ.23–25 ರಂದು ಮಳೆ ಹೆಚ್ಚಳ ಸಾಧ್ಯತೆ – ಆ.26ರವರೆಗೆ ಮೋಡ–ಮಳೆ
August 21, 2026
4:04 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror