Advertisement
ಕೃಷಿ

ಸೈಕಲ್ ಬಳಸಿ ಬೆಳೆಗಳಿಗೆ ನೀರುಣಿಸಿದ ರೈತ | 2.5 ಎಕರೆ ತರಕಾರಿ ಬೆಳೆಗೆ ಸಮೃದ್ಧ ನೀರು ಹಾಯಿಸಿದ ಕೃಷಿಕ |

Share

ಹಣಕಾಸಿನ ಅಡೆತಡೆಗಳನ್ನು ಎದುರಿಸುತ್ತಿರುವ ಜಾರ್ಖಂಡ್‌ನ ಹಜಾರಿಬಾಗ್‌ನ ಮುಕಿ ಗ್ರಾಮದ ರೈತ ತನ್ನ ಹಾನಿಗೊಳಗಾದ ನೀರಿನ ಪಂಪ್ ಅನ್ನು ಪೆಡಲ್ ಪವರ್‌ನಲ್ಲಿ ಚಲಾಯಿಸುವ ಮೂಲಕ ಯಶಸ್ವಿಯಾಗಿದ್ದಾರೆ. ವಿದ್ಯುಚ್ಛಕ್ತಿ ಮತ್ತು ಇಂಧನದಿಂದ ಚಲಿಸುವ ಸಾಂಪ್ರದಾಯಿಕ ಪಂಪ್ ಅನ್ನು ಹಳೆಯ ಬೈ-ಸೈಕಲ್ ಅನ್ನು ಪೆಡಲ್ ಮಾಡುವುದರೊಂದಿಗೆ ತನ್ನ ಬೆಳೆಗಳಿಗೆ ನೀರುಣಿಸುವಂತೆ ಮಾಡಿದ್ದಾರೆ.

ಪಂಪ್‌ನ ಕಾಯಿಲ್ ಸುಟ್ಟ ನಂತರ ಬೆಳೆಗಳಿಗೆ ನೀರು ಹಾಕಲು ಸಾಧ್ಯವಾಗದ ಕಾರಣ ಈ ಪ್ರಯೋಗವನ್ನು ಮಾಡಿರುವೆನು ಎಂದು ರೈತ ಮಾಂಝಿ ಹೇಳಿದ್ದಾರೆ. ಆರ್ಥಿಕ ಅಡಚಣೆ ಮತ್ತು ವಿದ್ಯುತ್ ಪೂರೈಕೆಯ ಕೊರತೆಯಿಂದಾಗಿ ಅದನ್ನು ಮತ್ತೆ ಸರಿಪಡಿಸಲು ಸಾಧ್ಯವಾಗಲಿಲ್ಲ. ಮರುದಿನ ನನ್ನ ಹಿತ್ತಲಿನಲ್ಲಿ ಬಿದ್ದಿರುವ ಹಳೆಯ ಬೈಸಿಕಲ್ಲೊಂದಿಗೆ ಪಂಪ್ ಅನ್ನು ಚಾಲೂಗೊಳಿಸುವ ಏಕೆ ಸಾಧ್ಯವಿಲ್ಲ ಎಂದು ಪ್ರಯತ್ನಿಸಿದೆ. ಹೀಗಾಗಿ ನಾನು ಪಂಪ್‌ನಿಂದ ಮೋಟಾರ್ ಫ್ಯಾನ್ ಅನ್ನು ತೆಗೆದು ಅದರ ಬುಷ್ ಅನ್ನು ಸರಪಳಿಯ ಸಹಾಯದಿಂದ ಫ್ರೀ-ವೀಲ್ ಮೂಲಕ ಬೈಸಿಕಲ್ ವೀಲ್‌ನೊಂದಿಗೆ ಸಿಕ್ಕಿಸಿ ಯಶಸ್ವಿಯಾದೆ ಎಂದು ಮಾಂಝಿ ಹೇಳಿದರು.

