ಅಡಿಕೆ ಕಾರ್ಯಪಡೆಗೆ ಅನುದಾನ : ರಾಜ್ಯ ಸರಕಾರಕ್ಕೆ ಕ್ಯಾಂಪ್ಕೋ ಅಭಿನಂದನೆ

December 2, 2020
5:31 PM

ರಾಜ್ಯ ಸರಕಾರವು ಅಡಿಕೆ ಬೆಳೆಯ ಸರ್ವತೋಮುಖ ಅಭಿವೃದ್ಧಿಗಾಗಿ ರೂಪಿಸಿರುವ ಅಡಿಕೆ ಕಾರ್ಯಪಡೆ (ಅರೆಕಾ ಟಾಸ್ಕ್ ಫೋರ್ಸ್) ಯು ಅಡಿಕೆಯ ಭವಿಷ್ಯತ್ತಿಗಾಗಿ ಎಲ್ಲಾ ರೀತಿಯಲ್ಲೂ ಕಾರ್ಯಪ್ರವೃತ್ತವಾಗಿದ್ದು, ಅಡಿಕೆ ಮಾರುಕಟ್ಟೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ತೀರ್ಥಹಳ್ಳಿ ಶಾಸಕ  ಆರಗ ಜ್ಞಾನೇಂದ್ರ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಯಪಡೆಗೆ ಇದೀಗ ರಾಜ್ಯಸರಕಾರವು ರೂ.10 ಕೋಟಿಗಳ ಅನುದಾನವನ್ನು ಘೋಷಿಸಿದ್ದು ಇದಕ್ಕಾಗಿ ಸರಕಾರಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ಕ್ಯಾಂಪ್ಕೋ ಅಧ್ಯಕ್ಷ ಎಸ್‌ ಆರ್‌ ಸತೀಶ್ಚಂದ್ರ ಹೇಳಿದ್ದಾರೆ.

ಈ ಅನುದಾನದ ಮೂಲಕ  ಕಾರ್ಯಪಡೆಯ ಕೆಲಸ ಕಾರ್ಯಗಳಿಗೆ ಇನ್ನಷ್ಟು ವೇಗವನ್ನು ನೀಡಲಿದೆ. ಈ ಅನುದಾನವು ಅಡಿಕೆಯ ಬಗೆಗಿನ ಕಾನೂನಾತ್ಮಕ ವ್ಯವಹಾರಗಳಿಗಾಗಿ ಮತ್ತು ಅಡಿಕೆಯ ಮೌಲ್ಯವರ್ಧನೆ ಸಂಬಂಧ ಸಂಶೋಧನೆಗಳನ್ನು ನಡೆಸುವುದಕ್ಕಾಗಿ ವಿನಿಯೋಗವಾಗಲಿದೆ. ಅಡಿಕೆ ಕೃಷಿಯ ಬಗ್ಗೆ ಒಲವಿರಿಸಿಕೊಂಡು ಮುತುವರ್ಜಿ ವಹಿಸಿ ಕಾರ್ಯಪಡೆಗೆ ಅನುದಾನವನ್ನೊದಗಿಸಿಕೊಟ್ಟ ಮಾನ್ಯ ಮುಖ್ಯಮಂತ್ರಿಗಳ ಮತ್ತು ರಾಜ್ಯ ಸರಕಾರದ ನಡೆಯು ಪ್ರಶಂಸನೀಯ. ಇದಕ್ಕಾಗಿ ಅಡಿಕೆ ಕೃಷಿಕರ ಪರವಾಗಿ ಕೃಷಿಕರ ಸಂಸ್ಥೆ ಕ್ಯಾಂಪ್ಕೊ ವತಿಯಿಂದ ಮುಖ್ಯಮಂತ್ರಿ  ಬಿ.ಎಸ್. ಯಡಿಯೂರಪ್ಪ ಅವರನ್ನು ಕ್ಯಾಂಪ್ಕೋ ಅಭಿನಂದಿಸುತ್ತದೆ. ಅಲ್ಲದೆ ಈ ಅನುದಾನಕ್ಕಾಗಿ ಶ್ರಮಿಸಿದ ದಕ್ಷಿಣ ಕನ್ನಡದ  ಸಂಸದರಾದ  ನಳಿನ್ ಕುಮಾರ್ ಕಟೀಲ್ ಮತ್ತು ಅಡಿಕೆ ಬೆಳೆಯುವ ಪ್ರದೇಶದ ಎಲ್ಲ ಶಾಸಕರುಗಳಿಗೆ ಕೃತಜ್ಞತೆಗಳನ್ನು ಕ್ಯಾಂಪ್ಕೋ ಸಲ್ಲಿಸುತ್ತದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್‌ ಆರ್‌ ಸತೀಶ್ಚಂದ್ರ ತಿಳಿಸಿದ್ದಾರೆ.

 

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಎಫ್‌ಪಿಒ ಗಳಿಗೆ ರಾಜ್ಯ ಸರ್ಕಾರದಿಂದ ನೆರವು
March 17, 2025
6:34 AM
by: ದ ರೂರಲ್ ಮಿರರ್.ಕಾಂ
ಜಾನುವಾರು ಗಣತಿ | ಬೆಂಗಳೂರು ಗ್ರಾಮಾಂತರ ಜಿಲ್ಲೆ ಪ್ರಥಮ | 2.90 ಲಕ್ಷ ರೈತರು ಪಶುಸಂಗೋಪನೆಯಲ್ಲಿ |
March 17, 2025
6:30 AM
by: The Rural Mirror ಸುದ್ದಿಜಾಲ
ಹಾಸನ ಜಿಲ್ಲೆಯ ಬೇಲೂರಿನಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆ ಯಶಸ್ವಿ
March 17, 2025
6:20 AM
by: The Rural Mirror ಸುದ್ದಿಜಾಲ
ಮೆಣಸಿನಕಾಯಿ ಬೆಲೆ ಕುಸಿತ | ಒಣ ಮೆಣಸಿನಕಾಯಿ ಖರೀದಿಸುವಂತೆ ಬಸವರಾಜ ಬೊಮ್ಮಾಯಿ ಪತ್ರ
March 14, 2025
11:03 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror