Advertisement
MIRROR FOCUS

ಕೇಂದ್ರ ಕೃಷಿ ಸಚಿವರನ್ನು ಭೇಟಿಯಾದ ಕ್ಯಾಂಪ್ಕೋ ನಿಯೋಗ – ಅಡಿಕೆ ಹಾನಿಕಾರಕ ಕುರಿತ ಸಂಶೋಧನೆ, ಎಲೆಚುಕ್ಕೆ ರೋಗ ನಿಯಂತ್ರಣ ಕುರಿತು ಚರ್ಚೆ

Share

ಅಡಿಕೆ ಬೆಳೆಯ ಆರೋಗ್ಯ ಸುರಕ್ಷತೆ ಹಾಗೂ ಎಲೆಚುಕ್ಕೆ ರೋಗ ನಿಯಂತ್ರಣ ಕುರಿತಂತೆ ನಡೆಯುತ್ತಿರುವ ಸಂಶೋಧನಾ ಕಾರ್ಯಗಳ ಬಗ್ಗೆ ಕ್ಯಾಂಪ್ಕೊ  ನಿಯೋಗವು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿತು.‌

ಭೇಟಿಯ ವೇಳೆ ಅಡಿಕೆಯ ಹಾನಿಕಾರಕ ಆರೋಪ ಹಾಗೂ ಅಡಿಕೆಯ ಆರೋಗ್ಯ ಸುರಕ್ಷತೆ ಕುರಿತು ಕೈಗೊಳ್ಳಲಾಗುತ್ತಿರುವ ವೈಜ್ಞಾನಿಕ ಅಧ್ಯಯನಗಳು, ಅಡಿಕೆ ಬೆಳೆಗಾರರಿಗೆ ತೊಂದರೆಯಾಗುತ್ತಿರುವ ಎಲೆಚುಕ್ಕೆ ರೋಗದ ನಿಯಂತ್ರಣ ಕ್ರಮಗಳು ಹಾಗೂ ಅಡಿಕೆ ಕೃಷಿಯ ಪ್ರಸ್ತುತ ಸವಾಲುಗಳ ಬಗ್ಗೆ ಸಚಿವರಿಗೆ ವಿವರಿಸಲಾಯಿತು.

ಈ ಸಂದರ್ಭದಲ್ಲಿ ಭಾರತ ಸರ್ಕಾರದ ತೋಟಗಾರಿಕಾ ಆಯುಕ್ತರು ಸಂಶೋಧನೆಗಾಗಿ ಅಗತ್ಯವಿರುವ ಮಾದರಿಗಳು ಮತ್ತು ಮಾಹಿತಿಯನ್ನು ಸಂಗ್ರಹಿಸುವಲ್ಲಿ ಕ್ಯಾಂಪ್ಕೋ ವಹಿಸಿರುವ ಪಾತ್ರವನ್ನು ಶ್ಲಾಘಿಸಿದರು. ಅಡಿಕೆ ಕುರಿತ ಸಂಶೋಧನೆಗಳ ಪ್ರಗತಿ ಕುರಿತು ಮಾಹಿತಿ ನೀಡಿದ ಅವರು, ಅಡಿಕೆ ನಿಷೇಧಕ್ಕೆ ಸಂಬಂಧಿಸಿದಂತೆ ವಿಶ್ವ ಆರೋಗ್ಯ ಸಂಸ್ಥೆ (WHO) ಮಟ್ಟದಲ್ಲಿ ಉಂಟಾಗಿರುವ ಆತಂಕಗಳಿಗೆ ವೈಜ್ಞಾನಿಕ ಆಧಾರಿತ ಸಂಶೋಧನೆಗಳ ಮೂಲಕ ಸಮರ್ಪಕ ಉತ್ತರ ನೀಡುವ ಭರವಸೆಯನ್ನೂ ವ್ಯಕ್ತಪಡಿಸಿದರು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ನಿಯೋಗದಲ್ಲಿ ಕ್ಯಾಂಪ್ಕೋ ಅಧ್ಯಕ್ಷ ಸತೀಶ್ಚಂದ್ರ,‌ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕ್ಯಾಂಪ್ಕೋ ವ್ಯವಸ್ಥಾಪಕ ನಿರ್ದೇಶಕ ಡಾ. ಬಿ.ವಿ. ಸತ್ಯನಾರಾಯಣ, ತೀರ್ಥಹಳ್ಳಿ ಶಾಸಕ ಹಾಗೂ ಅಡಿಕೆ ಮಹಾಮಂಡಳದ ಅಧ್ಯಕ್ಷ ಆರಗ ಜ್ಞಾನೇಂದ್ರ, ತುಮ್ಕೋಸ್  ಅಧ್ಯಕ್ಷ ಶಿವಕುಮಾರ್, ಕ್ಯಾಂಪ್ಕೋ ದೆಹಲಿ ಶಾಖಾ ವ್ಯವಸ್ಥಾಪಕ ಬಿಪಿನ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

A CAMPCO delegation led by President Sathishchandra met Union Agriculture Minister Shivraj Singh Chouhan in New Delhi and discussed ongoing research on arecanut health safety and leaf spot disease control. Government officials appreciated CAMPCO’s efforts in collecting research samples and assured scientific support to address concerns related to arecanut.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಿರರ್‌ ಡೆಸ್ಕ್

the rural mirror news

Published by
ಮಿರರ್‌ ಡೆಸ್ಕ್

Recent Posts

ತೆಂಗು–ಅಡಿಕೆ ನಡುವೆ ಏಲಕ್ಕಿ, ಮೆಣಸು, ಅರಿಶಿಣ | ತುಮಕೂರಿನಲ್ಲೂ ಬೆಳೆಗಾರರು ಪರ್ಯಾಯ ಆದಾಯದ ಕಡೆಗೆ ಹೆಜ್ಜೆ

ತೆಂಗು–ಅಡಿಕೆ ತೋಟಗಳ ನಡುವೆ ಅರಿಶಿಣ, ಏಲಕ್ಕಿ, ಮೆಣಸು ಬೆಳೆದು ತುಮಕೂರು ಜಿಲ್ಲೆಯ ರೈತರು…

16 hours ago

ಮಳೆ ಕೊರತೆ ನೀಗಿಸಲು ಕರ್ನಾಟಕದಲ್ಲಿ ಮೋಡ ಬಿತ್ತನೆ

ಮುಂಗಾರು ಮಳೆಯ ಕೊರತೆ ಎದುರಿಸುತ್ತಿರುವ ರಾಜ್ಯದ ಹಲವು ಭಾಗಗಳಲ್ಲಿ ಮಳೆ ಹೆಚ್ಚಿಸಲು ಸರ್ಕಾರ…

16 hours ago

ಕಸ್ತೂರಿ ರಂಗನ್ ವರದಿ ಜಾರಿಗೆ ಅವಕಾಶವಿಲ್ಲ

ಕಸ್ತೂರಿ ರಂಗನ್ ವರದಿ ಜಾರಿಗೆ ಕರ್ನಾಟಕ ಸರ್ಕಾರ ಅವಕಾಶ ನೀಡುವುದಿಲ್ಲ ಎಂದು ಶಿಕ್ಷಣ…

17 hours ago

ಪ್ರತೀ ವರ್ಷ “ಕ್ಲೈಮೇಟ್ ರಿಪೋರ್ಟ್ ಕಾರ್ಡ್” ಏಕೆ ಬೇಕು..? ನಮ್ಮ ನಗರ-ಹಳ್ಳಿಗಳು ಹವಾಮಾನ ಬದಲಾವಣೆಗೆ ಎಷ್ಟು ಸಿದ್ಧ?

ಭಾರತದ 126 ಪ್ರಮುಖ ನಗರಗಳ ಹವಾಮಾನ ಸಿದ್ಧತೆಯನ್ನು ಅಳೆಯಲಾಗಿದ್ದರೂ, 2021ರ ಮೌಲ್ಯಮಾಪನದಲ್ಲಿ ರಾಷ್ಟ್ರೀಯ…

1 day ago

ಭಾರತದ ಕಾಫಿಗೆ ಜಾಗತಿಕ ಬೇಡಿಕೆ ಹೆಚ್ಚಳ : ‘ಇಂಡಿ ಕಾಫಿ’ಗೆ ಹೊಸ ಬ್ರ್ಯಾಂಡ್‌ ಒತ್ತು

ಭಾರತದ ಕಾಫಿ ರಫ್ತು ಗಳಿಕೆ 2021-22ರ ಸುಮಾರು 1 ಶತಕೋಟಿ ಡಾಲರ್‌ನಿಂದ 2025-26ರಲ್ಲಿ…

1 day ago

ಕಸವೆಂದು ಎಸೆಯುವ ಮೀನಿನ ಮುಳ್ಳು–ಹುರುಪೆಯಲ್ಲಿ ‘ಸಂಜೀವಿನಿ’!

ಮೀನಿನ ಮುಳ್ಳು ಮತ್ತು ಹುರುಪೆಯನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ಹಲ್ಲುಗಳ ಪುನರ್ ನಿರ್ಮಾಣ ಹಾಗೂ…

1 day ago