ಮಲೆನಾಡು ಗಿಡ್ಡ ಗೋತಳಿ ಉಳಿಸೋಣ ಅಭಿಯಾನ | ಆರಂಭಗೊಂಡ “ಸುರಕ್ಷಾ” |

April 4, 2024
10:01 PM
ದೇಸೀ ಗೋತಳಿ ಉಳಿಸುವ ಅಭಿಯಾನ ಆರಂಭಗೊಂಡಿದೆ.

ಭಾರತೀಯ ಗೋತಳಿ ಉಳಿಯಬೇಕು ಎನ್ನುವ ಕಾಳಜಿ ಹಲವರಲ್ಲಿದೆ. ಅದರಲ್ಲೂ ರಾಜ್ಯದ ಮಲೆನಾಡು ಗಿಡ್ಡ ಗೋತಳಿ ಉಳಿಸುವ ಬಗ್ಗೆ ಅಭಿಯಾನ ನಡೆಯುತ್ತಿದೆ. ಇದೀಗ ಮಲೆನಾಡು ಗಿಡ್ಡ ತಳಿಯ ಹಸುಗಳ ಉಳಿಸೋಣ ಹೋರಾಟದ ಅಂಗವಾಗಿ “ಗೋ ಮನಸ್ಕ” ಆಸಕ್ತರೆಲ್ಲರೂ  ಉಡುಪಿ ಕೃಷ್ಣ ಮಠದ ಅದಮಾರು ಕಿರಿಯ ಶ್ರೀ ಗಳ ಮಾರ್ಗದರ್ಶನದಲ್ಲಿ “ಸುರಕ್ಷಾ” ಎಂಬ ಮಲೆನಾಡು ಗಿಡ್ಡ ಗೋ ತಳಿ ಸಂರಕ್ಷಣೆ ಕುರಿತ ಟ್ರಸ್ಟ್ ಮತ್ತು ಸಂಘಟನೆಯೊಂದನ್ನು ಆರಂಭಿಸಿದ್ದಾರೆ.

Advertisement

ಅದಮಾರು ಶ್ರೀ ಗಳ ಮಾರ್ಗದರ್ಶನದಂತೆ ಮಲೆನಾಡಿನ‌ ಯಾವುದಾದರೂ ಗ್ರಾಮವೊಂದನ್ನು ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆ ಕುರಿತಂತೆ ಕೇಂದ್ರಿಕರಿಸುವುದು ಹಾಗೂ ಅಲ್ಲಿ ಮಲೆನಾಡು ಗಿಡ್ಡ ತಳಿ ಹಸುಗಳ ಅಭಿವೃದ್ಧಿ ಮತ್ತು ಮಲೆನಾಡು ಗಿಡ್ಡ ಗೋ ತಳಿ ಹಸುಗಳ ಗೋಪಾಲಕರಿಗೆ ಮಲೆನಾಡು ಗಿಡ್ಡ ತಳಿ ಉಳಿಸಿ ಬೆಳೆಸಿಕೊಂಡು ಹೋಗಲು ಮಾರ್ಗದರ್ಶನ ನೀಡುವ ಬಗ್ಗೆ ಹೆಜ್ಜೆ ಇರಿಸಲಾಗಿದೆ. ಜೊತೆಗೆ ಮಲೆನಾಡು ಗಿಡ್ಡ ತಳಿ ಹಸುಗಳ ಗವ್ಯೋತ್ಪನ್ನ ತಯಾರಿಕೆಗೆ ತರಬೇತಿಯನ್ನು ನೀಡುವುದು, ಮಲೆನಾಡು ಗಿಡ್ಡ ತಳಿಗೆ ರುಚಿಸುವ ಮೇವಿನ ಬೀಜದ ಹಂಚಿಕೆ, ಗ್ರಾಮದ ಸರ್ವಸದಸ್ಯರನ್ನೂ ಕೂಡಿಸಿ ಸಂಘಟನೆ ಮಾಡಿ ಒಟ್ಟಾಗಿ ಮಲೆನಾಡು ಗಿಡ್ಡ ತಳಿ ಸಾಕಲು ಪ್ರೇರಣೆ ನೀಡುವುದು, ಮಲೆನಾಡು ಗಿಡ್ಡ ತಳಿಯಲ್ಲಿ ಸ್ಥಳೀಯ ಹೆಚ್ಚು ಹಾಲು ಕೊಡುವ ಗೋ ತಳಿ ಅಭಿವೃದ್ಧಿ ಇನ್ನೂ ಅನೇಕ ಗೊತ್ತು ಗುರಿ ಇಟ್ಟುಕೊಂಡು ಯೋಜನೆ ರೂಪಿಸುವುದೆಂದು ನಿರ್ಧರಿಸಲಾಗಿದೆ.

ಈ ಬಗ್ಗೆ ಇತ್ತೀಚಿನ ಗೂಗಲ್ ಮೀಟ್ ಸಭೆಯಲ್ಲಿ ಸುರಕ್ಷಾ ಟ್ರಸ್ಟ್ ನ‌ ಮುಖ್ಯ ಸಂಚಾಲಕರಾದ  ಜಗದೀಶ ಪ್ರಸಾದ್ ,ಉಜಿರೆ ಇವರ ಆಶಯಕ್ಕೆ ಮಲೆನಾಡಿನ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೋಡೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕುಸಗುಂಡಿ ಗ್ರಾಮದ ನಿವಾಸಿ ಮಲೆನಾಡು ಗಿಡ್ಡ ಗೋ ಸಂವರ್ಧಕ , ದೇಸಿ ತಳಿ‌ ಸಂರಕ್ಷಕ ಯುವ ಉತ್ಸಾಹಿ ಗೋಪಾಲಕ
ದತ್ತಾತ್ರೇಯ ಭಟ್ ಹಲಗಾರು ಅವರು ತಮ್ಮ ಕಾರ್ಯಕ್ಷೇತ್ರವಾದ “ಕುಸಗುಂಡಿ” ಊರಿನಲ್ಲಿ ಸುರಕ್ಷಾ ಟ್ರಸ್ಟ್ ನ ಮೊದಲ
ಮಾದರಿ “ಗೋ ಗ್ರಾಮ” ವನ್ನಾಗಿ ರೂಪಿಸಲು ಬನ್ನಿ ಎಂದು ಸಂತಸದಿಂದ ಸುರಕ್ಷಾ ಟ್ರಸ್ಟ್ ನ ಸರ್ವ ಸದಸ್ಯರನ್ನು ಆಹ್ವಾನಿಸಿದರು. ಈ ನಿಟ್ಟಿನಲ್ಲಿ ಮೊನ್ನೆ ಏಪ್ರಿಲ್ ಎರಡನೇ ತಾರೀಖಿನಂದು ಸುರಕ್ಷಾ ಟ್ರಸ್ಟ್ ನ ಪ್ರಥಮ ಸಭೆ ಹಾಗೂ  ಮಲೆನಾಡು ಗಿಡ್ಡ ಗೋ ತಳಿ ಗೋಪಾಲಕರೊಂದಿಗೆ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಗೋವು  ಸಂಬಂಧಿಸಿದ ಕಾರ್ಯಕ್ರಮಗಳಿಗೆ ಭಾಗವಹಿಸುವಿಕೆಯ ಬಗ್ಗೆ ಜನರಿಗೆ ಸ್ವಲ್ಪ ಅನಾಸಕ್ತಿ. ಆ ನಡುವೆಯೂ ಕುಸ್ಕುಂಡಿ ಗ್ರಾಮಸ್ಥರು ನಮ್ಮ ನಿರೀಕ್ಷೆ ಮೀರಿ ಆಗಮಿಸಿದ್ದರು. ನಮ್ಮ ಸುರಕ್ಷಾದ ಚಿಕ್ಕ ಮಟ್ಟದ ಗೋ ಸಂಬಂಧಿಸಿದ ಕಾರ್ಯಕ್ರಮ ಮಾಡುವ ಪ್ರಯತ್ನಕ್ಕೆ ಚಿಕ್ಕ ಹಳ್ಳಿಯಲ್ಲಿ ಹೆಚ್ಚು ಗೋ ಪ್ರೇಮಿಗಳು ಹೆಚ್ಚು ಆಸಕ್ತಿಯಿಂದ ಬಂದಿರುವುದು ಭರವಸೆ ಮೂಡಿಸಿದೆ.

ನಿವೃತ್ತ ಪಶುವೈದ್ಯ ಮತ್ತು ಶ್ರೀ ರಾಮಚಂದ್ರಪುರ ಮಠ ದ ಗೋ ರಕ್ಷಣಾ ಹೋರಾಟ ದ ವಿಚಾರದಲ್ಲಿ ಹಲವಾರು ದಶಕದಿಂದ ಕಾರ್ಯ ನಿರ್ವಹಣೆ ಮಾಡಿದ ಡಾ  ವೈ ವಿ ಕೃಷ್ಣಮೂರ್ತಿ ಯವರು  ಮಲೆನಾಡು ಗಿಡ್ಡ ತಳಿ ಹಸುಗಳ ವೈವಿದ್ಯತೆ, ಗುಣ , ಸ್ವಭಾವ,ಹಾಲಿನ ಇಳುವರಿ, ಬಣ್ಣ ಇತರೆ ಎಲ್ಲಾ ವಿಷಯ ಗಳ ಬಗ್ಗೆ ನೆರೆದ ಗೋ ಪ್ರೇಮಿಗಳಿಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು.

ನಂತರ ಗೋಸೇವಾ ಗತಿ ವಿಧಿ ಯಲ್ಲಿ ಹಲವಾರು ವರ್ಷಗಳಿಂದ ಕಾರ್ಯನಿರ್ವಹಣೆ ಮಾಡುತ್ತಿರುವ  ಪ್ರವೀಣ ಸರಳಾಯರು ಸರಳವಾಗಿ ಮಲೆನಾಡು ಗಿಡ್ಡ ತಳಿ ಉಳಿಸೋಣ ವಿಚಾರದಲ್ಲಿ ಹಲವಾರು ವಿಷಯವನ್ನ ವಿವರಿಸಿದರು.

ಸುರಕ್ಷಾ ತಂಡದ ಮುಖ್ಯ ಸಂಚಾಲಕರಾದ  ಜಗದೀಶ್ ಪ್ರಸಾದ್ , ಉಜರೆಯವರು “ಮಲೆನಾಡು ಗಿಡ್ಡ ತಳಿ ಅವಸಾನದಂಚಿನಲ್ಲಿರುವುದು, ಕಸಾಯಖಾನೆಗೆ ಹೋಗುತ್ತಿರುವುದರ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿ ಗೋ ಉಳಿಸಲು ನಾವೆಲ್ಲರೂ ಯಾವ ರೀತಿಯ ಪ್ರಯತ್ನ ಮಾಡಬೇಕು ಎಂದು ಹೇಳಿದರು.

ನಂತರ ನೆಡೆದ ಗೋಪಾಲಕರ ನಡುವಿನ ಸಂವಾದದಲ್ಲಿ ವೈದ್ಯ  ಸುಪ್ರಿತ್ ಲೋಬೋ ಅವರು ಮಲೆನಾಡು ಗಿಡ್ಡ ತಳಿ ಗವ್ಯೊತ್ಪನ್ನ ಬಳಸಿ ಆರೋಗ್ಯ ವೃದ್ದಿ ಹೇಗೆ ಸಾದ್ಯ ಎಂಬುದನ್ನು ನೆರೆದ ಗೋಪಾಲಕರಿಗೆ ವಿವರಿಸಿದರು.

