#Arecanut | ಅಡಿಕೆ ಮಾರುಕಟ್ಟೆಯಲ್ಲಿ ನಿರುತ್ಸಾಹ | ಬರ್ಮಾ ಅಡಿಕೆಗೆ ಇನ್ನೂ ಉತ್ಸಾಹ | ಅಸ್ಸಾಂನಲ್ಲಿ ನಿರಂತರ ತಡೆ | ಮತ್ತೆ 249 ಚೀಲ ಅಡಿಕೆ ವಶಕ್ಕೆ |

October 10, 2023
3:53 PM
ಮಿಜೋರಾಂನ ಚಂಫೈ ಜಿಲ್ಲೆಯ ವಿಲ್ ಚುಂಗ್ಟೆಯ ಪ್ರದೇಶದಲ್ಲಿ  249 ಚೀಲ ಅಡಿಕೆಯನ್ನು ವಶಕ್ಕೆ ಪಡೆಯಲಾಗಿದೆ.

ಚಾಲಿ ಅಡಿಕೆ ಮಾರುಕಟ್ಟೆ ಕಳೆದ ದಿನಗಳಿಂದ ನಿರುತ್ಸಾಹ ಕಂಡುಬಂದಿದೆ. ಹೊಸ ಚಾಲಿ ಅಡಿಕೆ 380 ಆಸುಪಾಸಿನಲ್ಲಿ ಹಾಗೂ  ಹಳೆ ಚಾಲಿ ಅಡಿಕೆ  440 ಹಾಗೂ ಚೋಲ್‌ ಅಡಿಕೆ 470 ರೂಪಾಯಿ ಆಸುಪಾಸಿನಲ್ಲಿಯೇ ಇದೆ. ಸದ್ಯ ಯಾವುದೇ ಉತ್ಸಾಹ ಕಾಣುತ್ತಿಲ್ಲ ಮಾರುಕಟ್ಟೆಯಲ್ಲಿ. ಈ ನಡುವೆಯೇ ಬರ್ಮಾ ಅಡಿಕೆಯ ಆಸಕ್ತಿ ಇನ್ನೂ ಕಡಿಮೆಯಾಗಿಲ್ಲ. ಸೋಮವಾರ ಅಸ್ಸಾಂ ಗಡಿಭದ್ರತಾ ಪಡೆ ಮತ್ತೆ 249 ಚೀಲ ಅಡಿಕೆಯನ್ನು ವಶಕ್ಕೆ ಪಡೆದಿದ್ದಾರೆ.

ಅಡಿಕೆ  ಕಳ್ಳಸಾಗಣೆ ಚಟುವಟಿಕೆಗಳ ವಿರುದ್ಧ  ಅಸ್ಸಾಂ ರೈಫಲ್ಸ್‌ ನಿರಂತರ ಕೆಲಸ ಮಾಡುತ್ತಿದೆ. ಸೋಮವಾರ ಮಿಜೋರಾಂನ ಚಂಫೈ ಜಿಲ್ಲೆಯ ವಿಲ್ ಚುಂಗ್ಟೆಯ ಪ್ರದೇಶದಲ್ಲಿ  249 ಚೀಲ ಅಡಿಕೆಯನ್ನು ವಶಕ್ಕೆ ಪಡೆಯಲಾಗಿದೆ. ಅಡಿಕೆ ಸೇರಿದಂತೆ ಇತರ ವಸ್ತುಗಳ ಕಳ್ಳಸಾಗಣೆಯು ಮಿಜೋರಾಂ ರಾಜ್ಯ ಮತ್ತು ಇಡೀ ಭಾರತಕ್ಕೆ ಪ್ರಮುಖ ಕಳವಳವಾಗಿದೆ. ಅಸ್ಸಾಂ ರೈಫಲ್ಸ್  ಅಕ್ರಮ ಕಳ್ಳಸಾಗಣೆ ಚಟುವಟಿಕೆಗಳನ್ನು ಎದುರಿಸಲು ಸತತವಾಗಿ ತನ್ನ ಪ್ರಯತ್ನಗಳನ್ನು ತೀವ್ರಗೊಳಿಸಿದೆ.

ಕಳೆದ ಕೆಲವು ಸಮಯಗಳಿಂದ ಬರ್ಮಾ ಅಡಿಕೆಯನ್ನು ಈಶಾನ್ಯ ರಾಜ್ಯಗಳ ಮೂಲಕ ಕಳ್ಳಸಾಗಾಣಿಕೆ ಮಾಡಿ ಭಾರತದೊಳಕ್ಕೆ ತರೆಲಾಗುತ್ತಿದೆ. ಇದಕ್ಕೆ ಸತತ ಕಡಿವಾಣ ಬೀಳುತ್ತಿದೆ. ಚಾಲಿ ಅಡಿಕೆ ಹೆಚ್ಚಿನ ಪ್ರಮಾಣದಲ್ಲಿ ಕಳ್ಳಸಾಗಾಣಿಕೆ ಮೂಲಕ ತರಲು ಪ್ರಯತ್ನ ನಡೆಯುತ್ತಲೇ ಇದೆ. ಹೀಗೆ ವಶ ಪಡಿಸಿಕೊಂಡ ಅಡಿಕೆಯ ಆಮದುದಾರರು ಹಾಗೂ ಅದರ ಹಿಂದೆ ಇರುವ ಪ್ರಮುಖ ವ್ಯಕ್ತಿಗಳನ್ನು ಈ ಹಿಂದೆ ಬಂಧಿಸಲಾಗಿತ್ತು. ಹಾಗಿದ್ದರೂ ಮತ್ತೆ ಈ ಸಾಗಾಣಿಕೆ ನಡೆಯುತ್ತಿದೆ.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಬದುಕಿನ ಬ್ಯಾಗೇಜು
September 28, 2026
7:26 AM
by: ದ ರೂರಲ್ ಮಿರರ್.ಕಾಂ
ಬ್ಯಾಂಕ್‌ ಮುಷ್ಕರ ಮುಂದೂಡಿಕೆ – ಇಂದು ಎಂದಿನಂತೆ ಬ್ಯಾಂಕ್‌ ಸೇವೆ
September 28, 2026
6:44 AM
by: ದ ರೂರಲ್ ಮಿರರ್.ಕಾಂ
ಖ್ಯಾತಿ-ಪ್ರಚಾರವಲ್ಲ, ಸಮಾಜ ಪರಿವರ್ತನೆಯೇ ಚಾತುರ್ಮಾಸ್ಯದ ಗುರಿ
September 27, 2026
10:44 PM
by: ದ ರೂರಲ್ ಮಿರರ್.ಕಾಂ
ಮೇಘಾಲಯದ ಅಡಿಕೆಗೆ ಜಿಐ ಟ್ಯಾಗ್‌ ಪ್ರಕ್ರಿಯೆ..! ಮಲೆನಾಡು ಅಡಿಕೆಗೂ ಏಕೆ ಪ್ರಯತ್ನಿಸಬಾರದು..?
September 27, 2026
8:12 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror