ಹಣಕಾಸಿನ ಅಡೆತಡೆಗಳನ್ನು ಎದುರಿಸುತ್ತಿರುವ ಜಾರ್ಖಂಡ್‌ನ ಹಜಾರಿಬಾಗ್‌ನ ಮುಕಿ ಗ್ರಾಮದ ರೈತ ತನ್ನ ಹಾನಿಗೊಳಗಾದ ನೀರಿನ ಪಂಪ್ ಅನ್ನು ಪೆಡಲ್ ಪವರ್‌ನಲ್ಲಿ ಚಲಾಯಿಸುವ ಮೂಲಕ ಯಶಸ್ವಿಯಾಗಿದ್ದಾರೆ. ವಿದ್ಯುಚ್ಛಕ್ತಿ ಮತ್ತು ಇಂಧನದಿಂದ ಚಲಿಸುವ ಸಾಂಪ್ರದಾಯಿಕ ಪಂಪ್ ಅನ್ನು ಹಳೆಯ ಬೈ-ಸೈಕಲ್ ಅನ್ನು ಪೆಡಲ್ ಮಾಡುವುದರೊಂದಿಗೆ ತನ್ನ ಬೆಳೆಗಳಿಗೆ ನೀರುಣಿಸುವಂತೆ ಮಾಡಿದ್ದಾರೆ.
ಪಂಪ್‌ನ ಕಾಯಿಲ್ ಸುಟ್ಟ ನಂತರ ಬೆಳೆಗಳಿಗೆ ನೀರು ಹಾಕಲು ಸಾಧ್ಯವಾಗದ ಕಾರಣ ಈ ಪ್ರಯೋಗವನ್ನು ಮಾಡಿರುವೆನು ಎಂದು ರೈತ ಮಾಂಝಿ ಹೇಳಿದ್ದಾರೆ. ಆರ್ಥಿಕ ಅಡಚಣೆ ಮತ್ತು ವಿದ್ಯುತ್ ಪೂರೈಕೆಯ ಕೊರತೆಯಿಂದಾಗಿ ಅದನ್ನು ಮತ್ತೆ ಸರಿಪಡಿಸಲು ಸಾಧ್ಯವಾಗಲಿಲ್ಲ. ಮರುದಿನ ನನ್ನ ಹಿತ್ತಲಿನಲ್ಲಿ ಬಿದ್ದಿರುವ ಹಳೆಯ ಬೈಸಿಕಲ್ಲೊಂದಿಗೆ ಪಂಪ್ ಅನ್ನು ಚಾಲೂಗೊಳಿಸುವ ಏಕೆ ಸಾಧ್ಯವಿಲ್ಲ ಎಂದು ಪ್ರಯತ್ನಿಸಿದೆ. ಹೀಗಾಗಿ ನಾನು ಪಂಪ್‌ನಿಂದ ಮೋಟಾರ್ ಫ್ಯಾನ್ ಅನ್ನು ತೆಗೆದು ಅದರ ಬುಷ್ ಅನ್ನು ಸರಪಳಿಯ ಸಹಾಯದಿಂದ ಫ್ರೀ-ವೀಲ್ ಮೂಲಕ ಬೈಸಿಕಲ್ ವೀಲ್‌ನೊಂದಿಗೆ ಸಿಕ್ಕಿಸಿ ಯಶಸ್ವಿಯಾದೆ ಎಂದು ಮಾಂಝಿ ಹೇಳಿದರು.
ಕೃಷಿಕ ಮಾಂಝಿ ಈಗ ತನ್ನ 2.5 ಎಕರೆ ಜಮೀನಿನಲ್ಲಿ ತನ್ನ ತರಕಾರಿ ಬೆಳೆಗಳಿಗೆ ಒಂದು ರೂಪಾಯಿ ಹೂಡಿಕೆ ಮಾಡದೆ ಹತ್ತಿರದ ಕೊಳದಿಂದ ಸಮರ್ಥವಾಗಿ ಈ ಪಂಪ್ ಬಳಸಿ ನೀರಾವರಿ ಮಾಡುತ್ತಾನೆ ಎಂದು ಅವರು ಹೇಳಿದರು.
ನಾಡಿನ ಸಮಸ್ತರಿಗೂ ಮಕರ ಸಂಕ್ರಾಂತಿ ಶುಭಾಶಯ. ರೈತರಿಗೂ ಇದು ಸುಗ್ಗಿಯ ಹಬ್ಬ. ಈ…
ಕರಾವಳಿ ಜಿಲ್ಲೆಗಳಲ್ಲಿ ಸಂಜೆ ಹಾಗೂ ರಾತ್ರಿಯ ತನಕವೂ ಪಶ್ಚಿಮದ ಗಾಳಿಯ ಪ್ರಭಾವ ಇರುವುದರಿಂದ…
ಕನ್ನಡ ಭಾಷೆಯ ಅನೇಕ ಪದಗಳು ಸಂಸ್ಕೃತ ಮೂಲದ್ದಾಗಿವೆ. ಕನ್ನಡ ನಾಡಿನ ಊರಿನ ಹೆಸರುಗಳೂ…
ದೇಶದಲ್ಲೇ ಅಪರೂಪವಾದ ಜೀವ ವೈವಿಧ್ಯತೆಯು ಉತ್ತರ ಕನ್ನಡ ಜಿಲ್ಲೆಯಲ್ಲಿದ್ದು, ಈ ಜೀವ ವೈವಿಧ್ಯತೆಯನ್ನು…
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ಶೃಂಗೇರಿ, ಎನ್.ಆರ್.ಪುರ ಸೇರಿ ಮಲೆನಾಡು ಭಾಗದಲ್ಲಿ ಉಂಟಾಗುತ್ತಿರುವ ಕಾಡಾನೆಗಳ…
ತುಮಕೂರಿನಲ್ಲಿ ಸ್ವದೇಶಿ ಜಾಗರಣ ಮಂಚ್ ಆಯೋಜಿಸಿರುವ ಸ್ವದೇಶಿ ಮೇಳಕ್ಕೆ ಕೇಂದ್ರ ಜಲಶಕ್ತಿ ಹಾಗೂ…