ರಬ್ಬರ್ ದರ ಕುಸಿತವಾಗಿದ್ದು ರಾಜ್ಯದ ರಬ್ಬರ್ ಬೆಳೆಗಾರರನ್ನು ರಕ್ಷಿಸಲು ಬೆಂಬಲ ಬೆಲೆ ಘೋಷಣೆ ಮಾಡುವ ಮೂಲಕ ಬೆಳೆಗಾರರನ್ನು ರಕ್ಷಣೆ ಮಾಡಬೇಕು ಎಂದು ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
ಅಡಿಕೆ ಬೆಳೆಗಾರರನ್ನು ಸಂಕಷ್ಟದಿಂದ ಕಾಪಾಡುವ ಸಲುವಾಗಿ 1973 ರಲ್ಲಿ ಸುಬ್ರಾಯ ಭಟ್ಟರಿಂದ ಸ್ಥಾಪಿತವಾದ
ಬಹುರಾಜ್ಯ ಸಹಕಾರಿ ಸಂಸ್ಥೆಯಾದ ಕ್ಯಾಂಪ್ಕೊ ರೈ ತರ ಹಿತ ಕಾಪಾಡಲು ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ.ಕರ್ನಾಟಕ
ಮತ್ತು ಕೇರಳ ಸರಕಾರದ ನಿರ್ದೇ ಶನದಂತೆ 1979ರಲ್ಲಿ ಕೊಕ್ಕೊ ಖರೀ ದಿಯನ್ನು ಪ್ರಾರಂಭಿಸಿ, ರೈ ತರ ಉತ್ಪನ್ನಗಳಿಗೆ ಸ್ಥಿರ ಧಾರಣೆ
ಸಿಗಲು ಶ್ರಮವಹಿಸುತ್ತಿದೆ. ಸಮಗ್ರ ಕೃಷಿ ಮತ್ತು ಮಿಶ್ರ ಬೆಳೆ ಕೃಷಿಗೆ ಉತ್ತೇಜನ ನೀ ಡಿ ರೈ ತರಿಗೆ ಆರ್ಥಿಕ ಶಕ್ತಿ ತುಂಬಲು 2010
ಹಾಗೂ 2016 ರಲ್ಲಿ ಕ್ಯಾಂಪ್ಕೊ , ರಬ್ಬರ್ ಮತ್ತು ಕರಿಮೆಣಸಿನ ಖರೀದಿಯನ್ನು ಪ್ರಾರಂಭಿಸಿದೆ.
ಈಗ ಸುಮಾರು 60,000 ರಬ್ಬರ್ ಬೆಳೆಗಾರರಿದ್ದು , 55,000 ಹೆಕ್ಟೇರ್ ಪ್ರದೇಶದಲ್ಲಿ ಸುಮಾರು 40,000 ಮೆ.ಟನ್ ನಷ್ಟು
ನೈಸರ್ಗಿಕ ರಬ್ಬರ್ ಬೆಳೆಸುತ್ತಿದ್ದು, ಸುಮಾರು 60000 ಮೆ.ಟನ್ ಬೇಡಿಕೆ ಇರುವುದಾಗಿ ಅಂದಾಜಿಸಲಾಗಿದೆ. ಪ್ರಾರಂಭದಲ್ಲಿ
ಉತ್ತೇಜನಕಾರಿಯಾಗಿದ್ದ ರಬ್ಬರ್ ಧಾರಣೆ ನಂತರ ಕುಸಿಯಲು ಪ್ರಾರಂಭವಾಗಿ ನಿರಂತರ ಕುಸಿತದ ಹಾದಿ ಹಿಡಿದಿದೆ. ಕರ್ನಾಟಕದಲ್ಲಿ ದಕ್ಷಿಣ ಕನ್ನಡ,ಉತ್ತರ ಕನ್ನಡ,ಕೊಡಗು,ಶಿವಮೊಗ್ಗ,ಚಿಕ್ಕಮಂಗಳೂರು,ಹಾಸನ ಮತ್ತು ಮೈಸೂರು
ಜಿಲ್ಲೆಗಳಲ್ಲಿ ಪ್ರಮುಖವಾಗಿ ರಬ್ಬರನ್ನ ಬೆಳೆಸಲಾಗುತ್ತಿದೆ. 2011 ರಲ್ಲಿ 242 ರೂಪಾಯಿ ಇದ್ದ ನೈ ಸರ್ಗಿಕ ರಬ್ಬರ್ ಬೆಲೆ ಸದ್ಯ 140
ರೂಪಾಯಿಯ ಆಸುಪಾಸಿನಲ್ಲಿದ್ದು ಉತ್ಪಾದನಾ ವೆಚ್ಚಕ್ಕಿಂತಲೂ ಕಡಿಮೆಯಾಗಿದೆ. ನಿರಂತರ ದರ ಕುಸಿತದಿಂದ ರೈತರ ಜೀವನಲ್ಲಿ ಅಭದ್ರತೆ ಕಾಡುತ್ತಿದೆ.
ಕೇರಳದಲ್ಲಿಯೂ ಕೂಡ ರಬ್ಬರ್ ಬೆಳೆಗಾರರು ಸಂಕಷ್ಟಗಳನ್ನು ಅನುಭವಿಸುತ್ತಿದ್ದು,ಅಲ್ಲಿನ ಸರಕಾರ ಬೆಳೆಗಾರರನ್ನು ರಕ್ಷಿಸಲು
ರಬ್ಬರ್ ಉತ್ಪಾದನಾ ಪ್ರೋತ್ಸಾಹ ಯೋ ಜನೆ ಜಾರಿಗೆ ತಂದಿದೆ.ಈ ಯೋಜನೆಯ ಮೂಲಕ ರಬ್ಬರ್ ನ ವೈ ವಿದ್ಯತೆಗೆ 170 ರೂಪಾಯಿ ಕನಿಷ್ಟ ಬೆಲೆಯನ್ನು ನಿಗದಿಪಡಿಸಿದೆ.ಮಾರುಕಟ್ಟೆಯ ದೈನಂದಿನ ಖರೀದಿ ದರ ಮತ್ತು ಸರಕಾರ ನಿಗದಿಪಡಿಸಿದ ದರ ವ್ಯತ್ಯಾ ಸದ ಮೊತ್ತವನ್ನು ನೇ ರವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತಿದೆ.ಈ ಸೌಲಭ್ಯ ಪಡೆಯಲು ರೈತರು ರಬ್ಬರ್ ಸೊಸೈಟಿ ಅಥವಾ ರಬ್ಬರ್ ಬೋರ್ಡ್ ನ ಅಧಿಕಾರಿ ಪ್ರಾಮಾಣೀಕರಿಸಿದ ಖರೀದಿ ರಶೀದಿಯನ್ನು ಒದಗಿಸಬೇ ಕಾಗುತ್ತದೆ. ಅಲ್ಲಿನ ಸರಕಾರದ ಈ ಯೋಜನೆ ರಬ್ಬರ್ ಧಾರಣೆಯ ಉತ್ತೇಜನಕ್ಕೆ ಪ್ರೇರಣೆ ನೀ ಡಲಿದೆ.ಇದೇ ರೀ ತಿಯ ಯೋಜನೆಯನ್ನು ಕರ್ನಾಟಕದಲ್ಲೂ ಅನುಷ್ಠಾನಕ್ಕೆ ತರಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…
ರಾಜ್ಯದಲ್ಲಿ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯಲಾಗುತ್ತಿದೆ. ಈ…
ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಗೆ 200…
ಗ್ರಾಹಕರಿಗೆ ಗುಣಮಟ್ಟದ ಜೇನುತುಪ್ಪ ದೊರಕುವಂತೆ ಮಾಡಲು ಹಾಗೂ ಜೇನು ಕೃಷಿಕರ ಆರ್ಥಿಕ ಮಟ್ಟ…