ಲಕ್ಷ್ಮಣ ರಾವ್ ಇನಾಮದಾರ್ ಪ್ರಶಸ್ತಿಗೆ ಕ್ಯಾಂಪ್ಕೋ ಅವಿರೋಧವಾಗಿ ನಾಮನಿರ್ದೇಶನಗೊಂಡಿದೆ. ತನ್ನ ಸದಸ್ಯರು ಮತ್ತು ಪ್ರದೇಶಕ್ಕೆ ಅದ್ಭುತವಾದ ಸೇವೆಗಳಲ್ಲಿ ತೊಡಗಿರುವ ಪ್ರಖ್ಯಾತ ಸಹಕಾರಿ ಸಂಘಕ್ಕೆ ನೀಡುವ ಪ್ರಶಸ್ತಿ ಇದು. ರೈತರ ಆದಾಯವನ್ನು ದ್ವಿಗುಣಗೊಳಿಸುವ ಮತ್ತು ವಿವಿಧ ಕೃಷಿಉತ್ಪನ್ನಗಳ ಸಂಸ್ಕರಣೆಗೆ ಉತ್ತೇಜನ ನೀಡುವ ರಾಷ್ಟ್ರೀಯ ನೀತಿಯ ಹಿನ್ನೆಲೆಯಲ್ಲಿ, ಸಹಕಾರ ಭಾರತಿಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯು ರಚಿಸಿರುವ ಸಮಿತಿಯು ಈ ವರ್ಷ ಸರ್ವಾನುಮತದಿಂದ ಕ್ಯಾಂಪ್ಕೋಗೆ ಅದರ ಗಮನಾರ್ಹ ಸೇವೆಗಳಿಗಾಗಿ ಪ್ರಶಸ್ತಿಯನ್ನು ನೀಡುವಂತೆ ಶಿಫಾರಸು ಮಾಡಿದೆ.
ಕ್ಯಾಂಪ್ಕೋ ವೃತ್ತಿಪರವಾಗಿ ಮತ್ತು ಸಹಕಾರ ತತ್ವಗಳ ಮೇಲೆ ಕಾರ್ಯನಿರ್ವಹಿಸುತ್ತಿರುವುದರೊಂದಿಗೆ, ಗ್ರಾಮೀಣ ಸಮೂದಾಯ, ವಿಶೇಷವಾಗಿ ಅಡಿಕೆ, ಕೊಕ್ಕೋ ಮತ್ತು ರಬ್ಬರ್ ಕೃಷಿಯಲ್ಲಿ ತೊಡಗಿರುವ ರೈತರಿಗೆ ಗಮನಾರ್ಹ ಸೇವೆಗಳನ್ನು ನೀಡುತ್ತಿದೆ ಹಾಗೂ ವಿಶ್ವದರ್ಜೆಯ ವಿವಿಧ ಚಾಕಲೇಟ್ ಗಳನ್ನು ತಯಾರಿಸಿ ರಫ್ತುಮಾಡುತ್ತದೆ.
2021 ರ ಡಿಸೆಂಬರ್ 17 ರಿಂದ 19 ರವರೆಗೆ ಲಕ್ನೋದಲ್ಲಿ ನಡೆಯಲಿರುವ ಸಹಕಾರ ಭಾರತಿಯ ರಾಷ್ಟ್ರೀಯ ಸಮ್ಮೇಳನದಲ್ಲಿ ಗೌರವಾನ್ವಿತ ಒಕ್ಕೂಟದ ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರ ಸಮ್ಮುಖದಲ್ಲಿ ನಡೆಯಲಿರುವ ಸಹಕಾರ ಭಾರತಿಯ ರಾಷ್ಟ್ರೀಯ ಸಮ್ಮೇಳನದಲ್ಲಿ ಮಾಜಿ ಸರಕಾರ್ಯವಾಹ ಭೈಯಾಜಿ ಜೋಶಿ ಅವರು ಕ್ಯಾಂಪ್ಕೊಗೆ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ.
ಅಡಿಕೆ ನಿಷೇಧಕ್ಕಿಂತ ಬಳಕೆಯ ನಿಯಂತ್ರಣವೇ ಪರಿಣಾಮಕಾರಿ ಎಂದು WHO ಅಭಿಪ್ರಾಯಪಟ್ಟಿದೆ. ಆಗ್ನೇಯ ಏಷ್ಯಾದ…
ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಅಡಿಕೆ ಬಳಕೆಯಿಂದ ಹೆಚ್ಚುತ್ತಿರುವ ಬಾಯಿ ಕ್ಯಾನ್ಸರ್ ಸೇರಿದಂತೆ ಮಾರಣಾಂತಿಕ…
ಅರೆಕಾನಟ್ ಚಾಲೆಂಜ್ : ಟರ್ನಿಂಗ್ ಪಾಲಿಸಿ ಇನ್ಟು ಇಂಪ್ಯಾಕ್ಟ್ ಇನ್ ದ ಸೌತ್…
ಸಣ್ಣ ರೈತರ ಕೃಷಿಯಲ್ಲಿ ಕಾರ್ಮಿಕ ಕೊರತೆ, ವೆಚ್ಚ ಏರಿಕೆ ಸಮಸ್ಯೆ ನಿವಾರಣೆಗೆ ರೋಬೋಟಿಕ್ಸ್,…
ಕ್ಯಾನ್ಸರ್ ವಿರುದ್ಧ ಹೋರಾಟ ಎಂದರೆ ಕೇವಲ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವುದು ಮಾತ್ರವಲ್ಲ. ರೋಗ…
ರಾಜ್ಯದಲ್ಲಿ ಅಕ್ರಮ ವಲಸಿಗರು ಹಾಗೂ ಬಾಂಗ್ಲಾ ಅಕ್ರಮ ವಲಸಿಗರ ಬಗ್ಗೆ ಮಾಹಿತಿಯನ್ನು ವಿಧಾನಪರಿಷತ್…