ಕೃಷಿಕ ಮಾಂಝಿ ಈಗ ತನ್ನ 2.5 ಎಕರೆ ಜಮೀನಿನಲ್ಲಿ ತನ್ನ ತರಕಾರಿ ಬೆಳೆಗಳಿಗೆ ಒಂದು ರೂಪಾಯಿ ಹೂಡಿಕೆ ಮಾಡದೆ ಹತ್ತಿರದ ಕೊಳದಿಂದ ಸಮರ್ಥವಾಗಿ ಈ ಪಂಪ್ ಬಳಸಿ ನೀರಾವರಿ ಮಾಡುತ್ತಾನೆ ಎಂದು ಅವರು ಹೇಳಿದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ಜಾನುವಾರುಗಳ ಮೇವಿಗಾಗಿ ₹25 ಕೋಟಿ ಬಿಡುಗಡೆ

ಮಳೆ ಕೊರತೆಯಿಂದ ಬರ ಪರಿಸ್ಥಿತಿ ಎದುರಾಗಿರುವ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ರಾಜ್ಯ…

1 hour ago

ಬೆಂಗಳೂರಿನ ಐಐಎಂನಲ್ಲಿ ‘ಗುಜರಾತ್‌ನಿಂದ ಭಾರತಕ್ಕೆ ಜಗತ್ತಿಗೆ ನೀರಿನ ಪಾಠಗಳು’ ಅಧ್ಯಯನ ವರದಿ ಬಿಡುಗಡೆ

ಗುಜರಾತ್‌ನ ನೀರಿನ ಆಡಳಿತದ ಅನುಭವಗಳನ್ನು ಆಧರಿಸಿದ ‘ಗುಜರಾತ್‌ನಿಂದ ಭಾರತಕ್ಕೆ ಜಗತ್ತಿಗೆ ನೀರಿನ ಪಾಠಗಳು’…

2 hours ago

ಅಂದಿಗೂ, ಇಂದಿಗೂ ಮತ್ತು ಮುಂದೆಯೂ ಅಡಿಕೆಯ ಜೊತೆ ಕೋಕೋ ಒಂದು ಸೂಕ್ತ ಉಪಬೆಳೆ

ಅಡಿಕೆ ಮತ್ತು ತೆಂಗಿನ ತೋಟಗಳಲ್ಲಿ ಉಪಬೆಳೆಯಾಗಿ ಕೋಕೋಗೆ ಉತ್ತಮ ಅವಕಾಶಗಳಿದ್ದರೂ ಬೆಲೆ ಏರಿಳಿತ,…

9 hours ago

ಅಡಿಕೆ ಕ್ಷೇತ್ರಕ್ಕೆ ಬೇಕಿದೆ ಹೊಸ ರಾಷ್ಟ್ರೀಯ ಸಮನ್ವಯ ಮಾದರಿ

ಅಡಿಕೆ ಕ್ಷೇತ್ರದಲ್ಲಿ ಉತ್ಪಾದನೆ, ದಾಸ್ತಾನು, ಬೇಡಿಕೆ, ಆಮದು, ಮಾರುಕಟ್ಟೆ ಮತ್ತು ಉತ್ಪಾದನಾ ವೆಚ್ಚದ…

9 hours ago

ಹವಾಮಾನ ವರದಿ | 07-10-2026 | ಮುಂಗಾರು ಮುಗಿದಿದೆ… ಹಿಂಗಾರು ಮಳೆಯ ಸರದಿ ಆರಂಭವಾಗುತ್ತಿದೆಯೇ?

ಕರ್ನಾಟಕದಿಂದ ನೈಋತ್ಯ ಮುಂಗಾರು ಸಂಪೂರ್ಣ ಹಿಂದೆ ಸರಿದಿದ್ದು, ಅ.11ರ ಸುಮಾರಿಗೆ ಹಿಂಗಾರು ಆರಂಭಕ್ಕೆ…

20 hours ago

ಗದಗದಲ್ಲಿ ಎಫ್‌ಎಕ್ಯೂ ಗುಣಮಟ್ಟದ ಸೂರ್ಯಕಾಂತಿ ಖರೀದಿ ; ಕ್ವಿಂಟಾಲ್‌ಗೆ ₹8,343 ಬೆಂಬಲ ಬೆಲೆ

ಗದಗ ಜಿಲ್ಲೆಯಲ್ಲಿ ಎಫ್‌ಎಕ್ಯೂ ಗುಣಮಟ್ಟದ ಸೂರ್ಯಕಾಂತಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ಜಿಲ್ಲಾಡಳಿತ ನಿರ್ಧರಿಸಿದೆ.…

1 day ago