Advertisement
ಕೃಷಿ

ಕ್ಯಾಂಪ್ಕೋ ಪ್ರಕಟಣೆ | ದೋಟಿ ಕೊಯ್ಲು ತರಬೇತಿಗೆ ಅರ್ಜಿ ಆಹ್ವಾನ

Share

ಅಡಿಕೆ ಕೃಷಿಕ ಸಮುದಾಯದ ಸಮಸ್ಯೆ ಪರಿಹರಿಸಲು ಮಂಗಳೂರಿನ ಕ್ಯಾಂಪ್ಕೋ ಸಂಸ್ಥೆ ದೋಟಿಯ ಮೂಲಕ ಅಡಿಕೆ ಕೊಯ್ಲು ತರಬೇತಿ ನೀಡಲು ನಿರ್ಧರಿಸಿದೆ. ಈ ಕಾರ್ಯಕ್ರಮ ಅಡಿಕೆ ಪತ್ರಿಕೆ ಹಾಗೂ ವಿಟ್ಲದ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆ ಸಹಭಾಗಿತ್ವದಲ್ಲಿ ನಡೆಯಲಿದೆ. ತರಬೇತಿ ಜನವರಿ ತಿಂಗಳ 10 ರಿಂದ 12 ರ ವರೆಗೆ ಮೂರು ದಿನ ವಿಟ್ಲ ಸಿಪಿಸಿಆರ್ ಐಯಲ್ಲಿ ನಡೆಯಲಿದೆ.

ದಕ್ಷಿಣಕನ್ನಡ ಮತ್ತುಕಾಸರಗೋಡು ಜಿಲ್ಲೆಯ 18ರಿಂದ 35 ವರ್ಷದ ಒಳಗಿನ ಯುವಕರು ತರಬೇತಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಫಾರಂಗಳನ್ನು ಕ್ಯಾಂಪ್ಕೋ  ಶಾಖೆಗಳಿಂದ ಪಡೆಯಬಹುದು. ಇದೇ ಫಾರ್ಮಿನ ಮಾದರಿಗಳನ್ನು ಹಲವು ವಾಟ್ಸಪ್ ಗುಂಪುಗಳಲ್ಲಿ ಬಿಡುಗಡೆ ಮಾಡಲಾಗಿದ್ದು, ಅದನ್ನೇ ಮುದ್ರಿಸಿ ಬಳಸಲೂಬಹುದು. ಅರ್ಜಿಯ ಜೊತೆಗೆಇತ್ತೀಚೆಗಿನ ಎರಡು ಭಾವಚಿತ್ರ, ಆಧಾರ್ ಮತ್ತು ಪಾನ್‍ ಕಾರ್ಡಿನ ಜೆರಾಕ್ಸ್ ಪ್ರತಿಗಳನ್ನು ಲಗತ್ತಿಸಬೇಕು. ತುಂಬಿಸಿದ ಅರ್ಜಿ ಫಾರ್ಮನ್ನು ಕ್ಯಾಂಪ್ಕೋದ ಯಾವುದೇ ಶಾಖೆಯಲ್ಲಿ ಸಲ್ಲಿಸಬಹುದು.

ಅನುಭವಿ ತರಬೇತುದಾರರು ಫೈಬರ್‍ಕಾರ್ಬನ್‍ ದೋಟಿ ಬಳಸಿ ಅಡಿಕೆಕೊಯ್ಲು ಮತ್ತು ಸಿಂಪಡಣೆ ಮಾಡಲು ಕಲಿಸಲಿದ್ದಾರೆ. ತರಬೇತಿಯಲ್ಲಿ ಒಟ್ಟು 20 ಮಂದಿಗೆ ಮಾತ್ರ ಅವಕಾಶ ಇರುತ್ತದೆ. ಶಿಬಿರದ ಅವಧಿಯಲ್ಲಿಡೀ ಅಭ್ಯರ್ಥಿಗಳಿಗೆ ಶಿಬಿರ ಕೇಂದ್ರ ವಾಸ್ತವ್ಯ ಕಡ್ಡಾಯ. ಉಚಿತ ವಾಸ್ತವ್ಯ ಮತ್ತುಆಹಾರದ ಏರ್ಪಾಡು ಇದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 20.

ಮೂರು ವರ್ಷ ಹಿಂದೆ ಕ್ಯಾಂಪ್ಕೋ ಅಡಿಕೆ ಮರ ಏರಿ ಕೊಯ್ಲು – ಸಿಂಪಡಣೆ ಮಾಡಲು ಎರಡು ತರಬೇತಿ ಶಿಬಿರ ನಡೆಸಿತ್ತು. ಈ ಶಿಬಿರದಲ್ಲಿ ವಿದ್ಯೆ ಕಲಿತ ಹಲವರು ವೃತ್ತಿ ನಡೆಸುತ್ತಿದ್ದು ಬದುಕಿನಲ್ಲಿ ಪ್ರಗತಿ ಹೊಂದಿದ್ದಾರೆ. ದೋಟಿಯ ಮೂಲಕ ಕೊಯ್ಲು – ಸಿಂಪಡಣೆ ಮಾಡುವ ಕ್ರಮ ಉತ್ತರ ಕನ್ನಡದಲ್ಲಿ ಜನಪ್ರಿಯತೆ ಪಡೆಯುತ್ತಿದೆ. ಹಲವು ಹಳ್ಳಿಗಳಲ್ಲಿ ದೋಟಿ ಜಾಬ್ ವರ್ಕರುಗಳು ತಯಾರಾಗಿ ವೃತ್ತಿ ಮಾಡುತ್ತಿದ್ದಾರೆ. ಕುಮಟಾ ತಾಲೂಕಿನ ಮೂರೂರು-ಕಲ್ಲಬ್ಬೆಯಲ್ಲಿ ಕಳೆದೆರಡು ವರ್ಷಗಳಲ್ಲಿ 50ಕ್ಕೂ ಹೆಚ್ಚು ಜಾಬ್ ವರ್ಕರುಗಳು ರೂಪುಗೊಂಡು ಒಂದು ಅನನ್ಯ ಯಶೋಗಾಥೆ ಸೃಷ್ಟಿಯಾಗಿದೆ. ಈ ಮಂದಿ ವರ್ಷದ ಆರು ತಿಂಗಳ ಕಾಲ ಪ್ರತಿ ತಿಂಗಳಿಗೆ ಕನಿಷ್ಠ್ಠ 25,000 ರೂ ಆದಾಯ ಗಳಿಸುತ್ತಿದ್ದಾರೆ. ದೋಟಿ ಮೂಲಕ ಮಾಡುವ ಮರ ಗೆಲಸದಲ್ಲಿ ಅಪಾಯ ಸಾಧ್ಯತೆ ತೀರಾ ಕಡಿಮೆ ಇರುವುದು ಹೆಚ್ಚು ಹೆಚ್ಚು ಯುವಕರನ್ನು ಈ ಕೆಲಸಕ್ಕೆ ಸೆಳೆಯಹತ್ತಿದೆ.

ತರಬೇತಿಯ ಬಗ್ಗೆ ಹೆಚ್ಚಿನ ವಿವರಗಳಿಗೆ ಶಂ. ನಾ. ಖಂಡಿಗೆ( ಶಿಬಿರಾಧಿಕಾರಿ) : 99464 06321, ಈಶ್ವರ ನಾಯ್ಕ : 94493 32906 ಇವರನ್ನು ಸಂಪರ್ಕಿಸಬಹುದು.

 

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 06-10-2026 | ಕರ್ನಾಟಕದಲ್ಲಿ ಮಳೆ ಎಲ್ಲೆಲ್ಲಿ? ಅ.9 ರಿಂದ ಕರಾವಳಿಯಲ್ಲಿ ಮಳೆ ಹೆಚ್ಚಾಗುತ್ತಾ?

ಕರಾವಳಿ ಹಾಗೂ ಮಲೆನಾಡಿನ ಕೆಲವೆಡೆ ಸಂಜೆ ಗುಡುಗು ಸಹಿತ ಮಳೆಯ ಸಾಧ್ಯತೆಯಿದ್ದು, ಅ.9…

16 hours ago

ರಾಜ್ಯದಲ್ಲಿ ನೈಋತ್ಯ ಮುಂಗಾರು ಸಕ್ರಿಯ ; ಕರಾವಳಿ, ಮಲೆನಾಡು ಸೇರಿದಂತೆ ಹಲವೆಡೆ ಭಾರೀ ಮಳೆ

ಕರ್ನಾಟಕದಲ್ಲಿ ನೈಋತ್ಯ ಮುಂಗಾರು ಸಕ್ರಿಯವಾಗಿದ್ದು, ಕರಾವಳಿ ಮತ್ತು ಮಲೆನಾಡು ಸೇರಿದಂತೆ ಹಲವೆಡೆ ಉತ್ತಮ…

22 hours ago

ರಾಜ್ಯದಲ್ಲಿ ವಿದ್ಯುತ್ ಲೋಡ್‌ಶೆಡ್ಡಿಂಗ್ ಇಲ್ಲ: ಇಂಧನ ಸಚಿವ ಕೆ.ಜೆ.ಜಾರ್ಜ್

ರಾಜ್ಯದಲ್ಲಿ ಸದ್ಯ ಯಾವುದೇ ರೀತಿಯ ವಿದ್ಯುತ್ ಲೋಡ್‌ಶೆಡ್ಡಿಂಗ್ ಇಲ್ಲ ಎಂದು ಇಂಧನ ಸಚಿವ…

23 hours ago

ನವೋದಯ ವಿದ್ಯಾಲಯದ 9, 11ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ – ಅ.15 ಕೊನೆಯ ದಿನ

2027-28ನೇ ಸಾಲಿನಲ್ಲಿ ನವೋದಯ ವಿದ್ಯಾಲಯಗಳ 9 ಮತ್ತು 11ನೇ ತರಗತಿಯ ಖಾಲಿ ಸ್ಥಾನಗಳಿಗೆ…

23 hours ago

1973 ರ ಅಡಿಕೆ ಬಿಕ್ಕಟ್ಟು 2026ಕ್ಕೆ ನೀಡುವ ಎಚ್ಚರಿಕೆ ಏನು..?

1973ರ ಅಡಿಕೆ ಮಾರುಕಟ್ಟೆ ಬಿಕ್ಕಟ್ಟು ಉತ್ಪಾದನೆ ಹೆಚ್ಚಳಕ್ಕೆ ತಕ್ಕಂತೆ ಮಾರುಕಟ್ಟೆ ಹೀರಿಕೊಳ್ಳುವ ಸಾಮರ್ಥ್ಯವೂ…

1 day ago

ಹವಾಮಾನ ವರದಿ | 05-10-2026 | ಅರಬ್ಬಿ ಸಮುದ್ರದ ಮೇಲ್ಮೈ ಸುಳಿಗಾಳಿಯಿಂದ ಮಳೆ – ಅ.6 ರ ಬಳಿಕ ಏನಾಗಲಿದೆ?

ಅರಬ್ಬಿ ಸಮುದ್ರದ ಉಡುಪಿ–ದಕ್ಷಿಣ ಕನ್ನಡ ಕರಾವಳಿ ಸಮೀಪ ರೂಪುಗೊಂಡಿರುವ ಮೇಲ್ಮೈ ಸುಳಿಗಾಳಿಯಿಂದ ಕರಾವಳಿ,…

2 days ago