Advertisement
ಸುದ್ದಿಗಳು

ಹಳದಿರೋಗ ಪರಿಹಾರಕ್ಕಾಗಿ ರಾಜ್ಯ ಬಜೆಟ್ ನಲ್ಲಿ ನಿಧಿ ಹಂಚಿಕೆ – ಕ್ಯಾಂಪ್ಕೋ ಅಭಿನಂದನೆ

Share

ಮಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸೋಮವಾರ ಮಂಡಿಸಿದ ರಾಜ್ಯ ಬಜೆಟ್ ನಲ್ಲಿ  ಅಡಿಕೆಗೆ ಬಾಧಿಸಿರುವ ಹಳದಿರೋಗದ ಬಗ್ಗೆ ಸಂಶೋಧನೆಗಳನ್ನು ನಡೆಸಿ ಪರಿಹಾರವನ್ನು ಕಂಡುಕೊಳ್ಳುವುದರ ಜೊತೆಗೆ ಪರ್ಯಾಯ ಬೆಳೆಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ರೂ.25 ಕೋಟಿಗಳ ನಿಧಿ ಹಂಚಿಕೆಯನ್ನು ಘೋಷಿಸಿದ್ದಾರೆ. ರಾಜ್ಯಸರಕಾರದ ಈ ನಡೆಯನ್ನು ಪ್ರಶಂಸಿಸಿರುವ ಕ್ಯಾಂಪ್ಕೊ ಅಧ್ಯಕ್ಷ ಎ.ಕಿಶೋರ್‌ ಕುಮಾರ್‌ ಕೊಡ್ಗಿ ಅವರು ಮುಖ್ಯಮಂತ್ರಿಗಳನ್ನು ಅಭಿನಂದಿಸಿದ್ದಾರೆ.

ಇತ್ತೀಚೆಗೆ ಹಳದಿರೋಗದ ಪರಿಹಾರಕ್ಕಾಗಿ ಮತ್ತು ನೊಂದಿರುವ ರೈತರು ಹೊಸದಾಗಿ ಕೃಷಿಯಲ್ಲಿ ತೊಡಗಿಸಿಕೊಳ್ಳುವಲ್ಲಿ ನೆರವಾಗುವ ಸಲುವಾಗಿ ಪ್ಯಾಕೇಜ್ ಘೋಷಿಸುವಂತೆ ತಾವು ಮಾಡಿರುವ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದ ಮುಖ್ಯಮಂತ್ರಿಗಳು ಇದೀಗ ನುಡಿದಂತೆ ನಡೆದು, ರಾಜ್ಯ ಮುಂಗಡ ಪತ್ರದಲ್ಲಿ ಹಳದಿರೋಗ ಪರಿಹಾರಕ್ಕಾಗಿ ಪ್ಯಾಕೇಜ್‌ ಘೋಷಣೆ ಮಾಡಿದ್ದಕ್ಕಾಗಿ ಹರ್ಷ ವ್ಯಕ್ತಪಡಿಸಿದ್ದಾರೆ.

ಘೋಷಿತ ಅನುದಾನವು ಹಳದಿರೋಗದ ಪರಿಹಾರಕ್ಕಾಗಿ ನಡೆಸಲಾಗುವ ವೈಜ್ಞಾನಿಕ ಸಂಶೋಧನೆಗಳಿಗಾಗಿ ಮತ್ತು ರೋಗಬಾಧೆಯಿಂದ ತಮ್ಮಅಡಿಕೆ ತೋಟಗಳನ್ನು ಕಳೆದುಕೊಂಡಿರುವ ರೈತರು ಹೊಸದಾಗಿ ಕೃಷಿಯನ್ನುಆರಂಭಿಸುವಲ್ಲಿ ನೆರವಾಗಲಿದೆ. ಈಗಾಗಲೇ ದ.ಕ.ಜಿಲ್ಲೆಯ ಸುಳ್ಯ, ಕೊಡಗು ಜಿಲ್ಲೆಯ ಮಡಿಕೇರಿ, ಶಿವಮೊಗ್ಗ ಜಿಲ್ಲೆಯ ಶೃಂಗೇರಿ, ಕೊಪ್ಪ ತಾಲೂಕುಗಳಲ್ಲಿ ಹಳದಿರೋಗವು ಅಡಿಕೆ ತೋಟಗಳಲ್ಲಿ ವ್ಯಾಪಿಸಿದ್ದು, ಆದಾಯ ನಷ್ಟ ಅನುಭವಿಸಿರುವ ರೈತರು ನೋವಿನಿಂದ ಹೊರಬಂದು ತಮ್ಮತೋಟಗಳಲ್ಲಿ ಪರ್ಯಾಯ ಬೆಳೆಗಳನ್ನು ಬೆಳೆಸುವತ್ತ ಗಮನಹರಿಸಬೇಕಾಗಿದೆ ಎಂದು ಕಿಶೋರ್‌ ಕುಮಾರ್‌ ಕೊಡ್ಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಮಳೆ ಕೈಕೊಟ್ಟಿದೆ… ಜಾನುವಾರುಗಳಿಗೆ ಮೇವು ಎಲ್ಲಿಂದ..?

ಬರದ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗದಂತೆ ಸರ್ಕಾರ ಉಚಿತವಾಗಿ…

19 hours ago

ಗೋಡಂಬಿ ಬೇರೆ ದೇಶಗಳಿಂದ… ಜಾಗತಿಕ ಮಾರುಕಟ್ಟೆ ವಿಯೆಟ್ನಾಂನ ಕೈಯಲ್ಲಿ..!

ಕಚ್ಚಾ ಗೋಡಂಬಿಯ ದೊಡ್ಡ ಭಾಗವನ್ನು ವಿದೇಶಗಳಿಂದ ಆಮದು ಮಾಡಿಕೊಂಡರೂ, ಸಂಸ್ಕರಣೆ ಮತ್ತು ಮೌಲ್ಯವರ್ಧನೆಯ…

19 hours ago

ರೇಷನ್ ಕಾರ್ಡ್‌ ಇ-ಕೆವೈಸಿಗೆ ಇನ್ನು ಕ್ಯೂ ಬೇಕಿಲ್ಲ – ಮನೆಯಲ್ಲೇ ಇ-ಕೆವೈಸಿಗೆ ‘ಅನ್ನಸೇವೆ’ ಆ್ಯಪ್‌

ಪಡಿತರ ಚೀಟಿಗೆ ಆಧಾರ್‌ ಆಧಾರಿತ ಇ-ಕೆವೈಸಿ ಮಾಡಲು ಇನ್ನು ನ್ಯಾಯಬೆಲೆ ಅಂಗಡಿಗಳ ಮುಂದೆ…

20 hours ago

ಅಡಿಕೆ ವಹಿವಾಟಿನ ಹಿಂದೆ ಮತ್ತೊಂದು ದೊಡ್ಡ ತನಿಖೆ..? ₹1.3 ಕೋಟಿ ನಗದು ವಶ

ಅಕ್ರಮ ಅಡಿಕೆ ವ್ಯಾಪಾರ, ಕಳ್ಳಸಾಗಣೆ ಹಾಗೂ ಜಿಎಸ್‌ಟಿ ವಂಚನೆ ಆರೋಪದ ತನಿಖೆಯಲ್ಲಿ ಪಶ್ಚಿಮ…

20 hours ago

ಇಂಧನ ಮಾತ್ರವಲ್ಲ, ಕೃಷಿಗೂ ಹೊಸ ಮಾರುಕಟ್ಟೆ: ಎಥೆನಾಲ್‌ ಮಿಶ್ರಣ ಕೃಷಿ ವೈವಿಧ್ಯೀಕರಣಕ್ಕೆ ಹೆಜ್ಜೆ ಎಂದ ಗಡ್ಕರಿ

ಎಥೆನಾಲ್‌ ಮಿಶ್ರಣವು ಕೇವಲ ಇಂಧನ ನೀತಿಯಲ್ಲ, ಕೃಷಿ ಉತ್ಪನ್ನಗಳಿಗೆ ಹೊಸ ಮಾರುಕಟ್ಟೆ ಸೃಷ್ಟಿಸುವ…

20 hours ago

ಹವಾಮಾನ ವರದಿ | 02-10-2026 | ಸುಳ್ಯದಲ್ಲಿ 100 ಮಿ.ಮೀ.ವರೆಗೆ ಮಳೆ – ಕರಾವಳಿ–ಮಲೆನಾಡಿನಲ್ಲಿ ಮುಂದಿನ 10 ದಿನವೂ ಮಳೆಯ ಸಾಧ್ಯತೆ

ಸುಳ್ಯ ತಾಲೂಕಿನ ಹಲವು ಕಡೆ ನಿನ್ನೆ ಸುಮಾರು 100 ಮಿ.ಮೀ.ನಷ್ಟು ಮಳೆಯಾಗಿದ್ದು, ಕರಾವಳಿ–ಮಲೆನಾಡಿನ…

2 days ago