ಕರ್ನಾಟಕ ಅಲ್ಪಸಂಖ್ಯಾತರ ಅಭಿವೃಧ್ದಿ ನಿಗಮ ನಡೆಸುತ್ತಿರುವ ಗಂಗಾ ಕಲ್ಯಾಣ ಯೋಜನೆಯ ಸಂಪೂರ್ಣ ಸಹಾಯಧನವನ್ನು ಈ ಬಾರಿ ಕ್ರಿಶ್ಚಿಯನ್ ರೈತರಿಗೆ ನೀಡಲಾಗುತ್ತದೆ. ಈ ಯೋಜನೆಯಲ್ಲಿ ಬೋರ್‍ವೆಲ್ ಕೊರೆಯಿಸುವುದು, ಪಂಪ್‍ಸೆಟ್ ಅಳವಡಿಸುವುದು ಮತ್ತು ವಿದ್ಯುತ್ ಸಂಪರ್ಕ ಒದಗಿಸಲಾಗುತ್ತದೆ.
ಈ ಯೋಜನೆಯನ್ನು ಜಿಲ್ಲೆಗಳಿಗೆ ಅನುಸಾರವಾಗಿ ಸಹಾಯಧನವನ್ನು ನೀಡಲಾಗುತ್ತದೆ. ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು ಜಿಲ್ಲೆಗಳಿ ರೂ 4 ಲಕ್ಷ ಹಾಗೂ ಉಳಿದ ಎಲ್ಲ ಜಿಲ್ಲೆಗಳಿ ರೂ 3 ಲಕ್ಷ ನೀಡಲಾಗುತ್ತದೆ. ಈ ಯೋಜನೆಯನ್ನು ಪಡೆಯುವ ಪ್ರತಿಯೊಬ್ಬ ರೈತನ ಕುಟುಂಬದ ವಾರ್ಷಿಕ ಆದಾಯ ರೂ 6 ಲಕ್ಷಕ್ಕಿಂತ ಕಡಿಮೆ ಇರಬೇಕು. ಹಾಗೂ ಸ್ವಂತ ಜಮೀನುವನ್ನು ಹೊಂದಿರಬೇಕು. ಅಂದರೆ, ಸಾಮಾನ್ಯವಾಗಿ ಜಿಲ್ಲೆಗಳಲ್ಲಿ ಕನಿಷ್ಠ 1.20 ಎಕರೆಯಿಂದ 5 ಎಕರೆ. ಕೊಡಗು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಜಿಲ್ಲೆಗಳಲ್ಲಿ ಕನಿಷ್ಠ 1 ಎಕರೆಯನ್ನು ಹೊಂದಿರಲೇ ಬೇಕು. ಈ ಯೋಜನೆಗೆ ಬೇಕಾಗಿರುವ ಅಗತ್ಯ ದಾಖಲೆಗಳು:
- ಆಧಾರ್ ಕಾರ್ಡ್ ಪ್ರತಿ
- ಕ್ರಿಶ್ಚಿಯನ್ ಸಮುದಾಯದ ಪ್ರಮಾಣಪತ್ರ
- ಆದಾಯ ಪ್ರಮಾಣಪತ್ರ
- ಸಣ್ಣ/ಅತಿ ಸಣ್ಣ ರೈತ ಪ್ರಮಾಣಪತ್ರ
- ಇತ್ತೀಚಿನ ಆರ್‍ಟಿಸಿ ಪ್ರತಿ
- ಭೂ ಕಂದಾಯ ರಸೀದಿ
- ಪಾಸ್‍ಪೋರ್ಟ್ ಗಾತ್ರದ ಫೋಟೋ
- ಸ್ವಯಂ ಫೋಷಣಾ ಪತ್ರ
- ಬ್ಯಾಂಕ್ ಪಾಸ್‍ಬುಕ್
ಈ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ: ಆಯಾ ಜಿಲ್ಲೆಯ ಕೆಎಮ್‍ಡಿಸಿ ಕಚೇರಿಗೆ ಭೇಟಿ ನೀಡಿ ದಾಖಲೆಗಳನ್ನು ನೀಡಬೇಕು ಅಥವಾ ತಹಶೀಲ್ದಾರ್ ಕಚೇರಿ/ ತಾಲೂಕು ಕ್ರಿಶ್ಚಿಯನ್ ಅಲ್ಪಸಂಖ್ಯಾತ ಅಭಿವೃದ್ಧಿ ಅಧಿಕಾರಿಗಳ ಮೂಲಕವೂ ಸಲ್ಲಿಸಬಹುದು. ಯಾವುದೇ ಆನ್‍ಲೈನ್ ವ್ಯವಸ್ಥೆಗಳಿಲ್ಲ.

