ಕ್ಯಾಂಪ್ಕೋ ಚಾಕಲೇಟ್‌ ಕಾರ್ಖಾನೆಯಲ್ಲಿ ವ್ಯಾಮ್ ಯಂತ್ರ ಉದ್ಘಾಟನೆ

November 16, 2022
6:53 PM

ಕ್ಯಾಂಪ್ಕೋ ಚಾಕಲೇಟು ಕಾರ್ಖಾನೆ ಪುತ್ತೂರಿನಲ್ಲಿ ನೂತನ ವ್ಯಾಮ್ ಯಂತ್ರ (ಆವಿ ಹೀರಿಕೊಳ್ಳುವ ಯಂತ್ರ) ಉದ್ಘಾಟನೆ ಕಾರ್ಯಕ್ರಮ ನಡೆಯಿತು. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ನೂತನ ಯಂತ್ರವನ್ನು ಉದ್ಘಾಟಿಸಿದರು.

Advertisement

ನೀರು ಮತ್ತು ಗಾಳಿ ಹೇಗೆ ಮನುಷ್ಯರಿಗೆ ಜೀವನಾವವಶ್ಯಕವೋ,ಅದೇ ರೀತಿ ಸರಿಯಾದ ಗುಣಮಟ್ಟದ ಶುದ್ದ ನೀರು ಮತ್ತು ಗಾಳಿ, ಆಹಾರ ಉತ್ಪಾದನೆಗೂ ಅಗತ್ಯ. ಅತ್ಯಂತ ಹೆಚ್ಚು ಉಷ್ಣತೆಯ ಸ್ಟೀಮ್ ಅನ್ನು ಉಪಯೋಗಿಸಿಕೊಂಡು ಆಹಾರೋತ್ಪನ್ನಗಳ ಉತ್ಪಾದನೆಗೆ ಸೂಕ್ತವಾದ ತಂಪು ನೀರು ಹಾಗೂ ಗಾಳಿಯನ್ನು ಉತ್ಪಾದಿಸುವ ಯಂತ್ರವೇ ವ್ಯಾಮ್.(Vapour absorpsion machine). ಆವಿಹೀರಿಕೊಳ್ಳುವ ಯಂತ್ರವು ತಂಪಾಗಿಸುವ ಪ್ರಕ್ರಿಯೆಗೆ ಅಗತ್ಯವಿರುವ ಶಕ್ತಿಯನ್ನು ಒದಗಿಸಲು ಶಾಖಮೂಲವನ್ನು ಬಳಸುವ ರೆಫ್ರಿಜಿರೇಟರ್‌ ಆಗಿದೆ. ಇದರಿಂದ, ಇಡೀ ಚಾಕಲೇಟ್ ಕಾರ್ಖಾನೆಯ ಹವಾನಿಯಂತ್ರಣಕ್ಕಾಗಿ ವಿದ್ಯುತ್ಶಕ್ತಿಯನ್ನು ಉಳಿಸುವುದರ ಮೂಲಕ ಉತ್ಪಾದನಾ ವೆಚ್ಚವನ್ನು ಕಡಿಮೆಮಾಡಬಹುದಾಗಿದೆ.

ಈ ನೂತನ ವ್ಯಾಮ್ ಯಂತ್ರ ಉದ್ಘಾಟನೆಗೂ ಮುನ್ನ  ಕೆಮ್ಮಿಂಜೆ ನಾಗೇಶ ತಂತ್ರಿಯವರು ವೈದಿಕ ಕಾರ್ಯವನ್ನು ನೆರವೇರಿಸಿದರು. ಈ ಸಂದರ್ಭ
ವೇದಿಕೆಯಲ್ಲಿ ಕ್ಯಾಂಪ್ಕೋ ಅಧ್ಯಕ್ಷರಾದ ಕಿಶೋರ್ ಕುಮಾರ್ ಕೊಡ್ಗಿ, ಉಪಾಧ್ಯಕ್ಷರಾದ ಶಂಕರ ನಾರಾಯಣ ಖಂಡಿಗೆ, ವ್ಯವಸ್ಥಾಪನಾ ನಿರ್ದೇಶಕರಾದ ಎಚ್. ಎಮ್. ಕೃಷ್ಣ ಕುಮಾರ್ ,ಕ್ಯಾಂಪ್ಕೋ ನಿರ್ದೇಶಕರುಗಳಾದ  ಕೆ ಬಾಲಕೃಷ್ಣ ರೈ, ಪದ್ಮರಾಜ್ ಪಟ್ಟಾಜೆ, ಮಹೇಶ್ ಚೌಟ, ರಾಧಾಕೃಷ್ಣ  ,ಸತ್ಯನಾರಾಯಣ ಪ್ರಸಾದ್, ಡಾ.ಜಯಪ್ರಕಾಶ್, ರಾಘವೇಂದ್ರ ಭಟ್‌ ಕೆದಿಲ,  ಮತ್ತು ಚಾಕಲೇಟ್‌ ಪ್ಯಾಕಟ್ರಿ ಎಜಿಎಂ ಶ್ಯಾಮ್ ಪ್ರಸಾದ್‌ ಉಪಸ್ಥಿತರಿದ್ದರು.

Advertisement

 

Advertisement

 

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ದೇಶದ ಜಿಡಿಪಿಯಲ್ಲಿ ಗಮನಾರ್ಹ ಪ್ರಗತಿ
August 18, 2025
2:39 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 18-08-2025 | ವಾಯುಭಾರ ಕುಸಿತದ ಮಳೆಯ ಅಬ್ಬರ | ಆ.19-20 ರಿಂದ ಮಳೆ ಕಡಿಮೆ |
August 18, 2025
12:52 PM
by: ಸಾಯಿಶೇಖರ್ ಕರಿಕಳ
ನ್ಯಾನೊ ಯೂರಿಯಾ ಬಳಕೆಯಿಂದ ಶೇಕಡಾ 80 ರಷ್ಟು ಇಳುವರಿ ಸಾಧ್ಯ
August 18, 2025
7:43 AM
by: The Rural Mirror ಸುದ್ದಿಜಾಲ
ರಾಜ್ಯದಲ್ಲಿ 17 ಸಾವಿರ ಶಿಕ್ಷಕರ ನೇಮಕಕ್ಕೆ ರಾಜ್ಯ ಸರ್ಕಾರ ಚಿಂತನೆ
August 18, 2025
7:39 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group