Advertisement
MIRROR FOCUS

ಉತ್ತರ ಪ್ರದೇಶದಲ್ಲಿ ಅಡಿಕೆ ಮೇಲಿನ ಮಂಡಿ ತೆರಿಗೆ ರದ್ದುಪಡಿಸಿ – ಯೋಗಿ ಆದಿತ್ಯನಾಥ್‌ಗೆ ಕ್ಯಾಂಪ್ಕೊ ಮನವಿ

Share

ಅಡಿಕೆ ಬೆಳೆಗಾರರು ಮತ್ತು ಸಹಕಾರ ಸಂಸ್ಥೆಗಳ ಹಿತದೃಷ್ಟಿಯಿಂದ ಉತ್ತರ ಪ್ರದೇಶದಲ್ಲಿ ಅಡಿಕೆ ವ್ಯಾಪಾರದ ಮೇಲೆ ವಿಧಿಸಲಾಗುತ್ತಿರುವ ಮಂಡಿ ತೆರಿಗೆಯನ್ನು ರದ್ದುಗೊಳಿಸುವಂತೆ ಕ್ಯಾಂಪ್ಕೊ ನಿಯೋಗವು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಮನವಿ ಮಾಡಿದೆ.

ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ. ಬಿ.ವಿ. ಸತ್ಯನಾರಾಯಣ ಅವರ ನೇತೃತ್ವದ ನಿಯೋಗವು ಲಕ್ನೋದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾಗಿ ಅಡಿಕೆ ಬೆಳೆಗಾರರು ಹಾಗೂ ಸಹಕಾರ ಸಂಸ್ಥೆಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ವಿವರವಾದ ಚರ್ಚೆ ನಡೆಸಿತು.

ಉತ್ತರ ಪ್ರದೇಶದಲ್ಲಿ ಅಡಿಕೆ ವ್ಯಾಪಾರದ ಮೇಲೆ ವಿಧಿಸಲಾಗುತ್ತಿರುವ ಮಂಡಿ ತೆರಿಗೆಯಿಂದ ಸಹಕಾರ ಸಂಸ್ಥೆಗಳು ತೀವ್ರ ಸಂಕಷ್ಟ ಅನುಭವಿಸುತ್ತಿರುವುದನ್ನು ನಿಯೋಗವು ಮುಖ್ಯಮಂತ್ರಿಗಳ ಗಮನಕ್ಕೆ ತಂದಿತು. ಸುಮಾರು 1.5 ಲಕ್ಷಕ್ಕೂ ಅಧಿಕ ರೈತ ಸದಸ್ಯರನ್ನು ಹೊಂದಿರುವ ಬಹು-ರಾಜ್ಯ ಸಹಕಾರ ಸಂಸ್ಥೆಯಾದ ಕ್ಯಾಂಪ್ಕೊಗೆ ಪ್ರಸ್ತುತ ತೆರಿಗೆ ವ್ಯವಸ್ಥೆಯಿಂದ ಹೆಚ್ಚುವರಿ ಆರ್ಥಿಕ ಹೊರೆ ಉಂಟಾಗುತ್ತಿದೆ ಎಂದು ತಿಳಿಸಲಾಯಿತು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಕರ್ನಾಟಕದಲ್ಲಿ ಅಡಿಕೆ ಖರೀದಿಸುವಾಗಲೇ ಎಪಿಎಂಸಿ ಸೆಸ್ ಅಥವಾ ಮಾರುಕಟ್ಟೆ ಶುಲ್ಕ ಪಾವತಿಸಲಾಗುತ್ತದೆ. ಇದೇ ಅಡಿಕೆಗೆ ಉತ್ತರ ಪ್ರದೇಶದಲ್ಲಿ ಮತ್ತೆ ಮಂಡಿ ತೆರಿಗೆ ವಿಧಿಸಲಾಗುತ್ತಿರುವುದರಿಂದ ಒಂದೇ ಕೃಷಿ ಉತ್ಪನ್ನದ ಮೇಲೆ ಎರಡು ಬಾರಿ ಮಾರುಕಟ್ಟೆ ಶುಲ್ಕದ ಹೊರೆ ಬೀಳುತ್ತಿದೆ ಎಂದು ಕ್ಯಾಂಪ್ಕೊ ಪ್ರತಿಪಾದಿಸಿತು.

ಈ ದ್ವಿಗುಣ ತೆರಿಗೆ ವ್ಯವಸ್ಥೆಯಿಂದ ಉತ್ತರ ಪ್ರದೇಶದಲ್ಲಿನ ವ್ಯಾಪಾರ ಚಟುವಟಿಕೆಗಳಿಗೆ ಹಿನ್ನಡೆಯಾಗಿದ್ದು, ವಹಿವಾಟಿನಲ್ಲಿ ಗಣನೀಯ ಕುಸಿತ ಕಂಡುಬಂದಿದೆ. ಇದರ ಪರಿಣಾಮವಾಗಿ ಕಾನ್ಪುರದಲ್ಲಿದ್ದ ಕ್ಯಾಂಪ್ಕೊ ಮಾರಾಟ ಮಳಿಗೆಯನ್ನು ಮುಚ್ಚಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ನಿಯೋಗವು ಮುಖ್ಯಮಂತ್ರಿಗಳಿಗೆ ವಿವರಿಸಿತು.

ಅಡಿಕೆ ಮೇಲಿನ ಮಂಡಿ ತೆರಿಗೆಯನ್ನು ಸಂಪೂರ್ಣವಾಗಿ ರದ್ದುಗೊಳಿಸುವುದು ಅಥವಾ ಕನಿಷ್ಠ ಸಹಕಾರ ಸಂಸ್ಥೆಗಳಿಗೆ ವಿನಾಯಿತಿ ನೀಡುವಂತೆ ಕ್ಯಾಂಪ್ಕೊ ಸರ್ಕಾರವನ್ನು ಕೋರಿದೆ. ಇಂತಹ ಕ್ರಮಗಳಿಂದ ಸಹಕಾರಿ ಸಂಸ್ಥೆಗಳ ವ್ಯಾಪಾರ ಬಲಗೊಳ್ಳುವುದರ ಜೊತೆಗೆ ಲಕ್ಷಾಂತರ ರೈತರ ಹಿತಾಸಕ್ತಿ ರಕ್ಷಣೆಗೊಳ್ಳಲಿದೆ ಎಂದು ಮನವರಿಕೆ ಮಾಡಿಕೊಡಲಾಯಿತು.

ಸಕಾರಾತ್ಮಕ ಸ್ಪಂದನೆ‌ : ಕ್ಯಾಂಪ್ಕೊ ನಿಯೋಗವು ಮಂಡಿಸಿದ ವಿಷಯಗಳಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಸಹಕಾರ ಸಂಸ್ಥೆಗಳಿಗೆ ಸರ್ಕಾರವು ಅಗತ್ಯ ಬೆಂಬಲ ನೀಡಲಿದೆ ಹಾಗೂ ಸಮಸ್ಯೆಗಳನ್ನು ಸಹಾನುಭೂತಿಯಿಂದ ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಸಭೆಯ ವೇಳೆ ಯೋಗಿ ಆದಿತ್ಯನಾಥ್ ಅವರು ಕ್ಯಾಂಪ್ಕೊದ ಮೌಲ್ಯವರ್ಧಿತ ಉತ್ಪನ್ನಗಳು ಹಾಗೂ ಚಟುವಟಿಕೆಗಳ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದರು. ರೈತರ ಕಲ್ಯಾಣ, ಮೌಲ್ಯವರ್ಧನೆ ಮತ್ತು ಗ್ರಾಮೀಣ ಆರ್ಥಿಕಾಭಿವೃದ್ಧಿಗೆ ಕ್ಯಾಂಪ್ಕೊ ನೀಡುತ್ತಿರುವ ಕೊಡುಗೆಯನ್ನು ಅರಿಯಲು ಪುತ್ತೂರಿನಲ್ಲಿರುವ ಕ್ಯಾಂಪ್ಕೊ ಚಾಕೊಲೇಟ್ ಕಾರ್ಖಾನೆಗೆ ಭೇಟಿ ನೀಡುವ ಇಚ್ಛೆಯನ್ನೂ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭ ಕ್ಯಾಂಪ್ಕೊ ಲಕ್ನೋ ಶಾಖೆಯ ವ್ಯವಸ್ಥಾಪಕ ರವಿಶಂಕರ್ ಹಾಗೂ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಆಪ್ತ ಸಹಾಯಕ ಶಿವಪ್ರಸಾದ್ ಉಪಸ್ಥಿತರಿದ್ದರು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

