ಕೃಷಿ ವಲಯವು ಕೋವಿಡ್-19 ರ ನಂತರ ಬೆಳವಣಿಗೆ ಕಂಡಿದೆ ಹಾಗೂ ಸ್ಥಿರತೆಯತ್ತಲೇ ಸಾಗಿದೆ. ಹೀಗಾಗಿ ಈ ಹಣಕಾಸು ವರ್ಷದಲ್ಲಿ ಕೃಷಿ ಹಾಗೂ ಅದಕ್ಕೆ ಸಂಬಂಧಿಸಿದ ಕ್ಷೇತ್ರಗಳು ಶೇ.3.9 ರಷ್ಟು ಬೆಳವಣಿಗೆ ಹೊಂದಲಿದೆ. ಹೀಗಾಗಿ ಮುಂದೆ ಬೆಳೆ ವೈವಿಧ್ಯತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಸರ್ಕಾರಕ್ಕೆ ಕೃಷಿ ಕ್ಷೇತ್ರಗಳು ಮತ್ತು ನ್ಯಾನೋ ಯೂರಿಯಾದಂತಹ ಪರ್ಯಾಯ ರಸಗೊಬ್ಬರಗಳ ಕುರಿತು ಸಲಹೆ ನೀಡಲಾಗಿದೆ ಎಂದು ಆರ್ಥಿಕ ಸಮೀಕ್ಷೆಯು ತಿಳಿಸಿದೆ.
2021-22 ರ ಆರ್ಥಿಕ ಸಮೀಕ್ಷೆಯು ಡ್ರೋನ್‌ಗಳಂತಹ ಹೊಸ ತಂತ್ರಜ್ಞಾನಗಳ ಬಳಕೆಯನ್ನು ಹೊರತುಪಡಿಸಿ ಕೃಷಿ ಸಂಶೋಧನೆ ಮತ್ತು ಅಭಿವೃದ್ಧಿ ಮತ್ತು ಸಾವಯವ ಕೃಷಿಯನ್ನು ಹೆಚ್ಚಿಸಲು ಸಲಹೆ ಮಾಡಿದೆ. ಜಾನುವಾರು, ಹೈನುಗಾರಿಕೆ ಮತ್ತು ಮೀನುಗಾರಿಕೆ ಸೇರಿದಂತೆ ಸಂಬಂಧಿತ ವಲಯಗಳಲ್ಲಿನ ಬೆಳವಣಿಗೆಯು ಕ್ಷೇತ್ರದ ಒಟ್ಟಾರೆ ಬೆಳವಣಿಗೆಗೆ ಪ್ರಮುಖ ಆದ್ಯತೆ ಬೇಕಾಗಿದೆ.
ಇತ್ತೀಚಿನ ಸಮೀಕ್ಷೆಯ ಪ್ರಕಾರ, ಕೃಷಿ ಕುಟುಂಬಗಳ ಸರಾಸರಿ ಮಾಸಿಕ ಆದಾಯದ ಸುಮಾರು 15 ಪ್ರತಿಶತದಷ್ಟು ಪಾಲನ್ನು ಹೊಂದಿದ್ದು, ಇದು ಸ್ಥಿರ ಆದಾಯದ ಮೂಲಗಳಾಗಿವೆ. 2021 ರ ಪ್ರಕಾರ ಪ್ರತಿ ಕೃಷಿ ಕುಟುಂಬದ ಸರಾಸರಿ ಮಾಸಿಕ ಆದಾಯವು 10,218 ರೂ.ಗೆ ಇದೆ. ಮುಂದೆ ಸಣ್ಣ ಹಿಡುವಳಿಗಳಲ್ಲಿ ಕೃಷಿ ತಂತ್ರಜ್ಞಾನಗಳ ಅಭಿವೃದ್ಧಿ ಮತ್ತು ಅನುಷ್ಠಾನದ ಮೂಲಕ ಸಣ್ಣ ಮತ್ತು ಅತಿ ಸಣ್ಣ ರೈತ ಉತ್ಪಾದತೆಯನ್ನು ಸುಧಾರಿಸುವ ಅವಶ್ಯಕತೆಯಿದೆ ಎಂದು ಆರ್ಥಿಕ ಸಮೀಕ್ಷೆಯು ತಿಳಿಸಿದೆ.