ವ್ಯಾಟ್ಸಪ್ ಮೂಲಕ ಮೆಸೇಜು ಬೇರೆ ಬೇರೆ ಗುಂಪುಗಳಲ್ಲಿ ಬರುತ್ತಿದೆ.ಆ ಸಂದೇಶ ಹೀಗೆ ಇದೆ…. ಇದು ಸರ್ಕಾರದ ಹೊಸ ಯೋಜನೆ. “ಇಂದಿನಿಂದ “104” ಭಾರತದಲ್ಲಿ ರಕ್ತದ ಬೇಡಿಕೆಯ ವಿಶೇಷ ಸಂಖ್ಯೆಯಾಗಲಿದೆ”. “Blood On Call” ಎಂಬುದು ಸೇವೆಯ ಹೆಸರು. ಈ ಸಂಖ್ಯೆಗೆ ಕರೆ ಮಾಡಿದ ನಂತರ, 40 ಕಿಮೀ ವ್ಯಾಪ್ತಿಯೊಳಗೆ, ರಕ್ತವನ್ನು ನಾಲ್ಕು ಗಂಟೆಗಳ ಒಳಗೆ ತಲುಪಿಸಲಾಗುತ್ತದೆ. ಪ್ರತಿ ಬಾಟಲಿಗೆ ರೂ. 450/- ಮತ್ತು ಸಾಗಣೆಗೆ ರೂ. 100/. ಈ ಯೋಜನೆಯನ್ನು ಪ್ರಧಾನಿ ಮೋದಿಯವರು ಆರಂಭಿಸಿದ್ದಾರೆ ಎಂಬ ಸಂದೇಶ ವಾಟ್ಸಾಪ್‌ನಲ್ಲಿ ವೈರಲ್ ಆಗಿದೆ. ದಯವಿಟ್ಟು ಈ ಸಂದೇಶವನ್ನು ನೀವು ಸಂಪರ್ಕದಲ್ಲಿರುವ ಇತರ ಸ್ನೇಹಿತರು, ಸಂಬಂಧಿಕರು ಮತ್ತು ಗುಂಪಿಗೆ ಫಾರ್ವರ್ಡ್ ಮಾಡಿ. ಈ ಸೌಲಭ್ಯದ ಮೂಲಕ ಅನೇಕ ಜೀವಗಳನ್ನು ಉಳಿಸಬಹುದು. ಅದು ಸುಳ್ಳು. ಅವರು ಪ್ರಧಾನಿಯಾಗುವ ಮೊದಲು ಮಹಾರಾಷ್ಟ್ರದಲ್ಲಿ ಈ ಯೋಜನೆ ಪ್ರಾರಂಭಿಸಲಾಗಿತ್ತು.
ವಾಸ್ತವವಾಗಿ ದೇಶದಲ್ಲಿ ಇಂತಹ ಯೋಜನೆ ಇಲ್ಲ. ಮಹಾರಾಷ್ಟ್ರದಲ್ಲಿ 2014 ರಲ್ಲಿ ಆಗಿನ ಆರೋಗ್ಯ ಸಚಿವರು ಅಲ್ಲಿನ ಯೋಜನೆಯನ್ನು ಹೇಳಿದ್ದರು. ಈಗ ದೇಶದ ವಿವಿಧ ಕಡೆ 104 ಸಂಖ್ಯೆಯನ್ನು ಬೇರೆ ಬೇರೆ ಸೇವೆಗೆ ಬಳಸಲಾಗುತ್ತಿದೆ. ವಿಶೇಷವಾಗಿ ಕೋವಿಡ್ ಸೇವೆಗೆ ಬಳಕೆ ಮಾಡಲಾಗುತ್ತಿತ್ತು.
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…
ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ…
ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…
ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಗೆ ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಹೆಚ್ಚುವರಿ…