A CAMPCO delegation led by President S.R. Sathishchandra and MD Dr. B.V. Sathyanarayana met Uttar Pradesh Chief Minister Yogi Adityanath in Lucknow and requested exemption from the mandi tax imposed on arecanut trade in the state. The delegation argued that arecanut already attracts market fees in Karnataka, and the additional tax in Uttar Pradesh creates a double burden on farmers and cooperative institutions. The Chief Minister responded positively and assured sympathetic consideration of the issue.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 21-09-2026 | ಕರಾವಳಿಯಲ್ಲಿ ಜೋರು ಮಳೆಯ ಸಾಧ್ಯತೆ ಕಡಿಮೆ

ಅರಬ್ಬಿ ಸಮುದ್ರದ ಕಡೆಯಿಂದ ಬೀಸುವ ಗಾಳಿಯ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಮುನ್ಸೂಚನೆಯಲ್ಲಿದ್ದಷ್ಟು…

52 minutes ago

ಹವಾಮಾನ ವರದಿ | 20.09.2026 |ಕರ್ನಾಟಕದಲ್ಲಿ ಸೆ.25ರವರೆಗೆ ಮಳೆಯ ಲಕ್ಷಣ: ಬಂಗಾಳಕೊಲ್ಲಿಯಲ್ಲಿ ಚಂಡಮಾರುತದ ಸಾಧ್ಯತೆ

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ ಉ ತ್ತಮ ಮಳೆಯ…

23 hours ago

ಕರ್ನಾಟಕದಲ್ಲಿ ಮತ್ತೆ ಮಳೆ ಅಬ್ಬರ: ಸೆ.22ರಿಂದ ಇನ್ನಷ್ಟು ಚುರುಕು, 7 ದಿನಗಳ ಎಚ್ಚರಿಕೆ

ಕರ್ನಾಟಕದಲ್ಲಿ ಮಳೆಯ ಚಟುವಟಿಕೆ ಮತ್ತೆ ಹೆಚ್ಚಾಗುವ ಸೂಚನೆ ದೊರೆತಿದ್ದು, ಮುಂದಿನ ಏಳು ದಿನಗಳ…

1 day ago

ತೆಂಗಿನಕಾಯಿ ರಫ್ತಿನಲ್ಲಿ ಭಾರತ ಶೇ.62ರಷ್ಟು ಏರಿಕೆ

ಭಾರತದ ತೆಂಗಿನಕಾಯಿ ರಫ್ತು ಮೌಲ್ಯ ಒಂದೇ ವರ್ಷದಲ್ಲಿ ಶೇ.62ರಷ್ಟು ಏರಿಕೆಯಾಗಿ ₹7,038 ಕೋಟಿಗೆ…

2 days ago

ಸಮುದ್ರ ಮಾರ್ಗದಲ್ಲಿ ಅಡಿಕೆ ಸಾಗಾಟ : ಒಡಿಶಾದ ಬಾಲಸೋರ್‌ನಲ್ಲಿ ₹2 ಕೋಟಿಗೂ ಅಧಿಕ ಅಡಿಕೆ ವಶ- ಅಡಿಕೆ ಜಾಲದ ಹಿಂದೆ ಬಿದ್ದಿರುವ ಪೊಲೀಸರು

ಒಡಿಶಾದ ಬಾಲಸೋರ್‌ನಲ್ಲಿ ಸಮುದ್ರ ಮಾರ್ಗದ ಮೂಲಕ ಅಡಿಕೆ ಸಾಗಾಟದ ಹಲವು ಪ್ರಕರಣಗಳು ಪತ್ತೆಯಾಗಿದ್ದು,…

2 days ago

ಹವಾಮಾನ ವರದಿ | 19-09-2026 | ಸೆ.22 ರಿಂದ ಮಳೆ ಹೆಚ್ಚಳದ ಸೂಚನೆ – ಬಂಗಾಳಕೊಲ್ಲಿಯ ವಾಯುಭಾರ ಕುಸಿತದ ಪರಿಣಾಮ

ಕರ್ನಾಟಕದ ಹಲವು ಭಾಗಗಳಲ್ಲಿ ಮಳೆ ಮುಂದುವರಿಯುವ ಸೂಚನೆ ಇದ್ದು, ಸೆ.22ರಿಂದ ಕರಾವಳಿ–ಮಲೆನಾಡಿನಲ್ಲಿ ಮಳೆ…

2 days ago