ಅಡಿಕೆ ಬೆಳೆಗಾರರ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ಮಹಾಸಭೆಯು ಸೆ.13 ರಂದು ಅಡ್ಯಾರ್ ಗಾರ್ಡನ್‌ನಲ್ಲಿ ನಡೆಯಲಿದೆ. ಸಂಸ್ಥೆಯು 2024-25 ನೇ ಸಾಲಿನಲ್ಲಿ 3632 ಕೋಟಿ ರೂಪಾಯಿ ವ್ಯವಹಾರ ನಡೆಸುವುದರೊಂದಿಗೆ 39.87 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿದ್ದು ಶೇ. 8 ಡಿವಿಡೆಂಡ್ ನೀಡಲು ನಿರ್ಧರಿಸಿದೆ. ಅಷ್ಟೇ ಅಲ್ಲದೆ 2014-25 ನೇ ಸಾಲಿನಲ್ಲಿ ಅಡಿಕೆ ಹಾಗೂ ಕೊಕ್ಕೋ ಮಾರಾಟದ ಮೇಲೆ ರೈತರಿಗೆ ಪ್ರೋತ್ಸಾಹ ಧನ ನೀಡಲು ಕೂಡಾ ನಿರ್ಧರಿಸಿದೆ. …… ಮುಂದೆ ಓದಿ……
ಸೆ.13 ರಂದು ಸಂಸ್ಥೆಯ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಅವರ ಅಧ್ಯಕ್ಷತೆಯನ್ನು ಸದಸ್ಯರ ಮಹಾಸಭೆ ನಡೆಯಲಿದೆ. ಈ ಬಾರಿ ಸಂಸ್ಥೆಯು 65,675 ಮೆಟ್ರಿಕ್ ಟನ್ ಅಡಿಕೆ ಖರೀದಿ ಮಾಡಿದ್ದು 64,681 ಮೆಟ್ರಿಕ್ ಟನ್ ಅಡಿಕೆ ಮಾರಾಟ ಮಾಡಿದೆ. 1900 ಮೆಟ್ರಕ್ ಟನ್ ಹಸಿ ಕೊಕ್ಕೋ ಹಾಗೂ 5236 ಮೆಟ್ರಿಕ್ ಟನ್ ಒಣ ಕೊಕ್ಕೋ ಬೀಜ ಖರೀದಿ ಮಾಡಿದ್ದು ಚಾಕೋಲೇಟ್ ಕಾರ್ಖಾನೆಯಲ್ಲಿ 5047 ಮೆಟ್ರಿಕ್ ಟನ್ ಕೊಕೋ ಒಣ ಬೀಜವನ್ನು ಬಳಸಿಕೊಳ್ಳಲಾಗಿದೆ.
ಈ ಬಾರಿ ಕ್ಯಾಂಪ್ಕೊ 11512 ಮೆಟ್ರಿಕ್ ಟನ್ ಚಾಕೋಲೇಟ್ ಉತ್ಪಾದನೆ ಮಾಡಿದ್ದು ಇದರಲ್ಲಿ 10877 ಮೆಟ್ರಿಕ್ ಟನ್ ಕ್ಯಾಂಪ್ಕೊ ಬ್ರಾಂಡ್ ಹಾಗೂ ಉಳಿದವು ಇತರ ಬ್ರಾಂಡ್‌ಗಳ ಉತ್ಪಾದನೆಯಾಗಿದೆ. ಈ ಬಾರಿ 62.3 ಮೆಟ್ರಿಕ್ ಟನ್ ತೆಂಗಿನ ಎಣ್ಣೆ ಉತ್ಪಾದನೆಯನ್ನು ಕ್ಯಾಂಪ್ಕೊ ಮಾಡಿದೆ. 1393 ಮೆಟ್ರಿಕ್ ಟನ್ ರಬ್ಬರ್ ಖರೀದಿ ಮಾಡಿರುವ ಕ್ಯಾಂಪ್ಕೊ 1356 ಮೆಟ್ರಿಕ್ ಟನ್ ರಬ್ಬರ್ ಮಾರಾಟ ಮಾಡಿದೆ. 1388 ಮೆಟ್ರಿಕ್ ಟನ್ ಕಾಳುಮೆಣಸು ಖರೀದಿ ಮಾಡಿ 1100 ಮೆಟ್ರಿಕ್ ಟನ್ ಕಾಳುಮೆಣಸು ಮಾರಾಟ ಮಾಡಿದೆ. ಇದರ ಜೊತೆಗೆ ಮೈಲುತುತ್ತು , ಸಾವಯವ ಗೊಬ್ಬರ, ಲಘುಪೋಷಕಾಂಶಗಳನ್ನು ರೈತರಿಗೆ ಸ್ಫರ್ಧಾತ್ಮಕ ದರದಲ್ಲಿ ಮಾರಾಟ ಮಾಡಿದೆ.
ಅಡಿಕೆ , ಕಾಳುಮೆಣಸು ಕಳೆದ ವರ್ಷಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕ್ಯಾಂಪ್ಕೊ ಖರೀದಿ ಮಾಡಿದೆ. ರಬ್ಬರ್ ಖರೀದಿಯಲ್ಲಿ ಕ್ಯಾಂಪ್ಕೊ ಅಥವಾ ಮಾರಾಟದಲ್ಲಿ ಬೆಳೆಗಾರರು ಅಷ್ಟೊಂದು ಆಸಕ್ತಿ ತೋರಿಸಲಿಲ್ಲ. ಅಡಿಕೆ ಧಾರಣೆಯ ಏರುಪೇರು ಲಾಭಾಂಶದಲ್ಲಿ ಕಾಣುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ಅಡಿಕೆ ಖರೀದಿಯಾಗಿದ್ದರೂ, ಅಡಿಕೆ ಧಾರಣೆ ಈ ಬಾರಿ ಅಸ್ಥಿರವಾಗಿರುವುದು ಗಮನಾರ್ಹವಾಗಿ ಕಂಡುಬಂದಿದೆ. ಸದ್ಯ ಅಡಿಕೆ ಧಾರಣೆ ಸ್ಥಿರತೆಗೆ ಕ್ಯಾಂಪ್ಕೊ ಆದ್ಯತೆ ನೀಡಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ ಸೇರಿಕೊಳ್ಳಿ….


