ಬಜೆಟ್ 2026 | ಭಾರತೀಯ ಕೃಷಿಯ ಪುನರ್ರಚನೆ

January 6, 2026
11:32 AM

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2026 ರ ಬಜೆಟ್ ಮಂಡನೆಗೆ ಸಿದ್ಧರಾಗುತ್ತಿದ್ದಂತೆ, ಭಾರತೀಯ ಕೃಷಿಯಲ್ಲಿ ಕೆಲವು ನಿರ್ಣಾಯಕ ಬದಲಾವಣೆಯ ಹಂತದಲ್ಲಿದೆ. ಹೀಗಾಗಿ ಹಣಕಾಸು ಸಚಿವರು ಹಾಗೂ ಸರ್ಕಾರ ಗಮನದಲ್ಲಿಟ್ಟುಕೊಳ್ಳಬೇಕಾದ ಹಲವು ಅಂಶಗಳು ಇವೆ. ಇದರಲ್ಲಿ ಸಬ್ಸಿಡಿಗಳಿಂದ ಹಿಡಿದು ಫಲಿತಾಂಶ ಆಧಾರಿತ, ಹವಾಮಾನ ಆಧಾರಿತ,  ಸ್ಮಾರ್ಟ್ ಕೃಷಿಯವರೆಗೆ ಭಾರತದ ಕೃಷಿ-ಆರ್ಥಿಕತೆಯನ್ನು ಗಮನದಲ್ಲಿರಿಸಿಕೊಳ್ಳಬೇಕಿದೆ.

Advertisement
Advertisement

ವಿಕಸಿತ ಭಾರತದ ದೃಷ್ಟಿಕೋನದಿಂದಲೂ ಬಜೆಟ್‌ ಗಮನಿಸಿದರೆ, ರಚನಾತ್ಮಕ ಸುಧಾರಣೆಯ ಕಡೆಗೆ ಗಮನಹರಿಸಬೇಕಾದ ಅಗತ್ಯ ಇದೆ.  ಸಬ್ಸೀಡಿ ಹಂಚಿಕೆಯಲ್ಲೇ ಕಾಲ ಕಳೆಯುವುದರ ಜೊತೆಗೇ ಕೃಷಿಯಲ್ಲಿ ಹೆಚ್ಚಿನ ಉತ್ಪಾದಕತೆ, ಹವಾಮಾನ ವೈಪರೀತ್ಯದಿಂದ ರಕ್ಷಣೆ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕ ಬೆಳವಣಿಗೆಯ ಕಡೆಗೆ ಕೃಷಿಯನ್ನು ಪರಿವರ್ತಿಸಲು ನೆರವು, ಮಾರುಕಟ್ಟೆಗಳು ಮತ್ತು ಆಧುನಿಕ ವಿಜ್ಞಾನವನ್ನು ಜೋಡಿಸುವುದು ಅಗತ್ಯ ಇದೆ.  ಕೃಷಿ ನೀತಿ, ಶೈಕ್ಷಣಿಕ ಮತ್ತು ಕೃಷಿ ಉದ್ಯಮದ ಕಡೆಗೆ ಗಮನಹರಿಸಬೇಕಾಗಿದೆ.  ಸಬ್ಸೀಡಿಗಳನ್ನು ನೀಡಿಯೂ ಕೃಷಿ ಉತ್ಪಾದಕತೆಯಲ್ಲಿ ಹೆಚ್ಚಳವಾಗಿಲ್ಲ, ಹವಾಮಾನ ವಿಪರೀತವಾಗಿ ಸಮಸ್ಯೆ ತಂದಿದೆ.  ಫಲಿತಾಂಶ ಆಧಾರಿತವಾಗಿ ಕೃಷಿ ಬೆಳೆಯುತ್ತಿಲ್ಲ . ಈಗ ಡಿಜಿಟಲ್ ಆಗಿಯೂ ಕೃಷಿ ಬೆಳೆವಣಿಗೆಯನ್ನು ಪರಿಶೀಲಿಸಬಹುದಾದ ಅಗತ್ಯ ಇದೆ.  ರೈತರ ಜೀವನ, ಮಣ್ಣಿನ ದೃಷ್ಟಿಯಿಂದಲೂ ಗಮನಿಸಿದಾಗ ಮಣ್ಣು ಮತ್ತು ನೀರಿನ ಆರೋಗ್ಯದ ರಕ್ಷಣೆಗೆ ಆದ್ಯತೆ ಅಗತ್ಯ ಇದೆ.

