ಕೃಷಿಕರ ಹೆಮ್ಮೆಯ ಸಂಸ್ಥೆ, ಕ್ಯಾಂಪ್ಕೋ ಮಹಾಸಭೆಯಲ್ಲಿ ಭಾಗವಹಿಸುವುದು ಮಾತ್ರವಲ್ಲ ಸಭೆಯಲ್ಲಿ ತೊಡಗಿಸಿಕೊಳ್ಳುವುದು ಹೆಮ್ಮೆಯ ಸಂಗತಿ. ಏಕೆಂದರೆ ಅದಿ ಕೃಷಿಕರ ಸಂಸ್ಥೆ. ರಚನಾತ್ಮಕವಾದ ಸಲಹೆ ನೀಡುತ್ತಾ ಸಂಸ್ಥೆಯನ್ನು ಇನ್ನಷ್ಟು ಗಟ್ಟಿ ಮಾಡುವುದು ನಮ್ಮ ಹೆಮ್ಮೆ. ಏಕೆಂದರೆ ಅದು ನಮ್ಮ ಸಂಸ್ಥೆ ಕ್ಯಾಂಪ್ಕೋ.
ಬೆಳಿಗ್ಗೆಯಿಂದ ಮಧ್ಯಾಹ್ನದ 11.3 0ರ ವರೆಗೂ ಕಾಫಿ, ಚಹಾ, ತಿಂಡಿಗಳ ಅಚ್ಚುಕಟ್ಟು ವ್ಯವಸ್ಥೆ ಮಾಡಿದ್ದರು. ಇಷ್ಟಾದರೂ ಮಧ್ಯಾಹ್ನ 2.00 ಗಂಟೆಗೆ ನಿರೀಕ್ಷೆಗೂ ಮೀರಿದ ಸದಸ್ಯರು ಬಂದಾಗ ಊಟ ಒಮ್ಮೆಗೆ ಖಾಲಿಯಾದಾಗ ನಾವು ಸಭೆಯಲ್ಲಿ ಈ ಬಗ್ಗೆಯೂ ಸದ್ದು ಮಾಡಿ ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಳ್ಳಲು ಮರೆಯಲಿಲ್ಲ. ಯಾಕೆಂದರೆ ಅದು ನಮ್ಮ ಕ್ಯಾಂಪ್ಕೊ.
ಒಂದುವರೆ ಸಾವಿರಕ್ಕಿಂತಲೂ ಹೆಚ್ಚು ಕಿಟ್ ವ್ಯವಸ್ಥೆ ಮಾಡಿದ್ದರೂ, ನಿರೀಕ್ಷೆಗೂ ಮೀರಿದ ಸದಸ್ಯರು ಬಂದಾಗ, ಅದು ಮುಗಿದಾಗ, ಹೈಎಂಡ್ ಕಾರುಗಳಲ್ಲಿ ಬಂದು ಪಾರ್ಕಿಂಗ್ ಗೂ ಜಾಗ ಇಲ್ಲದಷ್ಟು ಕಾರುಗಳು ತುಂಬಿದ್ದರೂ ಉಚಿತ ಉಡುಗೊರೆಗಾಗಿ ಸದ್ದು ಮಾಡಿ ಅಧ್ಯಕ್ಷ ರನ್ನು ತರಾಟೆಗೆ ತೆಗೆದುಕೊಳ್ಳಲು ಮರೆಯಲಿಲ್ಲ. ಯಾಕೆಂದರೆ ಅದು ನಮ್ಮ ಕ್ಯಾಂಪ್ಕೊ.
ಕೆಲವು ಗಂಭೀರ ವಿಚಾರಗಳು ಬಂದಾಗ ಮಹತ್ವದ ಸಲಹೆಗಳನ್ನೂ ಕೊಡಲು ನಾವು ಮರೆಯಲಿಲ್ಲ, ಪರಿಹಾರ ಕಾಣದೆ ಬಿಡಲು ಮನಸ್ಸಾಗಲಿಲ್ಲ, ಯಾಕೆಂದರೆ ಅದು ನಮ್ಮ ಕ್ಯಾಂಪ್ಕೊ.
ಅಡಿಕೆ ಹಳದಿ ಎಲೆರೋಗದ ವಿಷಯದಲ್ಲಿ ಬೆಳೆಗಾರರ ಪರವಾಗಿ ಸಂಶೋಧನೆಗೆ ಪೂರ್ವಭಾವಿಯಾಗಿ ನಿಯೋಗ ರಚಿಸಿ, ತಿಂಗಳೊಳಗಾಗಿ ನಿಯೋಗದ ಸಭೆ ಕರೆಯಲು ನಿರ್ಣಯ ಘೋಷಿಸಿದಾಗ ನಾವು ಅಧ್ಯಕ್ಷರಿಗೆ ಜೈಕಾರ ಹಾಕಲೂ ಮರೆಯಲಿಲ್ಲ. ಯಾಕೆಂದರೆ ಅದು ನಮ್ಮ ಕ್ಯಾಂಪ್ಕೊ.
ಕ್ಯಾಂಪ್ಕೋ ಏಕೆ ಹೆಚ್ಚು ಇಷ್ಟ ಎಂದರೆಮ ಅದು ನಮ್ಮ ಸಂಸ್ಥೆ. ಅದನ್ನು ಕಟ್ಟಿದ್ದು ಸುಮ್ಮನೆಯಲ್ಲ, ಬೆಳೆಗಾರರ ಹಿತಕ್ಕಾಗಿ. ಅಡಿಕೆಗೆ 3 ರೂಪಾಯಿ ಇದ್ದಾಗ ಅಖಿಲ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷರಾಗಿದ್ದ ವಾರಣಾಸಿ ಸುಬ್ರಾಯ ಭಟ್ಟರು ಅಲ್ಲಿಂದಲೇ ಆರಂಭ ಮಾಡಿದ ಹೋರಾಟದ ಫಲ ಅದು. ಅಡಿಕೆ ಬೆಳೆಗಾರರ ಸಂಘದ ಮೂಲಕ ಮನೆ ಮನೆಗೆ ಶೇರು ಸಂಗ್ರಹಕ್ಕೆ ಹೋದ ಶ್ರಮದ ಬೆವರು ಅದು. ಇಂದು ನಮ್ಮೆಲ್ಲರ ಹೆಮ್ಮೆಯ ಸಂಸ್ಥೆ ಅದು. ಹೀಗಾಗಿ ಕ್ಯಾಂಪ್ಕೋ ನಮ್ಮೆಲ್ಲರ ಸಂಸ್ಥೆ. ಇದು ನಮ್ಮ ಕ್ಯಾಂಪ್ಕೊ.
ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಹಾಲಗುಂಡಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಲಕ್ಕುಂಡಿ ಪಾರಂಪರಿಕ…
ಬೆಂಗಳೂರಿನ ಬಸವನ ಗುಡಿಯಲ್ಲಿ ಐತಿಹಾಸಿಕ ಕಡಲೆಕಾಯಿ ಪರಿಷೆ ಸೊಬಗು ಕಳೆಗಟ್ಟಿದೆ. ಇಂದು ಕಡಲೆಕಾಯಿ…
ಚಿಕ್ಕಮಗಳೂರು ಜಿಲ್ಲೆಯಲ್ಲಿ ಆನೆಗಳ ಹಾವಳಿ ತಡೆಯಲು ಸರ್ಕಾರದ ಸಚಿವರು ಹಾಗೂ ಅರಣ್ಯ ಇಲಾಖೆ…
ಅಡಿಕೆ ಹಳದಿ ಎಲೆರೋಗ ಬಾಧಿಸಿದ ತೋಟದ ಕೃಷಿಕ ಶಂಕರಪ್ರಸಾದ್ ರೈ ಅವರು ಕೃಷಿ…
ಅಡಿಕೆ ಕೃಷಿಯ ಜೊತೆಗೆ ಮಿಶ್ರ ಕೃಷಿಯನ್ನು ಏಕೆ ಮಾಡಬೇಕು..? ಯಾವ ಕೃಷಿಯನ್ನು ಮಾಡಬಹುದು..?…
25.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…