ಕ್ಯಾಂಪ್ಕೋ ಮಹಾಸಭೆ | ನಮ್ಮ ಹೆಮ್ಮೆಯ ಕ್ಯಾಂಪ್ಕೋ ಸಂಸ್ಥೆ |

September 25, 2022
11:20 AM
ಕ್ಯಾಂಪ್ಕೋ ಮಹಾಸಭೆಯಲ್ಲಿ ಭಾಗವಹಿಸಿದ ಕೃಷಿಕ, ಭಾರತೀಯ ಕಿಸಾನ್‌ ಸಂಘದ ಸುಳ್ಯ ತಾಲೂಕು ಕಾರ್ಯದರ್ಶಿ ಸಾಯಿಶೇಖರ್‌ ಅವರು ತಮ್ಮ ಅಭಿಪ್ರಾಯ ಹೀಗೆ ಹೇಳಿದ್ದಾರೆ…. 

ಕೃಷಿಕರ ಹೆಮ್ಮೆಯ ಸಂಸ್ಥೆ, ಕ್ಯಾಂಪ್ಕೋ ಮಹಾಸಭೆಯಲ್ಲಿ ಭಾಗವಹಿಸುವುದು  ಮಾತ್ರವಲ್ಲ ಸಭೆಯಲ್ಲಿ ತೊಡಗಿಸಿಕೊಳ್ಳುವುದು  ಹೆಮ್ಮೆಯ ಸಂಗತಿ. ಏಕೆಂದರೆ ಅದಿ ಕೃಷಿಕರ ಸಂಸ್ಥೆ. ರಚನಾತ್ಮಕವಾದ ಸಲಹೆ ನೀಡುತ್ತಾ ಸಂಸ್ಥೆಯನ್ನು ಇನ್ನಷ್ಟು ಗಟ್ಟಿ ಮಾಡುವುದು ನಮ್ಮ ಹೆಮ್ಮೆ. ಏಕೆಂದರೆ ಅದು ನಮ್ಮ ಸಂಸ್ಥೆ ಕ್ಯಾಂಪ್ಕೋ.

Advertisement
Advertisement

ಬೆಳಿಗ್ಗೆಯಿಂದ ಮಧ್ಯಾಹ್ನದ 11.3 0ರ ವರೆಗೂ ಕಾಫಿ, ಚಹಾ, ತಿಂಡಿಗಳ ಅಚ್ಚುಕಟ್ಟು ವ್ಯವಸ್ಥೆ ಮಾಡಿದ್ದರು. ಇಷ್ಟಾದರೂ ಮಧ್ಯಾಹ್ನ 2.00 ಗಂಟೆಗೆ ನಿರೀಕ್ಷೆಗೂ ಮೀರಿದ ಸದಸ್ಯರು ಬಂದಾಗ ಊಟ ಒಮ್ಮೆಗೆ ಖಾಲಿಯಾದಾಗ ನಾವು ಸಭೆಯಲ್ಲಿ ಈ ಬಗ್ಗೆಯೂ ಸದ್ದು ಮಾಡಿ ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಳ್ಳಲು ಮರೆಯಲಿಲ್ಲ. ಯಾಕೆಂದರೆ ಅದು ನಮ್ಮ ಕ್ಯಾಂಪ್ಕೊ.

ಒಂದುವರೆ ಸಾವಿರಕ್ಕಿಂತಲೂ ಹೆಚ್ಚು ಕಿಟ್ ವ್ಯವಸ್ಥೆ ಮಾಡಿದ್ದರೂ‌, ನಿರೀಕ್ಷೆಗೂ ಮೀರಿದ ಸದಸ್ಯರು ಬಂದಾಗ, ಅದು ಮುಗಿದಾಗ, ಹೈಎಂಡ್ ಕಾರುಗಳಲ್ಲಿ ಬಂದು ಪಾರ್ಕಿಂಗ್ ಗೂ ಜಾಗ ಇಲ್ಲದಷ್ಟು ಕಾರುಗಳು ತುಂಬಿದ್ದರೂ ಉಚಿತ ಉಡುಗೊರೆಗಾಗಿ ಸದ್ದು ಮಾಡಿ ಅಧ್ಯಕ್ಷ ರನ್ನು ತರಾಟೆಗೆ ತೆಗೆದುಕೊಳ್ಳಲು ಮರೆಯಲಿಲ್ಲ. ಯಾಕೆಂದರೆ ಅದು ನಮ್ಮ ಕ್ಯಾಂಪ್ಕೊ.

ಕೆಲವು ಗಂಭೀರ ವಿಚಾರಗಳು ಬಂದಾಗ ಮಹತ್ವದ ಸಲಹೆಗಳನ್ನೂ ಕೊಡಲು ನಾವು ಮರೆಯಲಿಲ್ಲ, ಪರಿಹಾರ ಕಾಣದೆ ಬಿಡಲು ಮನಸ್ಸಾಗಲಿಲ್ಲ, ಯಾಕೆಂದರೆ ಅದು ನಮ್ಮ ಕ್ಯಾಂಪ್ಕೊ.