ಈ ಎಲ್ಲಾ ಕಾರಣದಿಂದ ಈ ಬಾರಿ ಹವಾಮಾನದ ನಿಖರತೆಗೆ ಎಐ, ನಿಖರ ಪೋಷಣೆ, ಡಿಜಿಟಲ್ ಭೂ ದಾಖಲೆಗಳು, ಮೌಲ್ಯವರ್ಧಿತ ರಫ್ತುಗಳನ್ನು ಸಂಯೋಜಿಸುವ ಮಿಷನ್,  ಪೋಷಕಾಂಶ ದಕ್ಷತೆಯ ಸೂಚ್ಯಂಕಗಳಿಂದ ಕೃಷಿ ಡ್ರೋನ್‌ಗಳು, ಡಿಜಿಟಲ್ ಫಾರ್ಮ್ ಐಡಿಗಳು, ನೀರಾವರಿ ಮತ್ತು ತ್ಯಾಜ್ಯ-ಮುಕ್ತ ಮಾರುಕಟ್ಟೆ ವ್ಯವಸ್ಥೆ,  ಉತ್ಪಾದಕತೆ, ಸುಸ್ಥಿರತೆ ಮತ್ತು ಆದಾಯದ ಫಲಿತಾಂಶಗಳು ಸೇರಿದಂತೆ ಭಾರತೀಯ ಕೃಷಿ ಬೆಳವಣಿಗೆಗೆ ಹೆಚ್ಚಿನ ತಾಂತ್ರಿಕ ಅಗತ್ಯಗಳೂ ಇವೆ. ಬಜೆಟ್‌ ರೂಪಿಸುವ ವೇಳೆ ಇಂತಹ ಆದ್ಯತೆಗಳ ಕಡೆಗೂ ಗಮನ ಅಗತ್ಯವಿದೆ.

ಮೂಲ : ಎಗ್ರೋ ಸ್ಪೆಕ್ಟ್ರಂ

Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಸರ್ಕಾರಿ ಶಾಲೆ ಮಕ್ಕಳಿಗೆ ಚೆಸ್ ಪಾಠ | ದ.ಕ ದಲ್ಲಿ “ಚೆಸ್ ಇನ್ ಸ್ಕೂಲ್” ಆರಂಭ | ಗ್ರಾಮೀಣ ಮಕ್ಕಳಿಗೆ ಬೌದ್ಧಿಕ ಅವಕಾಶ
January 29, 2026
2:18 PM
by: ದ ರೂರಲ್ ಮಿರರ್.ಕಾಂ
ಕೊಳೆ ರೋಗ ನಿಯಂತ್ರಣಕ್ಕೂ ತೆರಿಗೆ…? ಮೈಲುತುತ್ತಿಗೆ ಸುಂಕ – ಅಡಿಕೆ ರೈತನಿಗೆ ಮತ್ತೊಂದು ಹೊರೆ..!
January 29, 2026
7:39 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ದೇಶದಲ್ಲಿ ರಬಿ ಋತು ಬಿತ್ತನೆ ದಾಖಲೆ ಹೆಚ್ಚಳ | 660.48 ಲಕ್ಷ ಹೆಕ್ಟೇರ್‌ಗೆ ಏರಿದ ಒಟ್ಟು ವಿಸ್ತೀರ್ಣ
January 29, 2026
7:18 AM
by: ದ ರೂರಲ್ ಮಿರರ್.ಕಾಂ
ಯೂರಿಯಾ ಮಾರಾಟ 3.8% ಏರಿಕೆ | ದೇಶೀಯ ಉತ್ಪಾದನೆ ಕುಸಿತ, ಆಮದು 85% ಹೆಚ್ಚಳ
January 29, 2026
7:08 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror