ಕ್ಯಾಂಪ್ಕೋ ಮಹಾಸಭೆ | 63.60 ಕೋಟಿ ರೂಪಾಯಿ ನಿವ್ವಳ ಲಾಭ | ಶೇ.15 ಡಿವಿಡೆಂಡ್ ಘೋಷಣೆ |

September 24, 2022
7:54 PM

ಕ್ಯಾಂಪ್ಕೋ ಮಹಾಸಭೆ ಶನಿವಾರ ಮಂಗಳೂರಿನ ಸಂಘನಿಕೇತನದಲ್ಲಿ ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.  ಕ್ಯಾಂಪ್ಕೋ ಈ ಬಾರಿ 2,778.39 ಕೋಟಿ ರೂಪಾಯಿ  ವ್ಯವಹಾರ ನಡೆಸಿ, 63.60 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿದೆ.  ಶೇ.15 ಡಿವಿಡೆಂಡ್ ಘೋಷಣೆ ಮಾಡಲಾಯಿತು. ಇದರ ಜೊತೆಗೆ 7,500 ಕೆಜಿ ಮಿತಿಗೆ ಒಳಪಟ್ಟು ಕಿಲೋಗೆ 1 ರೂಪಾಯಿ ಪ್ರೋತ್ಸಾಹಧನ, ಕೊಕೋ ಬೀಜ ಖರೀದಿ ಮೇಲೂ ಪ್ರೋತ್ಸಾಹಧನ ನೀಡಲು ತೀರ್ಮಾನಿಸಲಾಗಿದೆ ಎಂದು ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ತಿಳಿಸಿದರು.

ಕಳೆದ ಬಾರಿ 51,784.38 ಮೆಟ್ರಿಕ್ ಟನ್ ಅಡಿಕೆ ಕ್ಯಾಂಪ್ಕೋ ಖರೀದಿ ಮಾಡಿದೆ.  ಇದರಲ್ಲಿ 17,888.69 ಮೆಟ್ರಿಕ್ ಟನ್
ಕೆಂಪಡಿಕೆ ಮತ್ತು  33,895.69 ಮೆಟ್ರಿಕ್ ಟನ್ ಬಿಳಿ ಅಡಿಕೆ ಸೇರಿದೆ. 2,943.98 ಮೆಟ್ರಿಕ್ ಟನ್ ಕೋಕ್ಕೋ ಹಸಿ ಬೀಜ ಮತ್ತು
4,458.59 ಮೆಟ್ರಿಕ  ಟನ್ ಒಣಬೀಜ ಖರೀದಿಸಿದೆ. ಚಾಕಲೇಟ್ ಕಾರ್ಖಾನೆಯ ಒಟ್ಟು ಉತ್ಪಾದನೆ 13,791.13 ಮೆಟ್ರಿಕ್ ಟನ್‍ಗೆ ತಲುಪಿದೆ.  2,070.97 ಮೆಟ್ರಿಕ್ ಟನ್ ರಬ್ಬರ್ ಖರೀದಿಸಿದ್ದು, 2,081.81 ಮೆಟ್ರಿಕ್ ಟನ್ ಕಾಳುಮೆಣಸು ಖರೀದಿಸಲಾಗಿದೆ.

ಮಹಾಸಭೆಯಲ್ಲಿ ಕ್ಯಾಂಪ್ಕೋ ನೂತನ ಉತ್ಪನ್ನಗಳಾದ  ಹೊಸ ಚಾಕಲೇಟ್, ಹೊಸ ರೂಪದ ಸುಪಾರಿ ಸೌಗಂಧ್ ಹಾಗೂ ಕಲ್ಪ ಹೆಸರಿನ ತೆಂಗಿನ ಎಣ್ಣೆಯನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರುಗಳಾದ ನ.ಸೀತಾರಾಮ ಮತ್ತು ಹಾಗೂ ಗೋಪಾಲ ಚೆಟ್ಟಿಯಾರ್  ಉತ್ಪನ್ನವನ್ನು ಬಿಡುಗಡೆಗೊಳಿಸಿದರು.

ಉಪಾಧ್ಯಕ್ಷ ಶಂಕರನಾರಾಯಣ ಭಟ್ ಕೆ., ನಿರ್ದೇಶಕರಾದ ಎಸ್.ಆರ್.ಸತೀಶ್ಚಂದ್ರ, ದಯಾನಂದ ಹೆಗ್ಡೆ, ಕೃಷ್ಣಪ್ರಸಾದ್ ಮಡ್ತಿಲ,
ಶಂಭುಲಿಂಗ ಜಿ.ಹೆಗ್ಡೆ, ಕೆ.ಬಾಲಕೃಷ್ಣ ರೈ, ಜಯರಾಮ ಸರಳಾಯ, ಪದ್ಮರಾಜ್ ಪಟ್ಟಾಜೆ, ಎಂ.ಮಹೇಶ್ ಚೌಟ, ರಾಘವೇಂದ್ರ ಭಟ್, ಜಯಪ್ರಕಾಶ್ ನಾರಾಯಣ, ರಾಧಾಕೃಷ್ಣ, ಸತ್ಯನಾರಾಯಣ ಪ್ರಸಾದ್, ಸುರೇಶ್ ಕುಮಾರ್ ಶೆಟ್ಟಿ, ರಾಘವೇಂದ್ರ ಎಚ್.ಎಂ., ವ್ಯವಸ್ಥಾಪಕ ನಿರ್ದೇಶಕ ಕೃಷ್ಣಕುಮಾರ್ ಇದ್ದರು.

 

 

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

₹5 ಕೂಲಿಯಿಂದ ₹15 ಕೋಟಿ ಕೃಷಿ ಉದ್ಯಮದವರೆಗೆ…! ಈಗ ಆಕ್ಸ್‌ಫರ್ಡ್‌ AI ಸಮ್ಮೇಳನದಲ್ಲಿ ಭಾರತೀಯ ರೈತನ ಭಾಷಣ..!
March 20, 2026
8:42 PM
by: ದ ರೂರಲ್ ಮಿರರ್.ಕಾಂ
ಆಲಿಕಲ್ಲು ಮಳೆಯಿಂದ ಬೆಳೆ ರಕ್ಷಣೆ | ರೈತರಿಗೆ ‘ಆಂಟಿ-ಹೈಲ್ ನೆಟ್’ ಹೊಸ ತಂತ್ರಜ್ಞಾನ
March 20, 2026
8:14 PM
by: ದ ರೂರಲ್ ಮಿರರ್.ಕಾಂ
ಮಾರ್ಚ್‌ನಲ್ಲಿ ಹವಾಮಾನ ತಿರುವು | 25 ರಾಜ್ಯಗಳಿಗೆ ಮಳೆ-ಗುಡುಗು ಎಚ್ಚರಿಕೆ, ಗಾಳಿಯೂ ಸಾಧ್ಯತೆ..!
March 20, 2026
7:51 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 20-03-2026 | ಕರಾವಳಿ–ಮಲೆನಾಡಿಗೆ ಮಳೆ ಸೂಚನೆ..! | ರಾಜ್ಯದಲ್ಲಿ ಯಾವ ದಿನದಿಂದ ಮಳೆ ಚುರುಕು..?
March 20, 2026
12:07 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror