ಒಂಟೆ #Camel ಗಳು ಮರುಭೂಮಿ ಹಡಗುಗಳು ಎಂದೇ ಪ್ರಸಿದ್ಧ. ಮರುಭೂಮಿಯಲ್ಲಿ ಮರಳಿನಲ್ಲಿ ಪ್ರಯಾಣಿಸಲು ವಾಹನವಾಗಿ ಬಳಸಲಾಗುತ್ತದೆ. ಒಂಟೆ ತನ್ನ ದೇಹದಲ್ಲಿ ನೀರಿನ ಸಂಗ್ರಹ ರಚನೆಯನ್ನು ಹೊಂದಿದೆ. ಒಂಟೆಗಳು ಇಂದಿಗೂ ರಾಜಸ್ಥಾನದಲ್ಲಿ ಗ್ರಾಮೀಣ ಪ್ರದೇಶದ ಆದಾಯದ ಮೂಲಗಳಾಗಿವೆ. ಒಂಟೆಯ ಹಾಲು, ಮಾಂಸಕ್ಕೆ ಎಲ್ಲಿಲ್ಲದ ಬೇಡಿಕೆ ಇದೆ. ಆದರೆ ಈಗ ಹೊಸ ಸುದ್ದಿ ಎಂದರೆ ಅದರ ಕೂದಲು ಕೂಡ ಅಷ್ಟೇ ಉಪಯೋಗಕ್ಕೆ ಬರುತ್ತದೆ ಅನ್ನೋದು.
ಒಂಟೆಯ ಕೂದಲಿನಿಂದ ಅನೇಕ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ರಾಜಸ್ಥಾನದ ಬಿಕಾನೇರ್ನಲ್ಲಿ ರಾಷ್ಟ್ರೀಯ ಒಂಟೆ ಸಂಶೋಧನಾ ಕೇಂದ್ರದಲ್ಲಿ ಈವರೆಗೆ 10ರಿಂದ 15 ಬಗೆಯ ಉತ್ಪನ್ನಗಳನ್ನು ತಯಾರಿಸಲಾಗಿದೆ. ಕಂಬಳಿ, ಸೋಲ್, ಕಾಲು ಚಾಪೆ, ಸಿಂಗಲ್ ಫ್ಲವರ್ ಸ್ಟಿಕ್, ಜಾಕೆಟ್, ಯೋಗ ಮ್ಯಾಟ್, ಸ್ಯಾಂಡಲ್, ಬ್ಯಾಗ್, ಪರ್ಸ್, ಬಟ್ಟೆ ಸೇರಿದಂತೆ ವಿವಿಧ ಅಲಂಕಾರಿಕ ವಸ್ತುಗಳನ್ನು ಇವುಗಳಲ್ಲಿ ಸಿದ್ಧಪಡಿಸಲಾಗಿದೆ.
ಜೂನ್ 22 ರಂದು ವಿಶ್ವ ಒಂಟೆ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ರಾಜಸ್ಥಾನದಲ್ಲಿ ಈ ದಿನಕ್ಕೆ ವಿಶೇಷ ಮಹತ್ವವಿದೆ. ವಿಶೇಷವಾಗಿ ಪಶ್ಚಿಮ ರಾಜಸ್ಥಾನದಲ್ಲಿ ಇಂದಿಗೂ, ಒಂಟೆಗಳು ಗ್ರಾಮೀಣ ಪ್ರದೇಶದ ಅನೇಕ ಕುಟುಂಬಗಳಿಗೆ ಪ್ರಮುಖ ಆದಾಯದ ಮೂಲವಾಗಿದೆ. ರಾಜಸ್ಥಾನದ ಬಿಕಾನೇರ್ನಲ್ಲಿ ರಾಷ್ಟ್ರೀಯ ಒಂಟೆ ಸಂಶೋಧನಾ ಕೇಂದ್ರವೂ ಇದೆ.
ಇಲ್ಲಿ ಒಂಟೆ ತಳಿ ಅಭಿವೃದ್ಧಿ, ಸುಧಾರಣೆಗಳ ಕಾರ್ಯ ನಡೆಯುತ್ತಿವೆ. ಇದಲ್ಲದೆ, ಒಂಟೆ ಕೂದಲು ಮತ್ತು ಹಾಲಿನಿಂದ ವಿವಿಧ ಉತ್ಪನ್ನಗಳನ್ನು ಸಹ ತಯಾರಿಸಲಾಗುತ್ತದೆ. ಸಾಮಾನ್ಯವಾಗಿ, ನೀವು ಜಾಕೆಟ್ಗಳು, ಸ್ಯಾಂಡಲ್ ಗಳು, ಬಟ್ಟೆ ಅಥವಾ ಇತರ ಪ್ರಾಣಿಗಳಿಂದ ಮಾಡಿದ ಬಗೆಬಗೆಯ ವಸ್ತುಗಳನ್ನು ನೋಡುತ್ತೀರಿ. ಅದೇ ರೀತಿ ಒಂಟೆ ಕೂದಲಿನಿಂದಲೂ ವಿವಿಧ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ.
ಸದ್ಯ ಪ್ರವಾಸಿಗರ ಕೊರತೆಯು ಮಾರಾಟದ ಮೇಲೆ ಪರಿಣಾಮ ಬೀರುತ್ತಿದೆ. ಈ ಬಾರಿ ಸೌಂಡ್ ಪ್ರೂಫ್ ಮತ್ತು ಫೈರ್ ಪ್ರೂಫ್ ಸೀಟುಗಳನ್ನೂ ಸಿದ್ಧಪಡಿಸಲಾಗಿದೆ. ಇದರೊಂದಿಗೆ ಯೋಗದ ಮ್ಯಾಟ್ ಕೂಡ ಸಿದ್ಧಪಡಿಸಲಾಗಿದೆ. ಯೋಗ ಮ್ಯಾಟ್ ಅನ್ನು ಸಂಪೂರ್ಣವಾಗಿ ಒಂಟೆ ಕೂದಲಿನಿಂದ ಮಾಡಲಾಗಿದೆ. ಬೆಂಕಿ ನಿವಾರಕ ಆಸನವನ್ನು ಒಂಟೆಯ ಕೂದಲು ಮತ್ತು ಕುರಿ ಕೂದಲಿನಿಂದ ಮಾಡಲಾಗಿದ್ದು ಅದು ಸಾಕಷ್ಟು ಬಲಿಷ್ಟವಾಗಿರುತ್ತದೆ.
ಬಿಕಾನೇರ್ನಲ್ಲಿರುವ ಒಂಟೆ ಸಂಶೋಧನಾ ಕೇಂದ್ರದ ಆವರಣದಲ್ಲಿ ಸಂಸ್ಕರಣಾ ಘಟಕವನ್ನು ಶೀಘ್ರದಲ್ಲೇ ಸ್ಥಾಪಿಸಲಾಗುವುದು. ಇದರಿಂದಾಗಿ ಮುಂದಿನ ದಿನಗಳಲ್ಲಿ ಇಲ್ಲಿ ಒಂಟೆ ಕೂದಲಿನಿಂದ ಹೆಚ್ಚೆಚ್ಚು ಉತ್ಪನ್ನಗಳ ತಯಾರಿಕೆ ಆರಂಭವಾಗಲಿದೆ, ಈ ಉತ್ಪನ್ನಗಳ ಬಳಕೆಯಿಂದ ಪ್ಲಾಸ್ಟಿಕ್ ಬಳಕೆ ಕಡಿಮೆಯಾಗಬಹುದು.
(ಅಂತರ್ಜಾಲ ಸಂಗ್ರಹ)