ಅಡಿಕೆ ಹಳದಿ ಎಲೆರೋಗದ ವಿಷಯದಲ್ಲಿ ಬೆಳೆಗಾರರ ಪರವಾಗಿ ಸಂಶೋಧನೆಗೆ ಪೂರ್ವಭಾವಿಯಾಗಿ ನಿಯೋಗ ರಚಿಸಿ, ತಿಂಗಳೊಳಗಾಗಿ ನಿಯೋಗದ ಸಭೆ ಕರೆಯಲು ನಿರ್ಣಯ ಘೋಷಿಸಿದಾಗ ನಾವು ಅಧ್ಯಕ್ಷರಿಗೆ ಜೈಕಾರ ಹಾಕಲೂ ಮರೆಯಲಿಲ್ಲ. ಯಾಕೆಂದರೆ ಅದು ನಮ್ಮ ಕ್ಯಾಂಪ್ಕೊ.

Advertisement

ಕ್ಯಾಂಪ್ಕೋ ಏಕೆ ಹೆಚ್ಚು ಇಷ್ಟ ಎಂದರೆಮ ಅದು ನಮ್ಮ ಸಂಸ್ಥೆ. ಅದನ್ನು ಕಟ್ಟಿದ್ದು ಸುಮ್ಮನೆಯಲ್ಲ, ಬೆಳೆಗಾರರ ಹಿತಕ್ಕಾಗಿ. ಅಡಿಕೆಗೆ 3 ರೂಪಾಯಿ ಇದ್ದಾಗ ಅಖಿಲ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷರಾಗಿದ್ದ ವಾರಣಾಸಿ ಸುಬ್ರಾಯ ಭಟ್ಟರು ಅಲ್ಲಿಂದಲೇ ಆರಂಭ ಮಾಡಿದ ಹೋರಾಟದ ಫಲ ಅದು. ಅಡಿಕೆ ಬೆಳೆಗಾರರ ಸಂಘದ ಮೂಲಕ ಮನೆ ಮನೆಗೆ ಶೇರು ಸಂಗ್ರಹಕ್ಕೆ ಹೋದ ಶ್ರಮದ ಬೆವರು ಅದು. ಇಂದು ನಮ್ಮೆಲ್ಲರ ಹೆಮ್ಮೆಯ ಸಂಸ್ಥೆ ಅದು. ಹೀಗಾಗಿ ಕ್ಯಾಂಪ್ಕೋ ನಮ್ಮೆಲ್ಲರ ಸಂಸ್ಥೆ. ಇದು ನಮ್ಮ ಕ್ಯಾಂಪ್ಕೊ.

ಅಭಿಪ್ರಾಯ :
ಸಾಯಿಶೇಖರ್‌ ಕರಿಕರ

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಸಾಯಿಶೇಖರ್ ಕರಿಕಳ

ಕೃಷಿಕ, ಹವಾಮಾನ ಆಸಕ್ತ

ಇದನ್ನೂ ಓದಿ

ಕರೆಂಟ್ ಹೊದ ಕೂಡ್ಲೆ ಬೊಬ್ಬೆ ಹೊಡೆಯೋದು ಯಾಕೆ..!?
May 25, 2025
9:29 AM
by: ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ
ಮಳೆ Update | ಕರಾವಳಿ ಜಿಲ್ಲೆಯಲ್ಲಿ ವ್ಯಾಪಕ ಮಳೆ | ಹಲವು ಕಡೆ 100 ಮಿಮೀಗಿಂತಲೂ ಅಧಿಕ ಮಳೆ | ಉಡುಪಿಯಲ್ಲಿ 164 ಮಿಮೀ ಮಳೆ |
May 25, 2025
9:07 AM
by: ದ ರೂರಲ್ ಮಿರರ್.ಕಾಂ
ಬಿತ್ತನೆ ಬೀಜ ರಸಗೊಬ್ಬರ ಕಾಳಸಂತೆಯಲ್ಲಿ ಮಾರಾಟ ಮಾಡಿದರೆ ಕಠಿಣ ಕ್ರಮದ ಎಚ್ಚರಿಕೆ
May 25, 2025
6:13 AM
by: The Rural Mirror ಸುದ್ದಿಜಾಲ
ರೈತರು ಉತ್ತಮ ಇಳುವರಿ ಪಡೆಯಲು ಸಂಯುಕ್ತ ರಸಗೊಬ್ಬರ ಬಳಸುವಂತೆ ಕೃಷಿ ಇಲಾಖೆ ಸೂಚನೆ
May 25, 2025
6:05 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group