ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲದ ಬಜೆಟ್ | ತೆರಿಗೆದಾರರಿಗೆ ಯಾವುದೇ ಪರಿಹಾರ ಅಥವಾ ಆತಂಕ ಇಲ್ಲ

February 1, 2024
1:53 PM

ಈ ಅವಧಿಯ ಕೊನೆಯ ಮಧ್ಯಂತರ ಬಜೆಟ್‌(Interim Budget) ಅನ್ನು ಹಣಕಾಸು ಸಚಿವೆ(Finance Minister) ನಿರ್ಮಲ ಸೀತಾರಾಮನ್‌(Nirmala Sitharaman) ಇಂದು ಸಂಸತ್ತಿನಲ್ಲಿ ಮಂಡಿಸಿದರು. ಅನೇಕ ಜನಪರ ಯೋಜನೆಗಳನ್ನು ಮಂಡಿಸಿದ ಹಣಕಾಸು ಸಚಿವರು, ಆದಾಯ ತೆರಿಗೆ (Income Tax) ಸ್ಲ್ಯಾಬ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌  ಹೇಳಿದ್ದಾರೆ. 2024-25ನೇ ಸಾಲಿನ ಮಧ್ಯಂತರ ಬಜೆಟ್‌ ಲೋಕಸಭೆಯಲ್ಲಿ ಮಂಡನೆಯಾಗಿದ್ದು, ನೇರ ಮತ್ತು ಪರೋಕ್ಷ ತೆರಿಗೆ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಮಾಡದೇ ಇರಲು ಸರ್ಕಾರ ಮುಂದಾಗಿದೆ.

Advertisement

ಮಧ್ಯಂತರ ಬಜೆಟ್‌ನಲ್ಲಿ  ಆದಾಯ ತೆರಿಗೆ ಸ್ಲ್ಯಾಬ್​ಗಳು ಕಳೆದ ಹಣಕಾಸು ವರ್ಷದ್ದೇ ಆಗಿರುವುದರಿಂದ ತೆರಿಗೆದಾರರಿಗೆ ಯಾವುದೇ ಪರಿಹಾರ ಅಥವಾ ಆತಂಕ ಇಲ್ಲ. ಆದರೆ ಪರಿಹಾರ ನಿರೀಕ್ಷೆ ಮಾಡಿದ್ದವರಿಗೆ ಬೇಸರ ತಂದಿದೆ. ಹಾಲಿ ಸ್ಲ್ಯಾಬ್ ಪ್ರಕಾರ 7 ಲಕ್ಷ ರೂ.ವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಇರುವುದಿಲ್ಲ.

2023-24ರ ಬಜೆಟ್‌ನಲ್ಲಿ (Union Budget 2023) ವಾರ್ಷಿಕ 7 ಲಕ್ಷ ರೂ.ವರೆಗೆ ಆದಾಯ ತೆರಿಗೆ ವಿನಾಯಿತಿಯನ್ನು ಏರಿಕೆ ಮಾಡುವ ಮೂಲಕ ಸಂಬಳದಾರರಿಗೆ ಸೀತಾರಾಮನ್‌ ಸಿಹಿ ಸುದ್ದಿ ನೀಡಿದ್ದರು. ಈ ಮೊದಲು ವಾರ್ಷಿಕ 5 ಲಕ್ಷ ರೂ.ವರೆಗೆ ತೆರಿಗೆ ವಿನಾಯಿತಿ ಸಿಕ್ಕಿತ್ತು.

ಹಾಲಿ ಎಷ್ಟು ಆದಾಯಕ್ಕೆ ಎಷ್ಟು ತೆರಿಗೆಯಿದೆ?
0-3 ಲಕ್ಷ ರೂ. – ಇಲ್ಲ
3- 6 ಲಕ್ಷ ರೂ. – 5%

6- 9 ಲಕ್ಷ ರೂ. – 10%
9-12 ಲಕ್ಷ ರೂ. – 15%

12-15 ಲಕ್ಷ ರೂ. 20%
15 ಲಕ್ಷ ರೂ. 30%

– ಅಂತರ್ಜಾಲ ಮಾಹಿತಿ

Finance Minister Nirmala Sitharaman has said that there is no change in the income tax slab. The interim budget for the year 2024-25 has been presented in the Lok Sabha and the government has decided not to make any changes in the direct and indirect tax system.

Advertisement

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ರಸ್ತೆ ಸರಕು ಸಾಗಾಣೆಯಲ್ಲೂ ತೀವ್ರ ಏರಿಕೆ  |  ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಖಾತೆ ಸಚಿವ ನಿತಿನ್‌ ಗಡ್ಕರಿ
April 4, 2025
2:24 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 04-04-2025 | ಇಂದು ಕೆಲವು ಕಡೆ ಗುಡುಗು ಸಹಿತ ಮಳೆ ನಿರೀಕ್ಷೆ | ಎ.7 ರಿಂದ ಮಳೆ ಕಡಿಮೆಯಾಗುವ ಲಕ್ಷಣ |
April 4, 2025
1:10 PM
by: ಸಾಯಿಶೇಖರ್ ಕರಿಕಳ
ಅಡಿಕೆಯ ನಾಡಿನಲ್ಲಿ ಉಪಬೆಳೆಯಾಗಿ ತರಕಾರಿ ಕೃಷಿ ಮಾಡಿದ ಯುವಕ
April 4, 2025
8:00 AM
by: ಮಹೇಶ್ ಪುಚ್ಚಪ್ಪಾಡಿ
ಅಭಯಾರಣ್ಯದಲ್ಲಿ ರಾತ್ರಿ ವೇಳೆ ವಾಹನಗಳ ಸಂಚಾರ ನಿಷೇಧಕ್ಕೆ ಮನವಿ
April 4, 2025
7:22 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group