ಬಜೆಟ್ ನಲ್ಲಿ ಕೃಷಿ, ಪೂರಕ ವಲಯಕ್ಕೆಅನುದಾನ ಹೆಚ್ಚಳ | ಕೃಷಿ ಯಾಂತ್ರೀಕರಣಕ್ಕೆ ಆದ್ಯತೆ

March 22, 2025
2:05 PM
ಕೃಷಿ ವಲಯದಲ್ಲಿ ಯಾಂತ್ರೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು, ಸಣ್ಣ ಹಿಡುವಳಿದಾರರು ಹಾಗೂ ಅಂಚಿನ ರೈತರ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಲೋಕಸಭೆಯಲ್ಲಿ ಹೇಳಿದ್ದಾರೆ.

ಕಳೆದ 10 ವರ್ಷದಲ್ಲಿ ಕೃಷಿ, ಹೈನುಗಾರಿಕೆ, ಪೂರಕ ವಲಯಗಳಿಗೆ ಬಜೆಟ್ ನಲ್ಲಿ  ಅನುದಾನ ಗಣನೀಯ ಏರಿಕೆಯಾಗಿದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಲೋಕಸಭೆಯಲ್ಲಿ ಹೇಳಿದ್ದಾರೆ.………ಮುಂದೆ ಓದಿ……..

Advertisement

2025-26ರ ಸಾಲಿನಲ್ಲಿ ಕೃಷಿ ವಲಯಕ್ಕೆ ನೀಡಲಾದ ಬಜೆಟ್ ಅನುದಾನ ಕುರಿತ ಚರ್ಚೆಯಲ್ಲಿ ಉತ್ತರ ನೀಡಿದ ಅವರು, ದೇಶದ ಅರ್ಥವ್ಯವಸ್ಥೆಯ ಆತ್ಮದಂತೆ ಇರುವ ರೈತರ ಸಮಗ್ರ ಅಭಿವೃದ್ಧಿಗೆ ಸರ್ಕಾರ ಕಟಿಬದ್ಧವಾಗಿದೆ ಎಂದರು. ಸ್ವಾತಂತ್ರ್ಯ ನಂತರ 60 ವರ್ಷಗಳಲ್ಲಿ 60 ಸಾವಿರ ಕೋಟಿ ರೂಪಾಯಿ ಕೃಷಿ ಸಾಲ ಮನ್ನಾ ಕುರಿತು ಪ್ರಚಾರ ಮಾಡಲಾಗುತ್ತಿದೆ. ಆದರೆ, 2014ರ ನಂತರ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 3 ಲಕ್ಷ 68 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾವಣೆ ಮಾಡಲಾಗಿದೆ ಎಂದು ತಿಳಿಸಿದರು. ಕಾಂಗ್ರೆಸ್ ಆಡಳಿತಾವಧಿಯಲ್ಲಿ ಯೋಜನೆಗಳಿಗೆ  ಬಿಡುಗಡೆಯಾದ ಹಣದಲ್ಲಿ  ಕೇವಲ ಶೇಕಡ 15ರಷ್ಟು ಮಾತ್ರ ಫಲಾನುಭವಿಗಳನ್ನು ತಲುಪುತ್ತಿತ್ತು. ಆದರೆ, ಎನ್ ಡಿಎ ಸರ್ಕಾರದ ಅವಧಿಯಲ್ಲಿ ಡಿಬಿಟಿ ಮೂಲಕ ಶೇಕಡ 100ರಷ್ಟು ಹಣ ಫಲಾನುಭವಿಗಳಿಗೆ ತಲುಪುವುದನ್ನು ಖಾತರಿಪಡಿಸಲಾಗಿದೆ ಎಂದರು. ಕೃಷಿ ವಲಯದಲ್ಲಿ ಯಾಂತ್ರೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು, ಸಣ್ಣ ಹಿಡುವಳಿದಾರರು ಹಾಗೂ ಅಂಚಿನ ರೈತರ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕೃಷಿ ತಂತ್ರಜ್ಞಾನಗಳು ಪ್ರಯೋಗಾಲಯಗಳಿಂದ ಶೀಘ್ರವಾಗಿ ಕೃಷಿ ಭೂಮಿಗೆ ವರ್ಗಾವಣೆಯಾಗಬೇಕು
March 24, 2025
8:52 PM
by: ದ ರೂರಲ್ ಮಿರರ್.ಕಾಂ
ಕರಾವಳಿ, ಮೈಸೂರು ಶಿವಮೊಗ್ಗ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಹಗುರ ಮಳೆ ಸಾಧ್ಯತೆ | ಹವಾಮಾನ ಇಲಾಖೆ ಮುನ್ಸೂಚನೆ
March 24, 2025
8:20 PM
by: ದ ರೂರಲ್ ಮಿರರ್.ಕಾಂ
ಕುಡಿಯುವ ನೀರಿನ ಸಮಸ್ಯೆ | ಮುನ್ನೆಚ್ಚರಿಕೆ ವಹಿಸಲು ದಕ  ಜಿ.ಪಂ ಸಿಇಓ ಸೂಚನೆ
March 24, 2025
8:05 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 24-03-2025 | ಇಂದು ಹಲವು ಕಡೆ ಮಳೆ ಸಾಧ್ಯತೆ |
March 24, 2025
12:18 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

NEWS UPDATE ಪಡೆಯಲು ಇಲ್ಲಿ ಬನ್ನಿ...