ಭೂಮಿ ಹುಣ್ಣಿಮೆ | ಅನ್ನದಾತರಿಂದ ಹೊಲ ಗದ್ದೆಗಳಲ್ಲಿ ವಿಶೇಷ ಪೂಜೆ |

October 18, 2024
6:50 AM
ಹೊಲದಲ್ಲಿ ಇರುವ ಪೈರನ್ನು ಗರ್ಭವತಿ ಎಂದು ಕಲ್ಪಿಸಿಕೊಂಡು ಈ ವಿಶಿಷ್ಟ ಆಚರಣೆ ಭೂಮಿ ಹುಣ್ಣಿಮೆ ನಡೆಯುತ್ತದೆ. 

ಮಲೆನಾಡಿನ ವಿಶೇಷ ಹಬ್ಬವಾದ ಭೂಮಿ ಹುಣ್ಣಿಮೆ, ರೈತಾಪಿ ಜನರ ಸಂಭ್ರಮ, ಸಡಗರದ ಹಬ್ಬವಾಗಿದ್ದು,  ಭೂ ತಾಯಿಗೆ ಪೂಜೆ ಸಲ್ಲಿಸುವ ಮೂಲಕ ಭೂಮಿ ಹುಣ್ಣಿಮೆ ಹಬ್ಬವನ್ನು ಆಚರಿಸುತ್ತಾರೆ.

ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಯ ರೈತರು ವಿಶೇಷವಾಗಿ ಭೂಮಿ ಹುಣ್ಣಿಮೆ ಹಬ್ಬವನ್ನು ಆಚರಿಸುತ್ತಾರೆ. ವಿವಿಧ ರೀತಿಯ ತಿಂಡಿ ತಿನಿಸುಗಳನ್ನು ತಯಾರಿಸಿ ಭೂಮಿ ತಾಯಿಗೆ ಅರ್ಪಣೆ ಮಾಡುತ್ತಾರೆ. ಭೂಮಣ್ಣಿ ಬುಟ್ಟಿ ತಯಾರಿಸಿ ಚಿತ್ತಾರ ಬರೆದು ವಿಶಿಷ್ಟ ರೀತಿಯಲ್ಲಿ ಹಬ್ಬ ಆಚರಣೆ ಮಾಡುತ್ತಾರೆ. ಮನೆಯಲ್ಲಿ ತಯಾರಿಸಿದ ಭೋಜನಗಳನ್ನು ಹೊಲಕ್ಕೆ ಸಮರ್ಪಿಸಿ, ನಂತರ ಹೊಲದಲ್ಲೇ ರೈತ ಕುಟುಂಬ ಸಾಮೂಹಿಕ ಊಟ ಮಾಡುತ್ತದೆ.

ವಿಜಯದಶಮಿ ಕಳೆದು ಬರುವ ಹುಣ್ಣಿಮೆಯೇ ಭೂಮಿ ಹುಣ್ಣಿಮೆ. ಮಲೆನಾಡಿನ ರೈತಾಪಿ ವರ್ಗ ಇದನ್ನು ಭೂಮಿ ಹುಣ್ಣಿಮೆ ಎಂದು ಆರಾಧಿಸಿದರೆ, ಬಯಲು ಸೀಮೆಯ ರೈತರು ಸೀಗೆ ಹುಣ್ಣಿಮೆ ಎಂದು ಆಚರಿಸುತ್ತಾರೆ. ಆಯಾ ಜಿಲ್ಲೆಗಳ ನಿಯಮ, ಸಂಪ್ರದಾಯದ ಪ್ರಕಾರ ಈ ಆಚರಣೆ ನಡೆಯುತ್ತದೆ. ಅಂದರೆ ಹೊಲದಲ್ಲಿ ಇರುವ ಪೈರನ್ನು ಗರ್ಭವತಿ ಎಂದು ಕಲ್ಪಿಸಿಕೊಂಡು ಈ ವಿಶಿಷ್ಟ ಆಚರಣೆ ನಡೆಯುತ್ತದೆ.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 17-09-2026 | ಕರ್ನಾಟಕದಲ್ಲಿ ಇಂದಿನಿಂದ ಮಳೆ ಚುರುಕು ಸಾಧ್ಯತೆ
September 17, 2026
2:14 PM
by: ಸಾಯಿಶೇಖರ್ ಕರಿಕಳ
ಬರಪೀಡಿತ 101 ತಾಲೂಕುಗಳ ರೈತರಿಗೆ ಸಾಲ ಮರುಪಾವತಿಗೆ 12 ತಿಂಗಳ ವಿಸ್ತರಣೆ
September 17, 2026
7:20 AM
by: ದ ರೂರಲ್ ಮಿರರ್.ಕಾಂ
25 ಸಾವಿರ ವರ್ಷಗಳ ಹಿಂದೆಯೇ ಅಡಿಕೆ ಬಳಕೆ ? ಪುರಾತನ ಹಲ್ಲುಗಳಲ್ಲಿ ಸಿಕ್ಕಿದ ಸುಳಿವು
September 16, 2026
11:09 PM
by: ದ ರೂರಲ್ ಮಿರರ್.ಕಾಂ
“ಹನುಮಾನ್ ಅಂಶ್‌” ಬಾಕ್ಸ್ ಆಫೀಸ್ ದಾಖಲೆ – 40ನೇ ದಿನವೂ ₹8.25 ಕೋಟಿ – ಪಠಾಣ್‌, ಛಾವಾ, ಉರಿ ದಾಖಲೆ ಮೀರಿಸಿದ ಸಿನಿಮಾ
September 16, 2026
9:14 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror