ರಬ್ಬರ್‌ ಬೆಳೆಗಾರರನ್ನು ಸಂಕಷ್ಟದಿಂದ ಪಾರು ಮಾಡಲು ಮುಖ್ಯಮಂತ್ರಿಗಳಿಗೆ ಕ್ಯಾಂಪ್ಕೋ ಮನವಿ |

September 18, 2023
6:50 PM
ರಾಜ್ಯದಲ್ಲಿ ರಬ್ಬರ್‌ ಬೆಳೆಗಾರರು ದರ ಇಳಿಕೆಯ ಕಾರಣದಿಂದ ಸಂಕಷ್ಟದಲ್ಲಿದ್ದು, ಕೇರಳ ಮಾದರಿಯಲ್ಲಿ ಕರ್ನಾಟಕ ಸರಕಾರವು ಬೆಂಬಲ ಬೆಲೆ ಅನುಷ್ಠಾನಕ್ಕೆ ತರಬೇಕು ಎಂದು ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್‌ ಕುಮಾರ್‌ ಕೊಡ್ಗಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.

ರಬ್ಬರ್‌ ದರ ಕುಸಿತವಾಗಿದ್ದು ರಾಜ್ಯದ ರಬ್ಬರ್‌ ಬೆಳೆಗಾರರನ್ನು ರಕ್ಷಿಸಲು ಬೆಂಬಲ ಬೆಲೆ ಘೋಷಣೆ ಮಾಡುವ ಮೂಲಕ ಬೆಳೆಗಾರರನ್ನು ರಕ್ಷಣೆ ಮಾಡಬೇಕು ಎಂದು ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್‌ ಕುಮಾರ್‌ ಕೊಡ್ಗಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.

ಅಡಿಕೆ ಬೆಳೆಗಾರರನ್ನು ಸಂಕಷ್ಟದಿಂದ ಕಾಪಾಡುವ ಸಲುವಾಗಿ 1973 ರಲ್ಲಿ  ಸುಬ್ರಾಯ ಭಟ್ಟರಿಂದ ಸ್ಥಾಪಿತವಾದ
ಬಹುರಾಜ್ಯ ಸಹಕಾರಿ ಸಂಸ್ಥೆಯಾದ ಕ್ಯಾಂಪ್ಕೊ ರೈ ತರ ಹಿತ ಕಾಪಾಡಲು ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ.ಕರ್ನಾಟಕ
ಮತ್ತು ಕೇರಳ ಸರಕಾರದ ನಿರ್ದೇ ಶನದಂತೆ 1979ರಲ್ಲಿ ಕೊಕ್ಕೊ ಖರೀ ದಿಯನ್ನು ಪ್ರಾರಂಭಿಸಿ, ರೈ ತರ ಉತ್ಪನ್ನಗಳಿಗೆ ಸ್ಥಿರ ಧಾರಣೆ
ಸಿಗಲು ಶ್ರಮವಹಿಸುತ್ತಿದೆ. ಸಮಗ್ರ ಕೃಷಿ ಮತ್ತು ಮಿಶ್ರ ಬೆಳೆ ಕೃಷಿಗೆ ಉತ್ತೇಜನ ನೀ ಡಿ ರೈ ತರಿಗೆ ಆರ್ಥಿಕ ಶಕ್ತಿ ತುಂಬಲು 2010
ಹಾಗೂ 2016 ರಲ್ಲಿ ಕ್ಯಾಂಪ್ಕೊ , ರಬ್ಬರ್ ಮತ್ತು ಕರಿಮೆಣಸಿನ ಖರೀದಿಯನ್ನು ಪ್ರಾರಂಭಿಸಿದೆ.

ಈಗ ಸುಮಾರು 60,000 ರಬ್ಬರ್ ಬೆಳೆಗಾರರಿದ್ದು , 55,000 ಹೆಕ್ಟೇರ್ ಪ್ರದೇಶದಲ್ಲಿ ಸುಮಾರು 40,000 ಮೆ.ಟನ್ ನಷ್ಟು
ನೈಸರ್ಗಿಕ ರಬ್ಬರ್ ಬೆಳೆಸುತ್ತಿದ್ದು,  ಸುಮಾರು 60000 ಮೆ.ಟನ್  ಬೇಡಿಕೆ ಇರುವುದಾಗಿ ಅಂದಾಜಿಸಲಾಗಿದೆ. ಪ್ರಾರಂಭದಲ್ಲಿ
ಉತ್ತೇಜನಕಾರಿಯಾಗಿದ್ದ ರಬ್ಬರ್ ಧಾರಣೆ ನಂತರ ಕುಸಿಯಲು ಪ್ರಾರಂಭವಾಗಿ ನಿರಂತರ ಕುಸಿತದ ಹಾದಿ ಹಿಡಿದಿದೆ.  ಕರ್ನಾಟಕದಲ್ಲಿ ದಕ್ಷಿಣ ಕನ್ನಡ,ಉತ್ತರ ಕನ್ನಡ,ಕೊಡಗು,ಶಿವಮೊಗ್ಗ,ಚಿಕ್ಕಮಂಗಳೂರು,ಹಾಸನ ಮತ್ತು ಮೈಸೂರು
ಜಿಲ್ಲೆಗಳಲ್ಲಿ ಪ್ರಮುಖವಾಗಿ ರಬ್ಬರನ್ನ ಬೆಳೆಸಲಾಗುತ್ತಿದೆ. 2011 ರಲ್ಲಿ 242 ರೂಪಾಯಿ ಇದ್ದ ನೈ ಸರ್ಗಿಕ ರಬ್ಬರ್ ಬೆಲೆ ಸದ್ಯ 140
ರೂಪಾಯಿಯ ಆಸುಪಾಸಿನಲ್ಲಿದ್ದು ಉತ್ಪಾದನಾ ವೆಚ್ಚಕ್ಕಿಂತಲೂ ಕಡಿಮೆಯಾಗಿದೆ. ನಿರಂತರ ದರ ಕುಸಿತದಿಂದ ರೈತರ ಜೀವನಲ್ಲಿ ಅಭದ್ರತೆ ಕಾಡುತ್ತಿದೆ.

ಕೇರಳದಲ್ಲಿಯೂ ಕೂಡ ರಬ್ಬರ್ ಬೆಳೆಗಾರರು ಸಂಕಷ್ಟಗಳನ್ನು ಅನುಭವಿಸುತ್ತಿದ್ದು,ಅಲ್ಲಿನ ಸರಕಾರ ಬೆಳೆಗಾರರನ್ನು ರಕ್ಷಿಸಲು
ರಬ್ಬರ್ ಉತ್ಪಾದನಾ ಪ್ರೋತ್ಸಾಹ ಯೋ ಜನೆ ಜಾರಿಗೆ ತಂದಿದೆ.ಈ ಯೋಜನೆಯ ಮೂಲಕ ರಬ್ಬರ್ ನ  ವೈ ವಿದ್ಯತೆಗೆ 170 ರೂಪಾಯಿ ಕನಿಷ್ಟ ಬೆಲೆಯನ್ನು ನಿಗದಿಪಡಿಸಿದೆ.ಮಾರುಕಟ್ಟೆಯ ದೈನಂದಿನ ಖರೀದಿ ದರ ಮತ್ತು ಸರಕಾರ ನಿಗದಿಪಡಿಸಿದ ದರ  ವ್ಯತ್ಯಾ ಸದ ಮೊತ್ತವನ್ನು ನೇ ರವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತಿದೆ.ಈ ಸೌಲಭ್ಯ ಪಡೆಯಲು ರೈತರು ರಬ್ಬರ್ ಸೊಸೈಟಿ ಅಥವಾ ರಬ್ಬರ್ ಬೋರ್ಡ್ ನ ಅಧಿಕಾರಿ ಪ್ರಾಮಾಣೀಕರಿಸಿದ ಖರೀದಿ ರಶೀದಿಯನ್ನು ಒದಗಿಸಬೇ ಕಾಗುತ್ತದೆ. ಅಲ್ಲಿನ ಸರಕಾರದ ಈ ಯೋಜನೆ ರಬ್ಬರ್ ಧಾರಣೆಯ ಉತ್ತೇಜನಕ್ಕೆ ಪ್ರೇರಣೆ ನೀ ಡಲಿದೆ.ಇದೇ ರೀ ತಿಯ ಯೋಜನೆಯನ್ನು ಕರ್ನಾಟಕದಲ್ಲೂ ಅನುಷ್ಠಾನಕ್ಕೆ ತರಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 16-12-2025 | ಮೋಡ ಮಾತ್ರವೇ ಮಳೆ ಇದೆಯೇ…? | ಮುಂದೆ ಚಳಿಯ ಪ್ರಭಾವ ಹೇಗಿರಬಹುದು..?
December 16, 2025
1:47 PM
by: ಸಾಯಿಶೇಖರ್ ಕರಿಕಳ
ಕೂದಲಿಗೆ ಬಳಸುವ ಎಣ್ಣೆಯ ಪ್ರಯೋಜನ
December 16, 2025
7:22 AM
by: ರೂರಲ್‌ ಮಿರರ್ ಸುದ್ದಿಜಾಲ
ಚಳಿಗಾಲದಲ್ಲಿ ಹೃದಯದ ಕಾಳಜಿಯ ಬಗ್ಗೆ ನಿರ್ಲಕ್ಷ್ಯ ಬೇಡ- ಎಚ್ಚರಿಕೆ ಇರಲಿ
December 16, 2025
7:20 AM
by: ರೂರಲ್‌ ಮಿರರ್ ಸುದ್ದಿಜಾಲ
ಮಹಿಳೆಯರಿಗಾಗಿ ಉಚಿತ ಆರಿ ವರ್ಕ್ಸ್ ತರಬೇತಿ
December 16, 2025
7:17 AM
by: ರೂರಲ್‌ ಮಿರರ್ ಸುದ್ದಿಜಾಲ

You cannot copy content of this page - Copyright -The Rural Mirror