Advertisement
MIRROR FOCUS

ಬಿಎಸ್ ಎನ್ ಎಲ್  ಪರಿಶೀಲನಾ ಸಭೆ | ʻಬಿಎಸ್ಎನ್ಎಲ್‌ʼ ಸೇವೆಗಳ ಸುಧಾರಣೆಗೆ ಕ್ರಮ

Share

ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ದೆಹಲಿಯಲ್ಲಿ ʻಭಾರತ್ ಸಂಚಾರ್ ನಿಗಮ್ ಲಿಮಿಟೆಡ್ʼನ- ಬಿಎಸ್ಎನ್ಎಲ್ (BSNL) ಮುಖ್ಯ ಪ್ರಧಾನ ವ್ಯವಸ್ಥಾಪಕರೊಂದಿಗೆ ನಿನ್ನೆ  ಪರಿಶೀಲನಾ ಸಭೆ ನಡೆಸಿದರು.

ಈ ವೇಳೆ ಸಂವಹನ ಖಾತೆ ಸಹಾಯಕ ಸಚಿವ ಪೆಮ್ಮಸಾನಿ ಚಂದ್ರಶೇಖರ್ ಮತ್ತು ದೂರಸಂಪರ್ಕ ಇಲಾಖೆಯ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಈ ಉನ್ನತ ಮಟ್ಟದ ಸಭೆಯಲ್ಲಿ ʻಬಿಎಸ್ಎನ್ಎಲ್ʼ (BSNL)ನ ಕಾರ್ಯಾಚರಣೆಯ ಪ್ರಗತಿ, ಪ್ರಾದೇಶಿಕ ಸವಾಲುಗಳ ಕುರಿತು ಚರ್ಚಿಸಲಾಯಿತು. ಜೊತೆಗೆ, ಕಂಪನಿಯ ಜಾಲ ಹಾಗೂ ಸೇವಾ ವಿತರಣೆಯ ಮುಂದಿನ ಕಾರ್ಯತಂತ್ರದ ಬಗ್ಗೆ ಪರಿಶೀಲಿಸಲಾಯಿತು.

ಬಳಿಕ   ಜ್ಯೋತಿರಾದಿತ್ಯ ಸಿಂಧಿಯಾ , ಟೆಲಿಕಾಂ ಕ್ಷೇತ್ರದಲ್ಲಿ ʻಬಿಎಸ್ಎನ್ಎಲ್ʼನ ಪಾತ್ರವನ್ನು ಬಲಪಡಿಸುವುದು, ಮೂಲಸೌಕರ್ಯ ಜಾರಿಯನ್ನು ವೇಗಗೊಳಿಸುವುದು ಮತ್ತು ನಾಗರಿಕ ಕೇಂದ್ರಿತ ಸೇವಾ ವಿತರಣೆಯನ್ನು ಹೆಚ್ಚಿಸುವ ಬಗ್ಗೆ ಚರ್ಚೆಯ ವೇಳೆ ಗಮನ ಹರಿಸಲಾಯಿತು ಎಂದು ಹೇಳಿದರು.

ʻಬಿಎಸ್ಎನ್ಎಲ್‌ʼ (BSNL)ನ ಬೆಳವಣಿಗೆಯ ಕಾರ್ಯತಂತ್ರ, ನೆಟ್ ವರ್ಕ್ ಕಾರ್ಯಕ್ಷಮತೆಯನ್ನು ಸುಧಾರಿಸುವುದು, ಗ್ರಾಹಕ ಸೇವಾ ವಿತರಣೆ ಮತ್ತು ಸಾಂಸ್ಥಿಕ ಆಧುನೀಕರಣದ ಬಗ್ಗೆ ಗಮನ ಕೇಂದ್ರೀಕರಿಸಲಾಯಿತು. ಈ ಸಮಗ್ರ ಸಂವಾದ ವೇಳೆ ಎಲ್ಲಾ ವ್ಯವಹಾರ ಘಟಕಗಳಲ್ಲಿ  ಆದಾಯ ಮೊದಲು ಎಂಬ ಗುರಿಗಳ ಸ್ಪಷ್ಟ ಉದ್ದೇಶದೊಂದಿಗೆ ಗ್ರಾಹಕ-ಕೇಂದ್ರಿತ ಟೆಲಿಕಾಂ ಸೇವಾ ಪೂರೈಕೆದಾರನಾಗಿ ʻಬಿಎಸ್ಎನ್ಎಲ್‌ʼ(BSNL)ನ  ಸೇವೆಗಳನ್ನು ಸುಧಾರಿಸಬೇಕು ಎಂದು ತಿಳಿಸಿದರು.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಅಡಿಕೆ ಮಾರುಕಟ್ಟೆ ಜಿಗಿತ | ಮಂಗಳೂರು ಹೊಸ ಚಾಲಿ ₹500 ದಾಟಿತು – ಏಪ್ರಿಲ್‌ನಲ್ಲಿ ಮತ್ತಷ್ಟು ಏರಿಕೆ ಸೂಚನೆ!

