ಮುಖ್ಯಮಂತ್ರಿ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ | ಕಲ್ಯಾಣ ಕರ್ನಾಟಕಕ್ಕೆ 11 ಸಾವಿರದ 770 ಕೋಟಿ |

September 18, 2024
10:05 PM

ಕಲಬುರಗಿಯಲ್ಲಿ  ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಿತು.ದಶಕಗಳ ಬಳಿಕ   ಕಲಬುರಗಿಯಲ್ಲಿ  ಸಚಿವ ಸಂಪುಟ ಸಭೆ  ನಡೆದಿತ್ತು.ಸಭೆ ಬಳಿಕ ಮಾಹಿತಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ , ಒಟ್ಟು  56 ವಿಷಯಗಳ  12 ಸಾವಿರದ 692 ಕೋಟಿ ರೂಪಾಯಿ ಮೊತ್ತದ ಯೋಜನೆಗಳಲ್ಲಿ  11 ಸಾವಿರದ 770 ಕೋಟಿ ರೂಪಾಯಿ ಮೊತ್ತದ  46 ವಿಷಯಗಳು ಕಲ್ಯಾಣ ಕರ್ನಾಟಕಕ್ಕೆ ಸೀಮಿತವಾಗಿವೆ  ಎಂದರು.

ಬೀದರ್ ಮತ್ತು  ರಾಯಚೂರು ಪಟ್ಟಣಗಳನ್ನು  ನಗರ ಪಾಲಿಕೆಗಳನ್ನಾಗಿ  ಮೇಲ್ದರ್ಜೆಗೇರಿಸುವುದು. ಬೀದರ್ ಮತ್ತು ಕಲಬುರಗಿ ಜಿಲ್ಲೆಗಳ  ಎಲ್ಲಾ ಹಳ್ಳಿಗಳಿಗೆ  7 ಸಾವಿರದ 200 ಕೋಟಿ ರೂಪಾಯಿ ಮೊತ್ತದಲ್ಲಿ, ನಾರಾಯಣಪುರ ಜಲಾಶಯದಿಂದ  ಶುದ್ಧ ಕುಡಿಯುವ ನೀರು  ಒದಗಿಸಲು  ಸಚಿವ ಸಂಪುಟ  ಸಮ್ಮತಿ ನೀಡಿದೆ. ಇದರಲ್ಲಿ  ರಾಜ್ಯ ಹಾಗೂ ಕೇಂದ್ರದ ಸರ್ಕಾರದ  ಪಾಲು ತಲಾ  50ರಷ್ಟು ಇರಲಿದೆ ಎಂದು  ಹೇಳಿದರು.ಕಲ್ಯಾಣ ಕರ್ನಾಟಕಕ್ಕೆ  ಪ್ರತಿವರ್ಷ  ರಾಜ್ಯ ಸರ್ಕಾರ  5 ಸಾವಿರ ಕೋಟಿ ರೂಪಾಯಿ  ಅನುದಾನ ನೀಡುತ್ತಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ  ಖಾಲಿ ಇರುವ  17 ಸಾವಿರ  439 ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡುವುದು ಸೇರಿದಂತೆ  ಹಲವು ಮಹತ್ವದ ನಿರ್ಧಾರಗಳನ್ನು  ಸಚಿವ ಸಂಪುಟ  ತೆಗೆದುಕೊಂಡಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮುಂದಿನ ಜೂನ್‌ನಿಂದ ರಾಜ್ಯದಲ್ಲಿ 1,225 ಕರ್ನಾಟಕ ಪಬ್ಲಿಕ್ ಶಾಲೆ ಆರಂಭ – ಮಕ್ಕಳಿಗೆ ಉಚಿತ ಬಸ್ ವ್ಯವಸ್ಥೆ
October 21, 2026
9:27 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 20-10-2026 | ಅ.25ರವರೆಗೆ ಮಳೆ ಸಾಧ್ಯತೆ ; ಅ.26 ರಿಂದ ತಾತ್ಕಾಲಿಕ ಬಿಡುವು?
October 20, 2026
2:23 PM
by: ಸಾಯಿಶೇಖರ್ ಕರಿಕಳ
ರಾವಣನನ್ನು ಸಂಹರಿಸುವುದಕ್ಕಿಂತ ನಮ್ಮೊಳಗಿನ ರಾವಣನನ್ನು ಗೆಲ್ಲುವುದು ಮುಖ್ಯ..!
October 20, 2026
9:51 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಮಿಜೋರಾಂನಲ್ಲಿ ಅಡಿಕೆ ಕೃಷಿಗೆ ವೈಜ್ಞಾನಿಕ ನೆರವು : ಕೀಟಬಾಧೆ ನಿಯಂತ್ರಣಕ್ಕೆ ಕ್ರಮ, ಕೋಕೋ ಅಂತರಬೆಳೆಗೂ ಚಿಂತನೆ
October 20, 2026
7:18 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror