ಅಡಿಕೆಯ ಅಕ್ರಮ ಆಮದು ತಡೆಯಲು ತುರ್ತುಕ್ರಮಕ್ಕೆ ಪ್ರಧಾನ ಮಂತ್ರಿಯವರಿಗೆ ಕ್ಯಾಂಪ್ಕೊ ಮನವಿ

February 23, 2024
9:51 PM
ಅಡಿಕೆ ಆಮದು ತಡೆಗೆ ಪ್ರಧಾನಮಂತ್ರಿಗಳು ಮಧ್ಯಪ್ರವೇಶ ಮಾಡಬೇಕು ಎಂದು ಕ್ಯಾಂಪ್ಕೋ ಮನವಿ ಮಾಡಿದೆ. ಪ್ರಧಾನ ಮಂತ್ರಿಯವರ ಮಧ್ಯಪ್ರವೇಶ ರೈತರ ಜೀವನವನ್ನು ಹಸನಾಗಿಸುವುದಲ್ಲದೇ, ನೆಲಕಚ್ಚಿರುವ ಮಾರುಕಟ್ಟೆಯನ್ನು ಚೇತರಿಸಲು ಸಾಧ್ಯ ಎಂಬ ಆಶಾಭಾವನೆಯನ್ನು ವ್ಯಕ್ತಪಡಿಸಿದೆ.

ಇತ್ತೀಚಿನ ದಿನಗಳಲ್ಲಿ ವಿದೇಶಿ ಅಡಿಕೆ ಅಕ್ರಮವಾಗಿ ದೇಶದೊಳಕ್ಕೆ ಬರುತ್ತಿದ್ದು ದೇಶೀ ಅಡಿಕೆಯ ಮಾರುಕಟ್ಟೆಗೆ ತೀವ್ರ ಹೊಡೆತನೀಡುತ್ತಿದೆ ಮತ್ತು ವಶಪಡಿಸಿಕೊಂಡ ಅಕ್ರಮ ಆಮದು ಅಡಿಕೆಯು ಕಡಿಮೆ ದರದಲ್ಲಿ ಹರಾಜು ಮೂಲಕ ಮಾರುಕಟ್ಟೆಗೆ ಬಿಡುಗಡೆಯಾಗಿ ದೇಶದ ಅಡಿಕೆ ಮಾರುಕಟ್ಟೆಯನ್ನು ನಾಶಗೊಳಿಸುತ್ತಿರುವ ಬಗ್ಗೆ ಕ್ಯಾಂಪ್ಕೋ ತೀವ್ರ ಕಳವಳ ವ್ಯಕ್ತಪಡಿಸಿದೆ.

ಕ್ಯಾಂಪ್ಕೋ ನಿರಂತರ ಪ್ರಯತ್ನದಿಂದ ಕೇಂದ್ರ ಸರಕಾರ ಇತ್ತೀಚಿಗೆ ಕನಿಷ್ಠ ಆಮದು ಬೆಲೆಯನ್ನು ಕಿಲೋ ಗೇ 351 ರೂಪಾಯಿ ನಿಗದಿಪಡಿಸಿತ್ತು. ಆದರೆ ಅಕ್ರಮ ಅಮದು ಅಡಿಕೆಯನ್ನು ವಶಪಡಿಸಿಕೊಂಡ ಕಷ್ಟಮ್ಸ್, DRI ಅಥವಾ ಸಂಬಂಧ ಪಟ್ಟ ಇತರ ಇಲಾಖೆಯ ಅಧಿಕಾರಿಗಳು ನಡೆಸುವ ಹರಾಜಿನಲ್ಲಿ ಕನಿಷ್ಠ ಆಮದು ಬೆಲೆಗಿಂತ ಕಡಿಮೆ ಬೆಲೆಯಲ್ಲಿ ವರ್ತಕರು ಖರೀದಿ ಮಾಡಿ ಮಾರುಕಟ್ಟೆಗೆ ಬಿಡುಗಡೆ ಮಾಡುವುದರಿಂದ ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸಿದೆ.

ಇಂಡೋನೇಷ್ಯಾ, ಬರ್ಮಾ ಮುಂತಾದ ದೇಶಗಳಿಂದ ಆಮದು ಆಗುವ ಅಡಿಕೆಯ ಗುಣಮಟ್ಟ ತುಂಬಾ ಕಳಪೆ. ಇವು FSSAI ನಿಗದಿಪಡಿಸಿದ ಮಾನದಂಡಗಳನ್ನು ಪೂರೈಸುವುದಿಲ್ಲ ಮತ್ತು ಮನುಷ್ಯನ ಉಪಯೋಗಕ್ಕೆ ಯೋಗ್ಯವಾಗಿರುವುದಿಲ್ಲ. ಆದುದರಿಂದ ವಶಪಡಿಸಿಕೊಂಡ ಅಡಿಕೆಯ ಗುಣಮಟ್ಟದ ಪರೀಕ್ಷೆಯನ್ನು ಮಾನ್ಯತೆ ಪಡೆದ ಪ್ರಯೋಗಾಲಯದಲ್ಲಿ ಕಟ್ಟುನಿಟ್ಟಾಗಿ ನಡೆಸಬೇಕೆಂದು ಕ್ಯಾಂಪ್ಕೊ ಪ್ರಧಾನಮಂತ್ರಿಯವರನ್ನು ಆಗ್ರಹಿಸಿದೆ.

ಅಕ್ರಮ ಆಮದು ಅಡಿಕೆ ದೇಶೀ ಮಾರುಕಟ್ಟೆಗೆ ತೀವ್ರರೀತಿಯಲ್ಲಿ ಕೆಟ್ಟಪರಿಣಾಮ ನೀಡುವುದರ ಬಗ್ಗೆ ಕ್ಯಾಂಪ್ಕೊ ಅಧ್ಯಕ್ಷರು ಪ್ರಧಾನಮಂತ್ರಿಯವರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.ಕರ್ನಾಟಕದ 31 ಜಿಲ್ಲೆಗಳ ಪೈಕಿ 17 ಜಿಲ್ಲೆಗಳ ರೈತರು ಜೀವನಾಧರವಾಗಿ ಅಡಿಕೆಯನ್ನೇ ಅವಲಂಭಿಸಿದೆ. ವಿದೇಶಿ ಅಡಿಕೆಯ ಒಳಹರಿವು ಈ ಭಾಗದ ರೈತರ ಜೀವನವನ್ನೇ ನರಕ ಸದೃಶಗೊಳಿಸಿದೆ.

ಪ್ರಧಾನ ಮಂತ್ರಿಯವರ ಮಧ್ಯಪ್ರವೇಶ ರೈತರ ಜೀವನವನ್ನು ಹಸನಾಗಿಸುವುದಲ್ಲದೇ, ನೆಲಕಚ್ಚಿರುವ ಮಾರುಕಟ್ಟೆಯನ್ನು ಚೇತರಿಸಲು ಸಾಧ್ಯ ಎಂಬ ಆಶಾಭಾವನೆಯನ್ನು ಕ್ಯಾಂಪ್ಕೋ ವ್ಯಕ್ತಪಡಿಸಿದೆ.

Campco requested to the Prime Minister to intervene to stop the import of Arecanut. It expressed hope that the Prime Minister’s intervention would not only improve the lives of farmers but also revive the battered market.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 12-03-2026 | ಮಾರ್ಚ್‌ 14–15 ರಿಂದ ಗುಡುಗು ಸಹಿತ ಮಳೆ ಸಾಧ್ಯತೆ
March 12, 2026
11:48 AM
by: ಸಾಯಿಶೇಖರ್ ಕರಿಕಳ
ಗ್ಯಾಸ್‌ ಸರಬರಾಜು ಆತಂಕ : ಹೋಟೆಲ್‌ ಉದ್ಯಮಕ್ಕೆ ಹೊಡೆತ, ಗೃಹ ಬಳಕೆದಾರರಿಗೆ ಆದ್ಯತೆ
March 12, 2026
11:36 AM
by: ಮಿರರ್‌ ಡೆಸ್ಕ್
ದೇಶೀಯ ಗ್ರಾಹಕರಿಗೆ ಇಂಧನ ಕೊರತೆ ಇಲ್ಲ: CNG – PNG ಪೂರೈಕೆ ನಿರಂತರ – ಸಚಿವ ಹರ್ದೀಪ್ ಸಿಂಗ್ ಪುರಿ
March 12, 2026
7:20 AM
by: ಮಿರರ್‌ ಡೆಸ್ಕ್
ಪೆಟ್ರೋಲಿಯಂಗೆ ಪರ್ಯಾಯದತ್ತ : ಕೃಷಿ ಸಂಪನ್ಮೂಲಗಳಿಂದ ಬಯೋ ಉತ್ಪನ್ನಗಳತ್ತ ಆದ್ಯತೆ
March 12, 2026
7:16 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror