ಕ್ಯಾಂಪ್ಕೋ ಮಹಾಸಭೆ ಶನಿವಾರ ಮಂಗಳೂರಿನ ಸಂಘನಿಕೇತನದಲ್ಲಿ ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಕ್ಯಾಂಪ್ಕೋ ಈ ಬಾರಿ 2,778.39 ಕೋಟಿ ರೂಪಾಯಿ ವ್ಯವಹಾರ ನಡೆಸಿ, 63.60 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿದೆ. ಶೇ.15 ಡಿವಿಡೆಂಡ್ ಘೋಷಣೆ ಮಾಡಲಾಯಿತು. ಇದರ ಜೊತೆಗೆ 7,500 ಕೆಜಿ ಮಿತಿಗೆ ಒಳಪಟ್ಟು ಕಿಲೋಗೆ 1 ರೂಪಾಯಿ ಪ್ರೋತ್ಸಾಹಧನ, ಕೊಕೋ ಬೀಜ ಖರೀದಿ ಮೇಲೂ ಪ್ರೋತ್ಸಾಹಧನ ನೀಡಲು ತೀರ್ಮಾನಿಸಲಾಗಿದೆ ಎಂದು ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ತಿಳಿಸಿದರು.
ಮಹಾಸಭೆಯಲ್ಲಿ ಕ್ಯಾಂಪ್ಕೋ ನೂತನ ಉತ್ಪನ್ನಗಳಾದ ಹೊಸ ಚಾಕಲೇಟ್, ಹೊಸ ರೂಪದ ಸುಪಾರಿ ಸೌಗಂಧ್ ಹಾಗೂ ಕಲ್ಪ ಹೆಸರಿನ ತೆಂಗಿನ ಎಣ್ಣೆಯನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರುಗಳಾದ ನ.ಸೀತಾರಾಮ ಮತ್ತು ಹಾಗೂ ಗೋಪಾಲ ಚೆಟ್ಟಿಯಾರ್ ಉತ್ಪನ್ನವನ್ನು ಬಿಡುಗಡೆಗೊಳಿಸಿದರು.
ಉಪಾಧ್ಯಕ್ಷ ಶಂಕರನಾರಾಯಣ ಭಟ್ ಕೆ., ನಿರ್ದೇಶಕರಾದ ಎಸ್.ಆರ್.ಸತೀಶ್ಚಂದ್ರ, ದಯಾನಂದ ಹೆಗ್ಡೆ, ಕೃಷ್ಣಪ್ರಸಾದ್ ಮಡ್ತಿಲ,
ಶಂಭುಲಿಂಗ ಜಿ.ಹೆಗ್ಡೆ, ಕೆ.ಬಾಲಕೃಷ್ಣ ರೈ, ಜಯರಾಮ ಸರಳಾಯ, ಪದ್ಮರಾಜ್ ಪಟ್ಟಾಜೆ, ಎಂ.ಮಹೇಶ್ ಚೌಟ, ರಾಘವೇಂದ್ರ ಭಟ್, ಜಯಪ್ರಕಾಶ್ ನಾರಾಯಣ, ರಾಧಾಕೃಷ್ಣ, ಸತ್ಯನಾರಾಯಣ ಪ್ರಸಾದ್, ಸುರೇಶ್ ಕುಮಾರ್ ಶೆಟ್ಟಿ, ರಾಘವೇಂದ್ರ ಎಚ್.ಎಂ., ವ್ಯವಸ್ಥಾಪಕ ನಿರ್ದೇಶಕ ಕೃಷ್ಣಕುಮಾರ್ ಇದ್ದರು.
₹5 ಕೂಲಿಯಿಂದ ಆರಂಭಿಸಿದ ರೈತ ಈಗ ಆಕ್ಸ್‌ಫರ್ಡ್ AI ಸಮ್ಮೇಳನದ ವೇದಿಕೆಗೆ. ಪೌಲ್ಟ್ರಿ…
ಆಲಿಕಲ್ಲು ಮಳೆಯಂತಹ ತೀವ್ರ ಹವಾಮಾನದಿಂದ ಬೆಳೆ ರಕ್ಷಿಸಲು ಆಂಟಿ-ಹೈಲ್ ನೆಟ್ ಪ್ರಮುಖ ತಂತ್ರಜ್ಞಾನವಾಗಿ…
ದೇಶಾದ್ಯಂತ ಹವಾಮಾನದಲ್ಲಿ ತೀವ್ರ ಬದಲಾವಣೆ ಕಂಡುಬರುತ್ತಿದ್ದು, ಅನೇಕ ರಾಜ್ಯಗಳಲ್ಲಿ ಮಳೆ, ಗುಡುಗು ಹಾಗೂ…
ರಾಜ್ಯದಲ್ಲಿ ಸಧ್ಯಕ್ಕೆ ಮಳೆ ಕಡಿಮೆಯಾಗಿದ್ದು ಬಹುತೇಕ ಜಿಲ್ಲೆಗಳಲ್ಲಿ ಬಿಸಿಲು–ಮೋಡದ ವಾತಾವರಣ ಮುಂದುವರಿಯಲಿದೆ. ಇಂದು…
ಉತ್ತಮ ಗುಣಮಟ್ಟದ ಅಡಿಕೆಗಳಿಗೆ ₹530 ದರ ಸ್ಥಿರವಾಗಿದ್ದು ಹೊಸ ಅಡಿಕೆಗೆ ಸ್ಪಷ್ಟ ಬೇಡಿಕೆ…
ಹೊಸ ತಂತ್ರಜ್ಞಾನಗಳಿಂದ ಕಾಳುಮೆಣಸು ಕೃಷಿಯಲ್ಲಿ ಇಳುವರಿ ಮೂರು ಪಟ್ಟು ಹೆಚ್ಚಾಗುವ ಸಾಧ್ಯತೆ ಕಂಡುಬಂದಿದ್ದು,…