ಕ್ಯಾಂಪ್ಕೋ ವತಿಯಿಂದ ಜ.10 ರಿಂದ ವಿಟ್ಲದ ಸಿಪಿಸಿಆರ್‌ಐ ವಠಾರದಲ್ಲಿ ನಡೆಯುವ ದೋಟಿ ತರಬೇತಿ ಶಿಬಿರದ ಲಾಂಛನ ಶುಕ್ರವಾರ ಬಿಡುಗಡೆ ನಡೆಯಿತು. ಕ್ಯಾಂಪ್ಕೋ ಉಪಾಧ್ಯಕ್ಷ ಶಂ ನಾ ಖಂಡಿಗೆ ಅವರು ಕ್ಯಾಂಪ್ಕೋ ಚಾಕೋಲೇಟ್ ಪ್ಯಾಕ್ಟರಿಯಲ್ಲಿ ಬಿಡುಗಡೆಗೊಳಿಸಿದರು.
ಕ್ಯಾಂಪ್ಕೋ ನೇತೃತ್ವದಲ್ಲಿ ಅಡಿಕೆ ಪತ್ರಿಕೆ , ಸಿಪಿಸಿಆರ್‌ಐ ಹಾಗೂ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಸಹಯೋಗದೊಂದಿಗೆ ವಿಟ್ಲದ ಸಿಪಿಸಿಆರ್‌ಐ ವಠಾರದಲ್ಲಿ ಜ.10 ರಿಂದ ಮೂರು ದಿನಗಳ ಕಾಲ ದೋಟಿ ತರಬೇತಿ ಶಿಬಿರ ನಡೆಯಲಿದೆ. ಈ ಶಿಬಿರದ ಲಾಂಛನವನ್ನು ಶುಕ್ರವಾರ ಕ್ಯಾಂಪ್ಕೋ ಉಪಾಧ್ಯಕ್ಷ ಶಂ ನಾ ಖಂಡಿಗೆ ಬಿಡುಗಡೆಗೊಳಿಸಿ, ಅಡಿಕೆ ಬೆಳೆಗಾರರರಿಗೆ ಭವಿಷ್ಯದಲ್ಲಿ ದೋಟಿಯ ಮೂಲಕ ಅಡಿಕೆ ಕೊಯ್ಲು ಹಾಗೂ ಸಿಂಪಡಣಾ ಕಾರ್ಯ ನಡೆಸಬೇಕಾದ ಅನಿವಾರ್ಯತೆ ಬರಬಹುದು. ಇದಕ್ಕಾಗಿ ಈಗಲೇ ತರಬೇತಿ ಅಗತ್ಯವಿದೆ. ಹೀಗಾಗಿ ಬೆಳೆಗಾರರ ಹಿತದೃಷ್ಟಿಯಿಂದ ಕ್ಯಾಂಪ್ಕೋ ಹಾಗೂ ಸಹಯೋಗ ಸಂಸ್ಥೆಗಳು ಮುಂದಡಿ ಇರಿಸಿದೆ.ಇದೊಂದು ಮಾದರಿ ಶಿಬಿರವಾಗಿದ್ದು ಸದ್ಯ ಆಯ್ದ ಶಿಬಿರಾರ್ಥಿಗಳಿಗೆ ಈ ತರಬೇತಿ ನಡೆಯಲಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಸಹಕಾರಿ ಸಂಘಗಳು ಈ ಶಿಬಿರವನ್ನು ಮುಂದುವರಿಸಬೇಕೆಂಬುದು ಅಪೇಕ್ಷೆ.
ಈ ಸಂದರ್ಭ ಅಡಿಕೆ ಪತ್ರಿಕೆ ಸಂಪಾದಕ ಶ್ರೀಪಡ್ರೆ, ಫಾರ್ಮರ್ ಫಸ್ಟ್ ಟ್ರಸ್ಟ್ ಅಧ್ಯಕ್ಷ ಪಡಾರು ರಾಮಕೃಷ್ಣ ಭಟ್ , ಸಿಪಿಸಿಆರ್ ಐ ವಿಜ್ಞಾನಿ ಢಾ ಭವಿಷ್, ಅಡಿಕೆ ಪತ್ರಿಕೆ ಸಹಾಯಕ ಸಂಪಾದಕ ನಾ.ಕಾರಂತ ಪೆರಾಜೆ, ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಕಾರ್ಯದರ್ಶಿ ಮಹೇಶ್ ಪುಚ್ಚಪ್ಪಾಡಿ , ಕ್ಯಾಂಪ್ಕೋ ಸಿಬಂದಿ ಈಶ್ವರ ನಾಯ್ಕ್ ಉಪಸ್ಥಿತರಿದ್ದರು.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement