Advertisement
MIRROR FOCUS

ರಬ್ಬರ್‌ ಧಾರಣೆ ಇಳಿಕೆಯ ಹಾದಿ | ಬೆಂಬಲ ಬೆಲೆ ಘೋಷಿಸುವಂತೆ ಮುಖ್ಯಮಂತ್ರಿಗಳಿಗೆ ಕ್ಯಾಂಪ್ಕೋ ಮನವಿ

Share

ರಾಜ್ಯದ ಮಲೆನಾಡು ಮತ್ತು ಕರಾವಳಿ ಭಾಗದ ಹೆಚ್ಚಿನ ರೈತರು ತಮ್ಮ ಜೀವಾನಾಧಾರಕ್ಕೆ ಅಡಿಕೆಯೊಂದಿಗೆ ರಬ್ಬರ್‌ ಕೃಷಿಯನ್ನು ಅವಲಂಬಿಸಿದ್ದಾರೆ. ರಬ್ಬರಿನ ಪರ್ಯಾಯ ಕೃಷಿಯಿಂದ ರೈತರು ಆರ್ಥಿಕ ಸ್ವಾವಲಂಬನೆ ಸಾಧಿಸಲು ಸಾಧ್ಯವಾಗಿದೆ. ಈಚೆಗೆ ರಬ್ಬರ್‌ ಮಾರುಕಟ್ಟೆಯಲ್ಲಿ ಉಂಟಾದ ದರ ಕುಸಿತದ ಕಾರಣದಿಂದ ಕೃಷಿಕರಿಗೆ ಸಂಕಷ್ಟವಾಗಿದೆ. ಹೀಗಾಗಿ ಬೆಂಬಲ ಬೆಲೆಯನ್ನು ಸರ್ಕಾರ ಘೋಷಿಸಬೇಕು ಎಂದು ಕ್ಯಾಂಪ್ಕೋ ಅಧ್ಯಕ್ಷ ಕಿಶೊರ್‌ ಕುಮಾರ್‌ ಕೊಡ್ಗಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ರಬ್ಬರ್ ಬೆಳೆಗಾರರ ಮಾರುಕಟ್ಟೆ ಸಮಸ್ಯೆಯನ್ನು ನಿವಾರಿಸಲು ಮತ್ತು ರೈತರಲ್ಲಿ ಮಿಶ್ರಬೆಳೆಯ ಕೃಷಿಯನ್ನು ಪ್ರೋತ್ಸಾಹಿಸಲು ಕ್ಯಾಂಪ್ಕೋ ರಬ್ಬರ್‌ ಖರೀದಿಯನ್ನು ಮಾಡುತ್ತಿದೆ. ನೈಸರ್ಗಿಕ ರಬ್ಬರಿನ ಆಮದಿನ ಮೇಲೆ 25 ಶೇಕಡ ಮತ್ತು ಕಂಪೌಂಡ್ ರಬ್ಬರಿನ ಮೇಲೆ 10 ಶೇಕಡ ಅಮದು ಸುಂಕವಿಧಿಸಲಾಗಿದೆ. ಆದರೆ ನೈಸರ್ಗಿಕ ರಬ್ಬರ್ ವಿದೇಶದಿಂದ ಕಂಪೌಂಡ್ ರಬ್ಬರ್ ಹೆಸರಿನಲ್ಲಿ 25%‌ ನ ಬದಲು 10% ಆಮದು ಸುಂಕಪಾವತಿಸಿ ಆಮದಾಗುತ್ತಿದೆ. ಇಲ್ಲಿನ ಉತ್ಪಾದನಾ ವೆಚ್ಚಕ್ಕಿಂತ ಮಾರುಕಟ್ಟೆ ದರ ಕಡಿಮೆಯಾಗಿ ರೈತರು ಕಂಗಾಲಾಗಿದ್ದಾರೆ. ನೈಸರ್ಗಿಕ ಮತ್ತು ಕಂಪೌಂಡ್ ರಬ್ಬರ್‌ಗೆ ಏಕರೂಪ ಆಮದು ಸುಂಕ ವಿಧಿಸಲು ಕೇಂದ್ರ ಸರ್ಕಾರವನ್ನು ಒತ್ತಾಯಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ಕಿಶೋರ್‌ ಕುಮಾರ್‌ ಕೊಡ್ಗಿ ಹೇಳಿದ್ದಾರೆ.

ಈ ವರ್ಷ ಕೇರಳದಲ್ಲಿ ರಬ್ಬರ್‌  ಕೃಷಿಗೆ ಅನುಕೂಲಕರವಾದ ಹವಾಮಾನ ಇದ್ದು ಫಸಲು ಜಾಸ್ತಿಯಾಗಿ ದರ ಮತ್ತೂ ಕುಸಿಯುವ ಸಾಧ್ಯತೆಯ ಬಗ್ಗೆ ತಜ್ಞರು ಎಚ್ಚರಿಸಿದ್ದಾರೆ. ರೈತರನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಲು ಸರ್ಕಾರ ಮಾರುಕಟ್ಟೆ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರಬ್ಬರ್‌ ಖರೀದಿಸಬೇಕು. 2016 ರಲ್ಲಿ ರಬ್ಬರ್‌  ಬೋರ್ಡ್‌ ರಬ್ಬರಿನ ಉತ್ಪಾದನಾ ವೆಚ್ಚ ಕಿಲೊಗೆ 172 ರೂಪಾಯಿ ಎಂದು ಅಂದಾಜಿಸಿದೆ. ಪ್ರಸ್ತುತ ಅದು ಕಿಲೊಗೆ 250 ರೂಪಾಯಿಗೆ ತಲುಪಿದೆ. ಕರ್ನಾಟಕ ಸರ್ಕಾರವೂ ಕೇರಳ  ಮಾದರಿಯಲ್ಲೇ ರಬ್ಬರಿಗೆ ಬೆಂಬಲ ಬೆಲೆ ಘೋಷಿಸಬೇಕು . ರೈತರನ್ನು ರಕ್ಷಿಸುವ ಮೂಲಕ ಮಿಶ್ರಬೆಳೆ ಕೃಷಿಗೆ ಉತ್ತೇಜನ ನೀಡುವಂತೆ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಕ್ಯಾಂಪ್ಕೊ ಮನವಿ ಸಲ್ಲಿಸಿದೆ ಎಂದು ಕಿಶೋರ್‌ ಕುಮಾರ್‌ ಕೊಡ್ಗಿ ಹೇಳಿದ್ದಾರೆ.

ರಬ್ಬರ್‌ ಧಾರಣೆ ಇಳಿಕೆಯ ಹಾದಿಯಲ್ಲಿದೆ. ಹೀಗಾಗಿ ರಬ್ಬರ್‌ ಬೆಳೆಗಾರರಿಗೆ ಸಂಕಷ್ಟವಾಗುತ್ತಿದೆ. ಅಡಿಕೆಯ ಜೊತೆ ಪರ್ಯಾಯ ಬೆಳೆ ಅಥವಾ ಉಪಬೆಳೆಯಾಗಿ ಹಲವಾರು ಕೃಷಿಕರು ರಬ್ಬರ್‌ ಬೆಳೆಸುತ್ತಿದ್ದಾರೆ. ಈಗ ಧಾರಣೆ ಇಳಿಕೆಯಿಂದ ಸಂಕಷ್ಟವಾಗಿತ್ತಿದೆ. ಇದಕ್ಕಾಗಿ ಸರ್ಕಾರ ಬೆಂಬಲ ಬೆಲೆ ಘೋಷಿಸಬೇಕು.
– ಕಿಶೋರ್‌ ಕುಮಾರ್‌ ಕೊಡ್ಗಿ, ಅಧ್ಯಕ್ಷರು, ಕ್ಯಾಂಪ್ಕೋ
ಕಿಶೋರ್‌ ಕುಮಾರ್‌ ಕೊಡ್ಗಿ

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 07-10-2026 | ಮುಂಗಾರು ಮುಗಿದಿದೆ… ಹಿಂಗಾರು ಮಳೆಯ ಸರದಿ ಆರಂಭವಾಗುತ್ತಿದೆಯೇ?

ಕರ್ನಾಟಕದಿಂದ ನೈಋತ್ಯ ಮುಂಗಾರು ಸಂಪೂರ್ಣ ಹಿಂದೆ ಸರಿದಿದ್ದು, ಅ.11ರ ಸುಮಾರಿಗೆ ಹಿಂಗಾರು ಆರಂಭಕ್ಕೆ…

5 hours ago

ಗದಗದಲ್ಲಿ ಎಫ್‌ಎಕ್ಯೂ ಗುಣಮಟ್ಟದ ಸೂರ್ಯಕಾಂತಿ ಖರೀದಿ ; ಕ್ವಿಂಟಾಲ್‌ಗೆ ₹8,343 ಬೆಂಬಲ ಬೆಲೆ

ಗದಗ ಜಿಲ್ಲೆಯಲ್ಲಿ ಎಫ್‌ಎಕ್ಯೂ ಗುಣಮಟ್ಟದ ಸೂರ್ಯಕಾಂತಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ಜಿಲ್ಲಾಡಳಿತ ನಿರ್ಧರಿಸಿದೆ.…

11 hours ago

ಯಾದಗಿರಿಯಲ್ಲಿ ಹೆಸರುಕಾಳು, ಸೋಯಾಬೀನ್, ಸೂರ್ಯಕಾಂತಿ ಖರೀದಿ ಕೇಂದ್ರ ಆರಂಭ

ಯಾದಗಿರಿ ಜಿಲ್ಲೆಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ಹೆಸರುಕಾಳು, ಸೋಯಾಬೀನ್ ಹಾಗೂ ಸೂರ್ಯಕಾಂತಿ ಖರೀದಿಗೆ…

11 hours ago

ಕರಾವಳಿ–ಮಲೆನಾಡಿಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ; ಉದ್ಯೋಗ ಸೃಷ್ಟಿಗೆ ಸರ್ಕಾರದ ಒತ್ತು

ಕರಾವಳಿ ಮತ್ತು ಮಲೆನಾಡು ಭಾಗದ ಜನರು ಉದ್ಯೋಗಕ್ಕಾಗಿ ವಲಸೆ ಹೋಗುವುದನ್ನು ತಪ್ಪಿಸುವ ಉದ್ದೇಶದಿಂದ…

11 hours ago

ಹಾಲಿನ ದರ ಏರಿಕೆ ಕುರಿತು ಸಂಪುಟ ಸಭೆಯಲ್ಲಿ ಚರ್ಚೆ; ಪರಿಷತ್ ಚುನಾವಣೆ ಬಳಿಕ ಅಂತಿಮ ಘೋಷಣೆ

ಹಾಲಿನ ದರ ಹೆಚ್ಚಳ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ನಿರ್ಧಾರ…

11 hours ago

ಹವಾಮಾನ ವರದಿ | 06-10-2026 | ಕರ್ನಾಟಕದಲ್ಲಿ ಮಳೆ ಎಲ್ಲೆಲ್ಲಿ? ಅ.9 ರಿಂದ ಕರಾವಳಿಯಲ್ಲಿ ಮಳೆ ಹೆಚ್ಚಾಗುತ್ತಾ?

ಕರಾವಳಿ ಹಾಗೂ ಮಲೆನಾಡಿನ ಕೆಲವೆಡೆ ಸಂಜೆ ಗುಡುಗು ಸಹಿತ ಮಳೆಯ ಸಾಧ್ಯತೆಯಿದ್ದು, ಅ.9…

1 day ago