ಕ್ಯಾಂಪ್ಕೋ ವತಿಯಿಂದ ಮತ್ತೊಂದು ಚಾಕೋಲೇಟ್ ಉತ್ಪನ್ನ ಹಾಗೂ ಚಾಕೋಲೇಟ್ ಪೇಯ ವಿನ್ನರ್ ನ ಇನ್ನೊಂದು ಉತ್ಪನ್ನ ಅ.30 ರಂದು ಪುತ್ತೂರಿನಲ್ಲಿ ಬಿಡುಗಡೆಯಾಗಲಿದೆ. ದಿ ಡೈರಿ ಡ್ರೀಮ್ &ನಟ್ (The Dairy Dream Fruit & Nut) ಹಾಗೂ ವಿನ್ನರ್ ಪೇಯ ವಿನ್ನರ್ ವಿದ್ ಜಾಗ್ರೀ (Winner-with Jaggery) ಬಿಡುಗಡೆಯಾಗುವ ನೂತನ ಉತ್ಪನ್ನ.
ಪುತ್ತೂರಿನ ಕ್ಯಾಂಪ್ಕೋ ಚಾಕೋಲೇಟ್ ಪ್ಯಾಕ್ಟರಿ ಆವರಣದಲ್ಲಿ ನಡೆಯುವ ಈ ಬಿಡುಗಡೆ ಸಮಾರಂಭದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ| ಕೆ.ಪ್ರಭಾಕರ ಭಟ್ ಕಲ್ಲಡ್ಕ ಅವರು ಬಿಡುಗಡೆಗೊಳಿಸುವರು. ಶಾಸಕ ಸಂಜೀವ ಮಟಂದೂರು ಅವರು ಭಾಗವಹಿಸುವರು.
ದೇಸೀ ಚಾಕೋಲೇಟ್, ರೈತರ ಬೆನ್ನೆಲುಬಾದ ಕ್ಯಾಂಪ್ಕೋ ನೂತನವಾಗಿ ಬಿಡುಗಡೆ ಮಾಡುವ ಈ ಚಾಕೋಲೇಟ್ ಉತ್ಪನ್ನವು ಶುದ್ಧ ಹಾಲಿನ ಪುಡಿ, ಕೋಕೋ, ಬಾದಾಮಿ ಮತ್ತುಒಣದ್ರಾಕ್ಷಿಗಳಮಿಶ್ರಣದೊಂದಿಗೆ ತಯಾರಿಸಲಾಗಿದೆ. ಈ ಉತ್ಪನ್ನವು 40 ಗ್ರಾಂ ಸ್ಲಾಬ್ ನಲ್ಲಿ 40 ರೂಪಾಯಿ ಗರಿಷ್ಟ ಮಾರಾಟ ಬೆಲೆಗೆ ಲಭ್ಯವಿದೆ.
ಚಾಕೊಲೇಟ್ ಹಾಗೂ ಬೆಲ್ಲದೊಂದಿಗೆ ಕೂಡಿದ ವಿಶೇಷ ಪೇಯ ಮಿಶ್ರಣ ವಿನ್ನರ್ ವಿದ್ ಜಾಗ್ರಿ ಉತ್ಪನ್ನವು ಬೆಲ್ಲದ ನೈಸರ್ಗಿಕ ಪೋಷಕಾಂಶಗಳೊಂದಿಗೆ ಸಮೃದ್ಧವಾಗಿದೆ. ಈ ಉತ್ಪನ್ನವು, ಸರ್ವಋತುಗಳಿಗೆ ಹಾಗೂ ಎಲ್ಲಾ ವಯೋಮಾನದವರಿಗೆ ಬಿಸಿ ಅಥವಾ ತಂಪುರೂಪದಲ್ಲಿ ಸೇವಿಸಬಹುದು. ಇದು ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಿದೆ. ಇದನ್ನು 300 ಗ್ರಾಂ ಪ್ಯಾಕ್ ಗೆ ರೂ.180 ನಲ್ಲಿ ಪರಿಚಯಿಸಲಾಗುತ್ತಿದೆ.
ಮಾರ್ಚ್ 6 ರಂದು ದಕ್ಷಿಣ ಕನ್ನಡ, ಮಲೆನಾಡು, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ…
ಒಂದು ತಿಂಗಳ ಅವಧಿಯಲ್ಲಿ ಚಾರ್ಮಾಡಿ ಘಾಟ್, ಬಿದಿರುತಳ, ಮುಳ್ಳಯ್ಯನಗಿರಿ ಸೇರಿ ಹಲವು ಅರಣ್ಯ…
ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಘಟ್ಟದ ತಪ್ಪಲಿನ ಪ್ರದೇಶಗಳಲ್ಲಿ ಮಳೆಯ ಸಾಧ್ಯತೆಯನ್ನು…
ಮಹಾಕುಂಭ ಮೇಳದ ಪ್ರಯಾಣದ ಅನುಭವವನ್ನು ಕೃಷಿಕ ಟಿ ಆರ್ ಸುರೇಶ್ಚಂದ್ರ ಇಲ್ಲಿ ಬರೆದಿದ್ದಾರೆ..…