ಮಂಗಳೂರು ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ₹500 ಮತ್ತು ಹಳೆ ಅಡಿಕೆ ₹555…

2 hours ago

ರಸ್ತೆ ಬದಿ ಕಸ ಎಸೆದ್ರೆ ಜಾಗ್ರತೆ..! ದಂಡ ಕೊಡ್ಲಿಲ್ಲ ಅಂದ್ರೆ FIR ಫಿಕ್ಸ್..!

ರಸ್ತೆ ಬದಿ ಕಸ ಎಸೆಯುವವರಿಗೆ ದಂಡ ವಿಧಿಸಲಾಗುತ್ತದೆ, ಪಾವತಿಸದಿದ್ದರೆ FIR ದಾಖಲಾಗುತ್ತದೆ. ಗ್ರಾಮ…

6 hours ago

ಹವಾಮಾನ ವರದಿ | 02-04-2026 | ಕರಾವಳಿಯಲ್ಲಿ ಮಳೆ ಅನಿಶ್ಚಿತತೆ, ಒಳನಾಡಿನಲ್ಲಿ ಬಿಸಿಲು

ಕರಾವಳಿಯಲ್ಲಿ ಮಳೆಯ ಸಾಧ್ಯತೆ ಇದ್ದರೂ ಗಾಳಿಯ ಪ್ರಭಾವದಿಂದ ಅದು ಕಡಿಮೆಯಾಗಬಹುದು. ಉಳಿದ ಕರ್ನಾಟಕದಲ್ಲಿ…

24 hours ago

ಮಂಗಳೂರು ಅಡಿಕೆ ಮಾರುಕಟ್ಟೆ | ಸ್ಥಿರತೆಯಿಂದ ಏರಿಕೆಯತ್ತ ಮುಖ ಮಾಡಿದ ಧಾರಣೆ

ಅಡಿಕೆ ಮಾರುಕಟ್ಟೆ ಸ್ಥಿರದಿಂದ ಏರಿಕೆಯತ್ತ ಸಾಗುತ್ತಿದೆ. ಜೂನ್-ಜುಲೈನಲ್ಲಿ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ.

1 day ago

ಜನಗಣತಿ 2026 – ಏಪ್ರಿಲ್ 1ರಿಂದ ಸ್ವಯಂ-ಎಣಿಕೆ ಆರಂಭ – ಸಹಕರಿಸಲು ಜಿಲ್ಲಾಧಿಕಾರಿ ಕರೆ

ಏಪ್ರಿಲ್ 1ರಿಂದ 15ರವರೆಗೆ ಸ್ವಯಂ-ಎಣಿಕೆ ಆರಂಭವಾಗಿದೆ. ಏಪ್ರಿಲ್ 16ರಿಂದ ಮನೆಗಳಿಗೆ ಭೇಟಿ ನೀಡಿ…

1 day ago

ಹವಾಮಾನ ವರದಿ | 01-04-2026 | ಕರಾವಳಿ-ಮಲೆನಾಡಿನಲ್ಲಿ ಗುಡುಗು ಮಳೆ ಮುಂದುವರಿಕೆ – ಏ.10 ರಿಂದ ಮತ್ತೆ ಮಳೆ ಚುರುಕು ಸಾಧ್ಯತೆ!

ಏಪ್ರಿಲ್ 4ರವರೆಗೆ ಮಳೆ ಮುಂದುವರಿಯಲಿದೆ, ಬಳಿಕ ತಾತ್ಕಾಲಿಕ ಕಡಿಮೆ. ಏಪ್ರಿಲ್ 10ರಿಂದ ಮತ್ತೆ…

2 days ago