ಸುನೀತಾ ಗೋವಿನ ಗವ್ಯೋತ್ಪನ್ನದ ಮೌಲ್ಯವರ್ಧನೆ ಯ ಬಗ್ಗೆ ಕಿರು ಉಪನ್ಯಾಸ ನೀಡಿದರು. ಕಾರ್ಯಕ್ರಮಕ್ಕೆ  ಸುರಕ್ಷಾ ಟ್ರಸ್ಟ್ ನ ಕಾನೂನು ಸಲಹೆಗಾರರೂ ,  ಟ್ರಸ್ಟ್ ನ ಸದಸ್ಯರೂ ಆದ  ಸತೀಶ್ ಭಟ್ಟ ಮತ್ತು  ಗೋ ಚಿಂತಕ ಮುರುಳಿಕೃಷ್ಣ ಭಟ್ ಆಗಮಿಸಿದ್ದರು.

ಬರಹ :
ಪ್ರಬಂಧ ಅಂಬುತೀರ್ಥ

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಪ್ರಬಂಧ ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ನಿವಾಸಿ ಪ್ರಬಂಧ. ಬಿ ಎ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಕೃಷಿ ಕೆಲಸ. ಕಥೆ , ಪರಿಸರ, ಕೃಷಿ , ವಿಜ್ಞಾನ , ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಲೇಖನ ಬರೆಯುವ ಹವ್ಯಾಸ. ಮಲೆನಾಡು ಗಿಡ್ಡ ಗೋ ತಳಿ ಸಂವರ್ಧನೆ, ಜೀರಿಗೆ ಮೆಣಸಿನಕಾಯಿ ಬೆಳೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಲೆನಾಡು ಗಿಡ್ಡ ತಳಿ ಹಸುಗಳ ಸೆಗಣಿಯನ್ನು ಮೌಲ್ಯ ವರ್ಧನೆ ಮಾಡಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಯುಕ್ತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

ಇದನ್ನೂ ಓದಿ

ಬೆಳೆಗಾರರಿಂದ ಗ್ರಾಹಕರಿಗೆ ನೇರ ಮಾವು ಮಾರಾಟ | ಅಂಚೆ ಇಲಾಖೆಯಿಂದ 6 ವರ್ಷಗಳಿಂದ ಯಶಸ್ವಿ | ದೆಹಲಿಯವರೆಗೂ ಮಾವಿನಹಣ್ಣು ರವಾನೆ |
April 23, 2025
11:24 AM
by: ದ ರೂರಲ್ ಮಿರರ್.ಕಾಂ
ಅರ್ಧಕೇಂದ್ರ ಯೋಗದಿಂದ ಈ 3 ರಾಶಿಗೆ ಯಶಸ್ಸು | ಕೋಟ್ಯಾಧಿಪತಿ ಯೋಗ!
April 23, 2025
8:13 AM
by: ದ ರೂರಲ್ ಮಿರರ್.ಕಾಂ
ಜಮ್ಮು- ಕಾಶ್ಮೀರ | ಪ್ರವಾಸಿಗರ ಮೇಲೆ ಉಗ್ರರ ದಾಳಿ | ಉಗ್ರರ ದಾಳಿಗೆ ಕನ್ನಡಿಗ ಸೇರಿ 20 ಕ್ಕೂ ಹೆಚ್ಚು ಜನರು ಬಲಿ
April 22, 2025
9:35 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 22.04.2025 | ಅಲ್ಲಲ್ಲಿ ಸಂಜೆ ಗುಡುಗು ಸಹಿತ ಮಳೆ | ಎ.26ರಿಂದ ಮಳೆ ಹೆಚ್ಚಾಗುವ ನಿರೀಕ್ಷೆ
April 22, 2025
5:50 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group