ಅಸ್ಸಾಂನ ಹೈಲಕಂಡಿಯ ಗ್ರಾಮವೊಂದರಲ್ಲಿ ಸಂಗ್ರಹಿಸಿಟ್ಟಿದ್ದ ಸುಮಾರು 300 ಚೀಲದಲ್ಲಿದ್ದ 15 ಟನ್ ಬರ್ಮಾ ಅಡಿಕೆಯನ್ನು ಹೈಲಕಂಡಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಳ್ಳಸಾಗಾಣಿಕೆ ಆರೋಪಿ ರೋಸನ್ ಉದ್ದೀನ್ ವಶಕ್ಕೆ ತೆಗೆದುಕೊಂಡಿದ್ದಾರೆ.
ಮನೆಯಲ್ಲಿ ಅಕ್ರಮವಾಗಿ ಅಡಿಕೆ ಸಂಗ್ರಹಿಸಿಟ್ಟಿರುವ ಮಾಹಿತಿ ಆಧಾರದಲ್ಲಿ ಪೊಲೀಸರು ದಾಳಿ ನಡೆಸಿದ್ದರು. ಈ ಸಂದರ್ಭ ಅಡಿಕೆ ದಾಸ್ತಾನು ಪತ್ತೆಯಾಗಿದೆ. ಬರ್ಮಾ ಅಡಿಕೆ ಭಾರತದೊಳಕ್ಕೆ ಪ್ರವೇಶ ನಿಷೇಧಿಸಲಾಗಿದೆ. ಹಾಗಿದ್ದರೂ ತಲೆಹೊರೆಯ ಮೂಲಕ ದೇಶದ ಗಡಿಭಾಗಗಳಲ್ಲಿ ಅಡಿಕೆ ತಂದು ದಾಸ್ತಾನು ಇರಿಸುವುದು ನಡೆಯುತ್ತಿದೆ. ಪೊಲೀಸರು ಆಗಾಗ ದಾಳಿ ನಡೆಸಿದರೂ ಈ ಜಾಲ ನಿರಂತರವಾಗಿ ನಡೆಯುತ್ತಿದೆ.
On the basis of source information, 300 gunny bags containing 15,000 kg Burmese supari stored in the house of accused person Rosan Uddin Mazarbhuiya, S/O Lt. Abdul Latif Mazarbhuiya, Vill Pachinkitabond Part 1, PS Lala, were recovered and seized by Hailakandi PS police. pic.twitter.com/7Z3NUiQKBE
— Hailakandi Police (@HailakandiPolic) August 19, 2023
Advertisement
ಹೀಗೇ ದಾಸ್ತಾನು ಆಗಿರುವ ಅಡಿಕೆ ಭಾರತದ ವಿವಿಧ ಕಡೆಗಳಿಗೆ ಬರುತ್ತಿದೆ. ಈಚೆಗೆ ಅದೇ ಮಾದರಿಯಲ್ಲಿ ದಾಸ್ತಾನು ಆಗಿರುವ ಕಳಪೆ ಗುಣಮಟ್ಟದ ಅಡಿಕೆಯು ದಕ್ಷಿಣ ಕನ್ನಡ ಸೇರಿದಂತೆ ದೇಶದ ಹಲವು ಕಡೆಗೆ ಅಡಿಕೆ ಬಂದಿರುವ ಬಗ್ಗೆ ಮಾರುಕಟ್ಟೆ ವಲಯ ಹೇಳುತ್ತದೆ. ಈ ಕಾರಣದಿಂದ ಇಲ್ಲಿನ ಅಡಿಕೆ ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ.